ಕೊನೆಗೂ ಟೇಕ್ ಆಫ್ ಆಗಲಿದೆ ಬೀದರ್ ಏರ್ಪೋರ್ಟ್, ಲೋಹದ ಹಕ್ಕಿಗಳ ಹಾರಾಟಕ್ಕೆ ಸಜ್ಜು!
ಬೀದರ್: ಎಲ್ರೂ ಬ್ಯುಸಿಯಾಗಿದ್ದಾರೆ.. ಕಾಮಗಾರಿ ಭರದಿಂದ ಸಾಗಿದೆ.. ಲೋಹದ ಹಕ್ಕಿಗಳ ಕಲರವಕ್ಕೆ ಕಾಲ ಕೂಡಿ ಬಂದಿದೆ. ವಿಮಾನದಲ್ಲಿ ಒಂದ್ ಸಾರಿ ಹಾರಾಡ್ಬೇಕು. ಮೋಡದ ಮರೆಯಲ್ಲಿ ಸಾಗಿ ಎಂಜಾಯ್ ಮಾಡ್ಬೇಕು ಅನ್ನೋ ಕನಸು ಚಿಗುರೊಡೆದಿದೆ. ಫೆ.7ರಂದು ಏರ್ಪೋರ್ಟ್ಗೆ ಸಿಎಂ ಚಾಲನೆ! ಗಡಿನಾಡು ಬೀದರ್ ಜಿಲ್ಲೆಯ ಜನರ ಬಹುದಿನಗಳ ಡ್ರೀಮ್ ಅದು. ಆಗಸದಲ್ಲಿ ಸುಯ್ ಸುಯ್ ಅಂತ ವಿಮಾನಗಳ ಹಾರಾಡೋ ಕಾಲ ಸನ್ನಿಹಿತವಾಗ್ತಿದೆ. 2009 ರಲ್ಲಿ ಸಿಎಂ ಆಗಿದ್ದ ಬಿಎಸ್ವೈ ಕಮಠಾಣ ರಸ್ತೆಯ ಚಿದ್ರಿ ಸಮೀಪ 3.54 ಕೋಟಿ ವೆಚ್ಚದಲ್ಲಿ […]
ಬೀದರ್: ಎಲ್ರೂ ಬ್ಯುಸಿಯಾಗಿದ್ದಾರೆ.. ಕಾಮಗಾರಿ ಭರದಿಂದ ಸಾಗಿದೆ.. ಲೋಹದ ಹಕ್ಕಿಗಳ ಕಲರವಕ್ಕೆ ಕಾಲ ಕೂಡಿ ಬಂದಿದೆ. ವಿಮಾನದಲ್ಲಿ ಒಂದ್ ಸಾರಿ ಹಾರಾಡ್ಬೇಕು. ಮೋಡದ ಮರೆಯಲ್ಲಿ ಸಾಗಿ ಎಂಜಾಯ್ ಮಾಡ್ಬೇಕು ಅನ್ನೋ ಕನಸು ಚಿಗುರೊಡೆದಿದೆ.
ಫೆ.7ರಂದು ಏರ್ಪೋರ್ಟ್ಗೆ ಸಿಎಂ ಚಾಲನೆ! ಗಡಿನಾಡು ಬೀದರ್ ಜಿಲ್ಲೆಯ ಜನರ ಬಹುದಿನಗಳ ಡ್ರೀಮ್ ಅದು. ಆಗಸದಲ್ಲಿ ಸುಯ್ ಸುಯ್ ಅಂತ ವಿಮಾನಗಳ ಹಾರಾಡೋ ಕಾಲ ಸನ್ನಿಹಿತವಾಗ್ತಿದೆ. 2009 ರಲ್ಲಿ ಸಿಎಂ ಆಗಿದ್ದ ಬಿಎಸ್ವೈ ಕಮಠಾಣ ರಸ್ತೆಯ ಚಿದ್ರಿ ಸಮೀಪ 3.54 ಕೋಟಿ ವೆಚ್ಚದಲ್ಲಿ ಏರ್ಪೋರ್ಟ್ ಟರ್ಮಿನಲ್ಗೆ ಶಂಕುಸ್ಥಾಪನೆ ಮಾಡಿದ್ರು. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಜಿಲ್ಲೆ ಆಯ್ಕೆಯಾಗಿತ್ತು.
ಆದರೆ, ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಟರ್ಮಿನಲ್ ಹಾಳಾಗ್ತಿತ್ತು. ಇದೀಗ ಕಾಲ ಕೂಡಿ ಬಂದಿದ್ದು ಫೆಬ್ರವರಿ 7ರಂದು ಸಿಎಂ ಬಿಎಸ್ವೈ ಏರ್ಪೋರ್ಟ್ನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದ್ರಿಂದ ಬೀದರ್ ಜಿಲ್ಲೆ ಜನರು ಖುಷ್ ಆಗಿದ್ದಾರೆ.
ವಿಮಾನಗಳ ಹಾರಾಟಕ್ಕೆ ದಿನಗಣನೆ ಆರಂಭ: ಇನ್ನು, ದಶಕದ ಹಿಂದೆಯೇ ಅಧಿಕಾರಿಗಳು ರಾಜಕಾರಣಿಗಳು ಮನಸ್ಸು ಮಾಡಿದ್ರೆ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗ್ತಿರಲಿಲ್ಲ. ಏರ್ಪೋರ್ಟ್ ಟರ್ಮಿನಲ್ನಲ್ಲಿ ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಸುರಕ್ಷತಾ ಘಟಕ, ನಾಗರಿಕರ ಲಗೇಜ್ ಸ್ಕ್ಯಾನಿಂಗ್, ಟಿಕೆಟ್ ಕೌಂಟರ್ ಸೇರಿ ಸಕಲ ಸೌಲಭ್ಯ ಮಾಡಲಾಗಿತ್ತು.
ಇನ್ನೇನು ವಿಮಾನಗಳ ಹಾರಾಟ ಶುರುವಾಗ್ಬೇಕು ಅನ್ನೋವಷ್ಟರಲ್ಲಿ ಕೆಲವು ಸಮಸ್ಯೆಗಳಿಂದ ಏರ್ಪೋರ್ಟ್ ಟರ್ಮಿನಲ್ ನೆನೆಗುದಿಗೆ ಬಿದ್ದಿತ್ತು. ಇದೀಗ ಬೀದರ್ ಜಿಲ್ಲೆಯಲ್ಲಿ ವಿಮಾನಗಳ ಹಾರಾಟಕ್ಕೆ ಕಾಲ ಕೂಡಿ ಬಂದಿದೆ. ವಿಮಾನ ನಿಲ್ದಾಣದ ನಿರ್ವಹಣೆಯನ್ನ 2033 ರವರೆಗೆ ಜಿಎಂಆರ್ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ನವರು ನಿರ್ವಹಿಸಲಿದ್ದಾರಂತೆ.
Published On - 4:09 pm, Sat, 1 February 20