AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಫೋಟೋ ಇಟ್ಟುಕೊಂಡು ಮಹಿಳೆಗೆ ಬ್ಲಾಕ್‌ಮೇಲ್: ಟ್ಯಾಟೂ ಆರ್ಟಿಸ್ಟ್ ಅರ್ಜುನ್ ವಿರುದ್ಧ ಎಫ್‌ಐಆರ್

ಟ್ಯಾಟೂ ಹಾಕಿಸಿಕೊಳ್ಳಲು ಬಂದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಹಂತಹಂತವಾಗಿ ಸುಮಾರು 09 ಲಕ್ಷ ರೂ ಸುಲಿಗೆ ಮಾಡಿರುವ ಆರೋಪದ ಮೇಲೆ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಅಲಿಯಾಸ್ ಟ್ಯಾಟೂ ಘೋಸ್ಟ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಖಾಸಗಿ ಫೋಟೋ ಇಟ್ಟುಕೊಂಡು ಮಹಿಳೆಗೆ ಬ್ಲಾಕ್‌ಮೇಲ್: ಟ್ಯಾಟೂ ಆರ್ಟಿಸ್ಟ್ ಅರ್ಜುನ್ ವಿರುದ್ಧ ಎಫ್‌ಐಆರ್
ಪ್ರಾತಿನಿಧಿಕ ಚಿತ್ರImage Credit source: Getty images
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Sep 25, 2026 | 3:35 PM

Share

ಬೆಂಗಳೂರು, ಸೆಪ್ಟೆಂಬರ್​​ 25: ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ 9 ಲಕ್ಷ ರೂ ಸುಲಿಗೆ ಮಾಡಿರುವ ಆರೋಪ ಹಿನ್ನೆಲೆ ಅರ್ಜುನ್ ಅಲಿಯಾಸ್ ಟ್ಯಾಟೊ ಘೋಸ್ಟ್​ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.​ ಟ್ಯಾಟೊ ಹಾಕಿಸಿಕೊಳ್ಳಲು ಬಂದಿದ್ದ ಮಹಿಳೆ ಜೊತೆ ಸ್ನೇಹ ಬೆಳಸಿ ಬಳಿಕ ಬ್ಲ್ಯಾಕ್​ಮೇಲ್​ ಮಾಡಿರುವ​ ಆರೋಪ ಕೇಳಿಬಂದಿದೆ. ಇದೀಗ ಸಂತ್ರಸ್ತ ಮಹಿಳೆ ನೀಡಿದ ದೂರಿನ ಅನ್ವಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅರ್ಜುನ್ ವಿರುದ್ಧ ಎಫ್​ಐಆರ್​​​ ದಾಖಲಾಗಿದೆ.

ನಡೆದಿದ್ದೇನು?

ಸಂತ್ರಸ್ತ ಮಹಿಳೆ ಹೇರೊಹಳ್ಳಿ ಬಳಿ ಇರುವ ಅಚ್ಚು ಕೆಫೆ ಅಂಗಡಿಯನ್ನು ಇಟ್ಟುಕೊಂಡು ಜೀವನ ಮಾಡಿಕೊಂಡಿದ್ದರು. ಹೀಗಿರುವಾಗ ಸುಮಾರು 2 ವರ್ಷಗಳ ಹಿಂದೆ ಮುದ್ದಿನಪಾಳ್ಯದಲ್ಲಿರುವ ಶ್ರೀ ಸಾಯಿ ಆರ್ಟ್ಸ್ ಎಂಬ ಅಂಗಡಿಯಲ್ಲಿ ಟ್ಯಾಟೊ ಹಾಕಿಸಿಕೊಳ್ಳಲು ಹೋದಾಗ ಅಂಗಡಿಯ ಮಾಲೀಕ ಅರ್ಜುನ್​​​ನ ಪರಿಚಯವಾಗಿದೆ. ನಂತರ ದಿನ ಕಳೆದಂತೆ ಇಬ್ಬರ ನಡುವೆ ಪರಿಚಯ ಸ್ನೇಹವಾಗುತ್ತದೆ. ಸಂತ್ರಸ್ತೆಯ ಗಂಡ ಮರಣ ಹೊಂದಿರುವ ವಿಚಾರ ತಿಳಿದು ಬಾಳು ಕೊಡುತ್ತೇನೆ ಎಂದಿದ್ದ ಟ್ಯಾಟೊ ಘೋಸ್ಟ್.

ಇದನ್ನೂ ಓದಿ: ಸ್ನ್ಯಾಪ್ ಚಾಟ್‌ನಲ್ಲಿ ಯುವತಿಗೆ ಗಾಳ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್​​ ಮೇಲ್​; ಪೀಕಿದ್ದು 40 ಲಕ್ಷ ಹಣ, 2 ಕೆಜಿ ಚಿನ್ನ!

ಮದುವೆಯಾಗುತ್ತೇನೆಂದು ನಂಬಿಸಿ ಮಹಿಳೆ ಜೊತೆ ಸಲುಗೆಯಿಂದ ಇದ್ದ. ಆ ಸಮಯದಲ್ಲಿ ವೈಯಕ್ತಿಕ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ತದನಂತರ 2024ನೇ ನವೆಂಬರ್​ನಲ್ಲಿ ಅರ್ಜುನ್​​ ಹಣ ಬೇಕೆಂದಿದ್ದಾನೆ. ಆಗ ಮಹಿಳೆ ಹಣವಿಲ್ಲವೆಂದಾಗ ಆತ ತನ್ನ ಬಳಿ ಇದ್ದ ವೈಯಕ್ತಿಕ ಫೋಟೋಗಳನ್ನು ತೋರಿಸಿ, ಹಣ ಕೊಡದಿದ್ದರೆ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುವುದಾಗಿ ಹೆದರಿಸಿ ಹಂತ-ಹಂತವಾಗಿ ಇಲ್ಲಿಯವರೆಗೂ ಒಟ್ಟು ಸುಮಾರು 09 ಲಕ್ಷ ರೂ ಪಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ಇದೀಗ ಮತ್ತೆ ಇನ್ನು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಕೊಡಲು ನಿರಾಕರಿಸಿರುವ ಮಹಿಳೆ ಆತನ ಸಹವಾಸದಿಂದ ದೂರವಾಗಿದ್ದಾರೆ.

LIVE TV

ಅವಾಚ್ಯ ಶಬ್ದಗಳಿಂದ ನಿಂದನೆ: ಮನೆಗೆ ನುಗ್ಗಿ ಹಲ್ಲೆ 

ಇನ್ನು ಆತನ ಫೋನ್​​ ಕರೆ ಸ್ವೀಕರಿಸದ ಕಾರಣ ಮಹಿಳೆ ಮನೆಗೆ ನುಗ್ಗಿ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿರುವ ಆರೋಪವು ಕೇಳಿಬಂದಿದ್ದು, ನಿನಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ಹಲ್ಲೆ ಕೂಡ ಮಾಡಿದ್ದಾನೆ. ಇನ್ನು ಮುಂದೆ ನಾನು ಕೇಳಿದಾಗೆಲ್ಲಾ ಹಣ ಕೊಡಬೇಕು, ಇಲ್ಲದಿದ್ದರೆ ನಿನ್ನ ಖಾಸಗಿ ಫೋಟೋಗಳನ್ನು ನಿನ್ನ ಅತ್ತೆ-ಮಾವ ಮತ್ತು ಇತರರಿಗೆ ತೋರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಹಲವು ಮಹಿಳೆಯರಿಗೆ ಬ್ಲ್ಯಾಕ್​ಮೇಲ್ ಮಾಡಿ ಲೈಂಗಿಕ ದೌರ್ಜನ್ಯ: ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್​​

ತನಗೆ ಪೊಲೀಸರು ಮತ್ತು ಸ್ಥಳಿಯ ರಾಜಕೀಯ ವ್ಯಕ್ತಿಗಳ ಪರಿಚಯವಿದ್ದು, ನೀನು ನನಗೆ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ನಿನಗೆ ಏನು ಬೇಕಾದರೂ ಮಾಡುತ್ತೇನೆಂದು ಧಮ್ಮಿ ಹಾಕಿದ್ದಾನೆ. ಹಾಗಾಗಿ ಅರ್ಜುನ್ ಅಲಿಯಾಸ್​ಟ್ಯಾಟೊ ಘೋಸ್ಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:34 pm, Fri, 25 September 26

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More