AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್ – ಚಳಿಗಾಲ ಆರಂಭದಲ್ಲಿಯೇ ಮೂಳೆ ಕೊರೆಯುವ ಚಳಿ ದಾಖಲು, ಮುಂದಿನ ದಿನಗಳಲ್ಲಿ ಹೇಗೋ?

ಚಳಿಗಾಲದ ಎಫೆಕ್ಟ್ ಬೀದರ್ ನಗರ ಸಂಪೂರ್ಣ ಬದಲಾಗಿ ಹೋಗಿದ್ದು ನಸುಕಿನ ಜಾವ ಜನರು ಓಡಾಡದಂತಾಗಿದೆ. ಗಡೀ ಜಿಲ್ಲೆ ಜನರಿಗೆ ಊಟಿಯಲ್ಲಿನ ಮಂಜಿನ ಅನುಭವ ಆಗುತ್ತಿದ್ದು ನಗರದ ಪ್ರಕೃತಿ ಸೌಂದರ್ಯಕ್ಕೆ ಇಲ್ಲಿನ ಜನರೇ ಫಿದಾ ಆಗಿ ಹೋಗಿದ್ದಾರೆ.

ಬೀದರ್ - ಚಳಿಗಾಲ ಆರಂಭದಲ್ಲಿಯೇ ಮೂಳೆ ಕೊರೆಯುವ ಚಳಿ ದಾಖಲು, ಮುಂದಿನ ದಿನಗಳಲ್ಲಿ ಹೇಗೋ?
ಚಳಿಗಾಲ ಆರಂಭದಲ್ಲಿಯೇ ಮೂಳೆ ಕೊರೆಯುವ ಚಳಿ ದಾಖಲು
ಸುರೇಶ್ ನಾಯಕ್
| Edited By: ಸಾಧು ಶ್ರೀನಾಥ್​|

Updated on: Dec 22, 2023 | 10:32 AM

Share

ಸದಾಕಾಲ ಬಿಸಿಲಿನ ಕಾವು ನೋಡುತ್ತಿದ್ದ ಆ ಜಿಲ್ಲೆಯ ಜನರು ಮೈಕೊರೆಯುವ ಥಂಡಿಗೆ ಥಂಢಾ ಹೊಡೆದಿದ್ದಾರೆ. ಕಳೆದೊಂದು ವಾರದಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಜನರು ಮನೆಯಿಂದಲೇ ಹೊರಬಾರದಂತಾಗಿದೆ. ಜನ ಟೋಪಿ, ಸ್ವೆಟ್ಟರ್‌, ಜರ್ಕಿನ್‌ ಹಾಕಿಕೊಂಡೇ ಮನೆಯಿಂದ ಹೊರ ಬರುತ್ತಿದ್ದಾರೆ. ಚಳಿಗೆ ನಲುಗಿದ ಗಡಿ ಜಲ್ಲೆ ಬೀದರ್ ನ ಜನ…ಕಳೆದೊಂದು ವಾರದಿಂದ ದಾಖಲಾಗುತ್ತಿದೆ 12 ರಿಂದ 13 ಡಿಗ್ರಿ ಸೆಲ್ಸಿಯಸ್. ಶೀತಗಾಳಿ ಮಿಶ್ರಿತ ವಾತಾವರಣದಿಂದ ಜನ ಹೈರಾಣು, ಇನ್ನೂ ಕೆಲವಾರು ದಿನ ಹೀಗೆಯೇ ಇರಲಿದೆಯಂತೆ ಮೈಕೊರೆಯುವ ಚಳಿ.

ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜಿಲ್ಲೆಯ ಜನರ ಜೀವನ ಶೈಲಿಯನ್ನೇ ಈಗ ಬದಲಾಯಿಸಿದ್ದು ದಿನವಿಡೀ ಚಳಿಯ ಅನುಭವ ಹೆಚ್ಚಾಗಿದೆ. ಹಿಂದೆಂದೂ ಕಂಡು ಕೇಳರಿಯದ ಚಳಿಗೆ ಮನೆಯಿಂದ ಜನ ಹೊರಬರುತ್ತಿಲ್ಲ. ಹೌದು ಎರಡು ರಾಜ್ಯಗಳ ಗಡಿ ಹಂಚಿಕೊಂಡಿರು ಗಡಿ ಜಿಲ್ಲೆ ಬೀದರ್‌ನಲ್ಲೀಗ ಮೈ ಕೊರೆಯುವ ಚಳಿ. ಬೆಳಗ್ಗೆ ಬೇಗ ಏಳಲೂ ಬಿಡದಷ್ಟು ಥಂಡಿ ವಾತಾವರಣ. ಕಳೆದ ನಾಲ್ಕು ದಿನದಿಂದ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್‌ ವರೆಗೆ ತಾಪಮಾನ ದಾಖಲಾಗುತ್ತಿದೆ.

ಚಳಿಗಾಲ ಆರಂಭದಲ್ಲಿಯೇ ಇಷ್ಟು ಪ್ರಮಾಣದಲ್ಲಿ ಚಳಿ ದಾಖಲಾಗುತ್ತಿರುವುದು ಮುಂದೆ ಹೇಗೆ ಅಂತಾ ಜನ ಚಿಂತೆಯಲ್ಲಿದ್ದಾರೆ. ರಾಜ್ಯದಲ್ಲಿ ಈ ಸಲ ಮಳೆಯ ಕೊರೆತೆ ಇತ್ತು ಆದರೆ ಬೀದರ್ ನಲ್ಲಿ ಮಾತ್ರ ವಾಡಿಕೆಯಷ್ಟು ಮಳೆಯಾಗಿದ್ದು ಜಿಲ್ಲೆಯ ಏಕೈಕ ಕಾರಂಜಾ ಡ್ಯಾಂ ಕೂಡಾ ತುಂಬಿದೆ. ಇದರ ಜೊತೆಗೆ ಕೆರೆಗಳಲ್ಲಿಯೂ ನೀರು ಇದೆ. ಹೀಗಾಗಿ ಮೈ ನಡುಗಿಸುವ ಚಳಿ ಶುರುವಾಗಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಮಕ್ಕಳು ಹೊರಗಡಗೆ ಸ್ವೆಟ್ಟರ್‌ ಇಲ್ಲದೆ ಹೋಗಲಾಗುತ್ತಿಲ್ಲ. ಜನರೂ ಟೋಪಿ, ಸ್ವೆಟ್ಟರ್‌, ಜರ್ಕಿನ್‌ ಹಾಕಿಕೊಂಡೇ ಮನೆಯಿಂದ ಹೊರ ಬರುತ್ತಿದ್ದಾರೆ. ಸಂಜೆ ವೇಳೆಯೂ ಸ್ವೆಟ್ಟರ್‌ ಇಲ್ಲದೆ ಮನೆಯಿಂದ ಹೊರ ಬಾರದಂತಹ ವಾತಾವರಣ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ಜಾಸ್ತಿಯಿದ್ದು ಈ ಚಳಿ ಓಲ್ಡ್ ಏಜ್ ನವರಿಗೆ ಸ್ವಲ್ಪ ತೊಂದರೆಕೊಡುತ್ತಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಅತಿಯಾದ ಮೈ ಕೊರೆಯುವ ವಾತಾವರಣದಿಂದ ಕೆಲಸಕ್ಕೆ ತೆರಳುವ ಸ್ಥಳೀಯರಿಗೆ, ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ. ಚುಮುಚುಮು ಚಳಿಗೆ ಮನೆ ಬಿಟ್ಟು ಹೊರ ಬಾರದ ನಗರ ಪ್ರದೇಶದ ಜನ ಚಳಿಗೆ 9 ಗಂಟೆಯ ಒಳಗಡೆ ಗೂಡು ಸೇರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ದಟ್ಟ ಇಬ್ಬನಿಯಿಂದಾಗಿ ಬೈಕ್ ಸವಾರರು, ವ್ಯಾಯಾಮ ಮಾಡುವರು ಸೇರಿದಂತೆ ಜನರು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ.

ಚಳಿಗೆ ಜನರು ರಸ್ತೆ ಬದಿ ಬೆಂಕಿ ಕಾಯಿಸುತ್ತ ಕುಳಿತಿರುವ ದೃಶ್ಯ ಈಗ ಕಂಡುಬರುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಒಂದೆರಡು ದಿನದಲ್ಲಿ ಚಳಿಯ ಪ್ರಮಾಣ ಏರಿಕೆಯಾಗಿದೆ. ಜನರು ಈ ಚಳಿಗೆ ನಡುಗುತ್ತಿದ್ದು, ಚಳಿ ಕಡಿಮೆ ಮಾಡಿಕೊಳ್ಳಲು ರಸ್ತೆ ಬದಿ ಬೆಂಕಿ ಕಾಯಿಸುತ್ತಿದ್ದಾರೆ. ಮಳೆರಾಯನ ಶಾಪದಿಂದ ಮಳೆಯಿಲ್ಲದೆ ಕೊರಗುತ್ತಿದ್ದ ಜಿಲ್ಲೆಯ ಜನರು ಈ ವರ್ಷ ಬರಪುರ ಮಳೆಯಾಗಿದೆ. ಇದರ ಜೊತೆಗೆ ಕಳೆದ ಎರಡು ದಿನದಿಂದ ಚಳಿಯಿಂದ ನಡುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಆಗಾಗ ಬಿಳುವ ದಟ್ಟವಾದ ಇಬ್ಬನಿಯಿಂದಲೂ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಚಳಿಗಾಲ ಆರಂಭದಲ್ಲಿಯೇ ಇಷ್ಟೂ ಪ್ರಮಾಣದ ಚಳಿ ಕಂಡು ಬಂದಿದ್ದು, ಇದೀಗ ಜಿಲ್ಲೆಯ ವಿವಿಧೆಡೆ ಕನಿಷ್ಠ ತಾಪಮಾನಕ್ಕೆ ಇಳಿಯುತ್ತಿದೆ. ಇದು ಚಳಿಯ ಆರಂಭವಷ್ಟೇ. ಡಿಸೆಂಬರ್‌ ಅಂತ್ಯ ಅಥವಾ ಜನವರಿ ತಿಂಗಳ ಮೊದಲ ವಾರದಲ್ಲಿ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಲಿದೆ. ಈ ಬಾರಿ ಮಳೆ ಕಡಿಮೆ ಇರುವುದರಿಂದ ಸದ್ಯಕ್ಕೆ ಅಂದುಕೊಂಡಷ್ಟು ಚಳಿ ಇಲ್ಲ. ಡಿಸೆಂಬರ್‌ 25ರ ನಂತರ ಚಳಿ ಹೆಚ್ಚಿಗೆ ಇರಲಿದೆ ಎಂದು ಬಸವರಾಜ್‌ ಬಿರಾದಾರ್‌, ಹವಾಮಾನ ತಜ್ಞ, ಕೃಷಿ ಸಂಶೋಧನಾ ಕೇಂದ್ರ ಹಳ್ಳದಕೇರಿ, ಬೀದರ್‌ ತಿಳಿಸಿದ್ದಾರೆ.

ಚಳಿಗಾಲದ ಎಫೆಕ್ಟ್ ಬೀದರ್ ನಗರ ಸಂಪೂರ್ಣ ಬದಲಾಗಿ ಹೋಗಿದ್ದು ನಸುಕಿನ ಜಾವ ಜನರು ಓಡಾಡದಂತಾಗಿದೆ. ಗಡೀ ಜಿಲ್ಲೆ ಜನರಿಗೆ ಕೆಲವೂ ಸಲ ಊಟಿಯಲ್ಲಿನ ಮಂಜಿನ ಅನುಭವ ಆಗುತ್ತಿದ್ದು ನಗರದ ಪ್ರಕೃತಿ ಸೌಂದರ್ಯಕ್ಕೆ ಇಲ್ಲಿನ ಜನರೇ ಫಿದಾ ಆಗಿ ಹೋಗಿದ್ದಾರೆ. ಇನ್ನೂ ಈ ಮೈಕೊರೆಯುವ ಚಳಿಯಲ್ಲಿ ಬೆಳಗಿನ ವಾತಾವರಣದಲ್ಲಿ ವಾಕಿಂಗ್ ಹೋಗುವವರು ತುಂಬಾನೆ ಖುಷಿ ಪಡುತ್ತಿದ್ರೆ, ಮಂಜಿನ ನಡುವೆ ಮಕ್ಕಳು ಸೈಕಲ್ ಮೇಲೆ ಹೋಗುತ್ತಿದ್ದರೆ ಅದರ ಮಜವೇ ಬ್ಯಾರೆ ಅನ್ನುತ್ತಿದ್ದಾರೆ ಇಲ್ಲಿನ ಜನರು.

ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸುರೇಶ್ ನಾಯಕ್
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More