ಲವರ್ ಮಾತು ನಂಬಿ ಕೆಟ್ಟ ಬೀದರ್ ಮಹಿಳೆ: ಗಂಡನಿಗೆ ಡಿವೋರ್ಸ್ ನೀಡಿ ಬಂದ್ರೆ ಇತ್ತ ಪ್ರಿಯತಮನೂ ನಾಪತ್ತೆ!
ಪ್ರಿಯಕರನಿಗಾಗಿ ಗಂಡನಿಗೆ ವಿಚ್ಛೇದನ ನೀಡಿದ್ದ ಬೀದರ್‌ನ ಮಹಿಳೆಗೆ ಈಗ ಪ್ರಿಯತಮನೂ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ. ಸಂಕಷ್ಟಕ್ಕೊಳಗಾದ ಮಹಿಳೆ ಪ್ರೀತಿಸಿದವನ ಮನೆ ಎದುರೇ ಕುಳಿತು ಕಣ್ಣೀರು ಹಾಕಿದ್ದಾಳೆ. ಪ್ರಿಯತಮ ನಾಪತ್ತೆಯಾಗಿದ್ದರೆ ಆತನ ಮನೆಯವರೂ ಬೀಗ ಹಾಕಿ ಹೋಗಿದ್ದಾರೆ. ಹೀಗಾಗಿ ತನ್ನ ಜೀವಕ್ಕೆ ಏನಾದರೂ ಆದರೆ ಇವರ ಮನೆಯವರೇ ಕಾರಣ ಎಂದು ಆರೋಪಿಸಿದ್ದಾರೆ.

ಬೀದರ್, ನವೆಂಬರ್ 05: ಪ್ರೀತಿಸಿದವನಿಗಾಗಿ ತಾಳಿ ಕಟ್ಟಿದ್ದ ಗಂಡನಿಗೇ ವಿಚ್ಛೇದನ ನೀಡಿ ಬಂದಿದ್ದ ಮಹಿಳೆಗೆ ಪ್ರಿಯತಮ ಕೈಕೊಟ್ಟಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನೆಲವಾಡ ಗ್ರಾಮದಲ್ಲಿ ನಡೆದಿದೆ. ಈಗ ಅತ್ತ ಗಂಡನೂ ಇಲ್ಲ, ಇತ್ತ ಪ್ರಿಯತಮನೂ ಜೊತೆಗಿರದ ಕಾರಣ ಮಹಿಳೆಯ ಬದುಕು ಬೀದಿಪಾಲಾಗಿದೆ. ವಂಚಿಸಿದ ಯುವಕನ ಮನೆ ಬಳಿ ಬ್ಯಾಗ್ ಸಮೇತ ಬಂದಿರುವ ಮಹಿಳೆ ಕಳೆದ 10 ದಿನಗಳಿಂದ ಪ್ರಿಯತಮನ ಮನೆ ಮುಂದೆ ಹೈಡ್ರಾಮಾ ನಡೆಸುತ್ತಿದ್ದಾಳೆ.
ನಾಲ್ಕು ವರ್ಷಗಳಿಂದ ರಿಲೀಷನ್ಶಿಪ್ನಲ್ಲಿದ್ದ ಜೋಡಿ
ಮಹಿಳೆ ಸಂಗೀತಾಗೆ ಅದಾಗಲೆ ವಿವಾಹವಾಗಿತ್ತಾದರೂ ಯುವಕ ದತ್ತು ಎಂಬಾತ ನಾಲ್ಕು ವರ್ಷಗಳಿಂದ ಆಕೆಯ ಜೊತೆ ರಿಲೇಷನ್ಶಿಪ್ನಲ್ಲಿದ್ದ. ಗಂಡನಿಗೆ ವಿಚ್ಛೇದನ ನೀಡಿದರೆ ಮದುವೆಯಾಗುವುದಾಗಿ ತಿಳಿಸಿದ್ದ. ಆತನ ಮಾತು ನಂಬಿ ಗಂಡನಿಗೆ ಸಂಗೀತಾ ಡಿವೋರ್ಸ್ ನೀಡಿದ್ದಾಳೆ. ಆದರೆ ಆ ಬಳಿಕ ಮದುವೆಗೆ ಯುವಕ ದತ್ತು ನಿರಾಕರಿಸಿದ್ದಾನೆ. ಮಹಿಳೆ ತನ್ನ ಮನೆಗೆ ಬರುತ್ತಿದ್ದಂತೆ ದತ್ತು ಪರಾರಿಯಾಗಿದ್ದು, ಪತಿಗೆ ವಿಚ್ಛೇದನ ನೀಡಿ ಬಂದರೂ ಮನೆಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಈಗ ಅನ್ಯಾಯ ಮಾಡಿದ್ದಾನೆಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಎಂಟು ತಿಂಗಳಿಂದ ಸಂಬಳವಿಲ್ಲ: ನೀರು ಪೂರೈಕೆ ಬಂದ್ ಮಾಡಿ ಬೀದರ್ ಪಾಲಿಕೆ ಸಿಬ್ಬಂದಿ ಆಕ್ರೋಶ
ವಿಡಿಯೋ ಹರಿಬಿಟ್ಟ ಮಹಿಳೆ
ಇನ್ನು ತನ್ನ ಸದ್ಯದ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಮಹಿಳೆ ಸಂಗೀತಾ ಅಪ್ಲೋಡ್ ಮಾಡಿದ್ದಾರೆ. ಪ್ರಿಯತಮ ದತ್ತು ತನಗೆ ದೋಖಾ ಮಾಡಿರುವ ವಿಚಾರ ಪೊಲೀಸ್ ಠಾಣೆವರೆಗೂ ಈ ಹಿಂದೆ ಹೋಗಿತ್ತು. ಆ ವೇಳೆ ದತ್ತು ತಂದೆ ಸೇರಿ ಕುಟುಂಬಸ್ಥರು ಉಪಸ್ಥಿತರಿದ್ದರು. ಗಂಡನಿಗೆ ವಿಚ್ಛೇದನ ನೀಡಿ ಮನೆಗೆ ಬಂದು ಇರಮ್ಮ ಎಂದು ಅವರು ತಿಳಿಸಿದ್ದರು. ಈಗ ಗಂಡನಿಗೆ ವಿಚ್ಛೇದನ ನೀಡಿ ಬಂದರೆ ದತ್ತುವನ್ನು ಮನೆಯಿಂದ ಕಳುಹಿಸಿದ್ದಾರೆ. ಇವರೂ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಹೀಗಾಗಿ ತನ್ನ ಜೀವಕ್ಕೆ ಏನಾದರೂ ಆದರೆ ಪ್ರಿಯತಮನ ಮನೆಯವರೇ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:12 pm, Thu, 5 November 26




