AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ: ರೋಗ ಗುಣಮುಖಕ್ಕೆ ಜೀವಂತ ಮೀನು ನುಂಗುವುದು, ಏನಿದರ ವಿಶೇಷ?

ಜೀವಂತ ಮೀನುಳನ್ನ ನುಂಗಲು ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದವರೆಗೂ ಜನರು ಸೇಸಿದ್ದಾರೆ. ಕರ್ನಾಟಕ ಸೇರಿದಂತೆ ಹೈದರಾಬಾದ್, ತೆಲಂಗಾಣ, ಮಹರಾಷ್ಟ್ರದಿಂದ ಬಂದಿದ್ದ ಜನರು ಮುಗಿಬಿದ್ದು ಜೀವಂತ ಮೀನುಗಳನ್ನ ಪೈಪೋಟಿಗೆ ಬಿದ್ದವರಂತೆ ನುಂಗಿ ನೀರು ಕುಡಿದರು. ಅರೆ ಇದೇನಿದು ಜೀವಂತ ಮೀನುಗಳನ್ನು ನುಂಗಿತ್ತಿರುವುದು ಏಕೆ? ಏನು ಪ್ರಯೋಜನ? ಇಲ್ಲಿದೆ ವಿವರ

ಬೀದರ: ರೋಗ ಗುಣಮುಖಕ್ಕೆ ಜೀವಂತ ಮೀನು ನುಂಗುವುದು, ಏನಿದರ ವಿಶೇಷ?
ಜೀವಂತ ಮೀನು ನುಗ್ಗುತ್ತಿರುವ ಜನ
ಸುರೇಶ ನಾಯಕ
| Edited By: |

Updated on:Jun 08, 2025 | 4:23 PM

Share

ಬೀದರ್, ಜೂನ್​ 08: ಬೀದರ್​ ನಗರದ ಓಲ್ಡ್ ಸಿಡಿ ಹಾಗೂ ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್ ಪಟ್ಣಣದಲ್ಲಿ ರವಿವಾರ (ಜೂ.08) ಜೀವಂತ ಮೀನುಗಳನ್ನು (Fish) ನುಂಗುವುದಕ್ಕಾಗಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಜೂನ್ 8, ಮಿರಗ ಮಳೆ ಮತ್ತು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಜೀವಂತ ಮೀನಿನ ಬಾಯಿಯೊಳಗೆ ಆರ್ಯುವೇದ ಔಷಧಿಯನ್ನು ಹಾಕಿ ನುಂಗಿದರೆ ಕೆಮ್ಮು, ಧಮ್ಮು, ಕಮಾಲೆ, ಅಸ್ತಮಾದಂತಹ ಖಾಯಿಲೆಗಳು ವಾಸಿಯಾಗುತ್ತೆದೆ ಎಂಬುವುದು ಜನರ ನಂಬಿಕೆಯಾಗಿದೆ.

ಈ ರೀತಿಯಾಗಿ ನೂರಾರು ವರ್ಷದಿಂದ ನಡೆದುಕೊಂಡು ಬರುತ್ತಿದೆ. ವರ್ಷದಲ್ಲಿ ಒಂದು ದಿನ ಮಾತ್ರ ಜಿವಂತ ಮೀನುಗಳನ್ನ ನುಂಗಲಾಗುತ್ತದೆ. ಶತಮಾನದಿಂದ ಇಲ್ಲಿ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ಜೂನ್ ತಿಂಗಳು ಆರಂಭದಲ್ಲಿ ಅಂದರೇ ಮಿರುಗು ಮಳೆಯಾದ ತಕ್ಷಣ, ಅಸ್ತಮಾ, ಕೆಮ್ಮು, ಕಾಮಾಲೆ ರೋಗಗಳು ಇದ್ದವರು ಇಲ್ಲಿಗೆ ಬಂದು ಜಿವಂತ ಮೀನುಗಳನ್ನ ನುಂಗಿ ತಮ್ಮ ಕಾಯಿಲೆಗಳನ್ನು ಕಡಿಮೆಮಾಡಿಕೊಂಡು ಹೋಗುತ್ತಾರೆ.

“ಬೀದರ್ ಜಿಲ್ಲೆ ಹುಮ್ನಾಬಾದ್ ಪಟ್ಟಣದ ಶರಣಪ್ಪ ಜಗದಾಳೆ ಕುಟುಂಬದವರು ಆರ್ಯುವೇದಿಕ ಔಷಧಿಯನ್ನು ಜೀವಂತ ಮೀನುಗಳ ಬಾಯಿಯಲ್ಲಿ ಹಾಕುತ್ತಾರೆ. ಬಳಿಕ, ಅಸ್ತಮಾ, ಕಾಮಾಲೆಯಂತ ರೋಗಳಿಂದ ಬಳಲುತ್ತಿರುವ ರೋಗಿಗಳಿಗೆ ನೀಡಿ, ಮೀನು ನುಂಗಿಸಿ ಕಾಯಿಲೆಯನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದ್ದಾರೆ. ವರ್ಷದಲ್ಲಿ ಒಂದು ಸಲ ಮಾತ್ರ ಇವರು ಜನರಿಗೆ ಆರ್ಯುವೇದಿಕ ಔಷಧಿಯನ್ನು ಮೀನಿನ ಬಾಯಿಯಲ್ಲಿ ಹಾಕಿ ಜೀವಂತ ಮೀನುಗಳನ್ನ ನುಂಗಿಸುತ್ತಾರೆ. ಹೀಗೇ ಜೀವಂತ ಮೀನುಗಳನ್ನ ನುಂಗಿಸುವುದರಿಂದ ಕೆಮ್ಮ, ದಮ್ಮು, ಕಾಮಾಲೆಯಂತಹ ರೋಗಿಗಳು ಒಂದೇ ವಾರದಲ್ಲಿ ಕಡಿಮೆಯಾಗತ್ತದೆ ಎಂದು ಜನರು ಕೂಡಾ ನಂಬಿಕೊಂಡಿದ್ದಾರೆ.

ಇದನ್ನೂ ಓದಿ
Image
ಬಂಜಾರ ಸಮುದಾಯದ ಟ್ರೈಬಲ್ ಪಾರ್ಕ್​ಗೆ ಗ್ರಹಣ: ಮುಗಿಯದ ಕಾಮಗಾರಿ
Image
ಬೀದರ್​ನ ಐತಿಹಾಸಿಕ ಭಾತಂಬ್ರಾ ಕೋಟೆ ಜೀರ್ಣೋದ್ಧಾರ: ಶ್ಲಾಘನೆ
Image
ಬರದ ನಾಡು ಬೀದರ್​ನಲ್ಲಿ ಶ್ರೀಗಂಧದ ಘಮ: ಹೇರಳವಾಗಿ ಬೆಳೆದು ನಿಂತ ಮರಗಳು
Image
ಈರುಳ್ಳಿ ಬೀಜ ಮಾರಾಟ ಮಾಡಿ ಕೋಟ್ಯಂತರ ರೂ ಆದಾಯ ಗಳಿಸಿದ ಬೀದರ್​ನ ರೈತ

ಜೀವಂತ ಮೀನುಗಳನ್ನು ನುಂಗುವ ಸಲುವಾಗಿ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯದಿಂದ ನೂರಾರು ಜನರು ಬರುತ್ತಾರೆ. ಮೀನುಗಳನ್ನು ನುಂಗಿ ಹೋಗುತ್ತಾರೆ. ಇಲ್ಲಿ, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮಿನುಗಳನ್ನ ನುಂಗುತ್ತಾರೆ. ಒಂದು ಇಂಚಿನ ಮೀನಿನಿಂದ ಹಿಡಿದು ಮೂರು ನಾಲ್ಕು ಇಂಚಿನ ಜೀವಂತ ಮೀನುಗಳನ್ನು ಗಂಟಲಿಗೆ ಇಟ್ಟುಕೊಂಡು ನುಂಗಿ ನೀರು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಮನಷ್ಯನ ರೋಗಗಳು ವಾಸಿಯಾಗುತ್ತವೇಂದು ಆರ್ಯವೇದಿಕ ಔಷಧಿಕೊಡುವ ಕುಟುಂಬದವರು ಹೇಳಿದ್ದಾರೆ.

ಇಲ್ಲಿನ ಇನ್ನೊಂದು ವಿಶೇಷವೆನೆಂದರೇ 3 ರಿಂದ 4ಇಂಚಿನ ಮೀನುಗಳನ್ನು ನುಂಗಿದರೂ ಯಾರೊಬ್ಬರಿಗೂ ಮೀನು ಗಂಟಲಿಗೆ ಸಿಕ್ಕಿ ಹಾಕೊಂಡ ಉದಾಹರಣೆ ಇಲ್ಲ. ಮಕ್ಕಳು ಕೂಡ ಮೀನುಗಳನ್ನು ನುಂಗಿ ಖುಷಿಪಡುತ್ತಾರೆ. ಇನ್ನೂ ಕೆಲ ಮಕ್ಕಳು ಮೀನುಗಳನ್ನ ನೋಡಿ ಹೆದರಿಕೊಂಡು ಚಿರಾಡಿ ಅತ್ತರು ಕೂಡಾ ಪಾಲಕರು ಒತ್ತಾಯ ಪೂರ್ವಕವಾಗಿ ಮಕ್ಕಳಿಗೆ ಮೀನುಗಳನ್ನ ನುಂಗಿಸುತ್ತಾರೆ.

ಇದನ್ನೂ ಓದಿ: ಸ್ವಾವಲಂಬಿ ಬದುಕಿಗೆ ಆಸರೆಯಾದ ಕೈ ಕಸೂತಿ ಕೆಲಸ: ಇತರರಿಗೂ ಕಲಿಸುವ ಮೂಲಕ ಮಾದರಿಯಾದ ಪಶ್ಚಿಮ ಬಂಗಾಳ ಮಹಿಳೆ

ಮೀನುಗಳನ್ನು ಮಾರಾಟ ಮಾಡುವ ವ್ಯಾಪರಿಗಳಿಗೂ ಕೂಡಾ ಇದು ಸುಗ್ಗಿಯಕಾಲ ಅಂತಲೇ ಹೇಳಬಹುದು. ಒಂದು ಚಿಕ್ಕ ಮೀನಿಗೆ ನೂರರಿಂದ ಎರಡು ನೂರು ರೂಪಾಯಿ ಹಣ ಪಡೆದು ಮೀನುಗಳನ್ನ ಮಾರಾಟ ಮಾಡುತ್ತಾರೆ. ಜನರು ಕೂಡ ಖಾಯಿಲೆ ಕಡಿಮೆಯಾಗುತ್ತದೆ ಅನ್ನುವ ಆಸೆಯಿಂದ ಎಷ್ಟೇ ಹಣವಾದರೂ ಕೊಟ್ಟು ಮೀನು ಖರೀದಿಸಿ, ನುಂಗಿ ತಮ್ಮ ಕಾಯಿಲೆಯನ್ನು ವಾಸಿಯಾಗುತ್ತೆ ಅಂತ ಅಂದುಕೊಂಡು ಮನೆಗೆ ಹೋಗುತ್ತಿದ್ದಾರೆ. ಇಲ್ಲಿಗೆ ಬಂದವರು ಜನರು ಕಾಯಿಲೆ ಕಡಿಮೆಯಾಗಿದೆ ಅಂತಲೇ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Sun, 8 June 25

Follow Us
Suresh Naik
Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More