Amavasya: ಶನಿವಾರ ಅಮಾವಾಸ್ಯೆ ಹಿನ್ನೆಲೆ ಬೀದರ್​ನ ಶನೇಶ್ವರ ಮಂದಿರಕ್ಕೆ ಹರಿದು ಬಂದ ಜನಸಾಗರ

ಶನಿವಾರದಂದು ಅಮಾವಾಸ್ಯೆ ಇದ್ದ ಕಾರಣ ಆ ದೇವಸ್ಥಾನಕ್ಕೆ ಇಂದು ಜನ ಸಾಗರವೆ ಹರಿದು ಬಂದಿತ್ತು. ಕರ್ನಾಟಕ, ಮಹಾರಾಷ್ಟ್ರ. ತೆಲಗಾಂಣದಿಂದಲೂ ಅಪಾರ ಪ್ರಮಾಣ ಬಕ್ತರು ಬಂದಿದ್ದರು. ಶನಿ ಮಹಾತ್ಮನಿಗೆ ಇಷ್ಟವಾದ ಪೂಜಾ ಸಾಮಗ್ರಗಳನ್ನ ಅರ್ಪಿಸಿ ಪಾಪ ಪರಿಹರಿಸು ಎಂದು ಭಕ್ತರು ಕೇಳಿಕೊಂಡರು.

Amavasya: ಶನಿವಾರ ಅಮಾವಾಸ್ಯೆ ಹಿನ್ನೆಲೆ ಬೀದರ್​ನ ಶನೇಶ್ವರ ಮಂದಿರಕ್ಕೆ ಹರಿದು ಬಂದ ಜನಸಾಗರ
ಶನೇಶ್ವರ ಮಂದಿರ
Follow us
ಸುರೇಶ ನಾಯಕ
| Updated By: ಆಯೇಷಾ ಬಾನು

Updated on: Oct 14, 2023 | 3:09 PM

ಬೀದರ್, ಅ.14: ಶನಿವಾರ ಅಮಾವಾಸ್ಯೆ (Amavasya) ಬಂದ ಹಿನ್ನೆಲೆ ಶನಿ ಮಹಾತ್ಮನ ಮಂದಿರಕ್ಕೆ (Shani Temple) ಜನ ಸಾಗರವೇ ಹರಿದು ಬರುತ್ತಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿನ ಶನಿ‌ ದೇವಾಲಯಕ್ಕೆ ಬೀದರ್ ಸೇರಿದಂತೆ ಪಕ್ಕದ ತೆಲಂಗಾಣ, ಮಹಾರಾಷ್ಟ್ರ ಹಳ್ಳಿಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಶನಿ ಮಹಾತ್ಮನಿಗೆ ಇಷ್ಟವಾದ ಪೂಜಾ ಸಾಮಗ್ರಿಗಳನ್ನು ಭಕ್ತರು ಶನಿ ದೇವರಿಗೆ ಸಮರ್ಪಿಸಿದ್ದಾರೆ.

ಹೌದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರದ ಬಳಿ ಇರುವ ಶನೇಶ್ವರ ಮಂದಿರಕ್ಕೆ ಜನಸಾಗರವೇ ಹರಿದು ಬಂದಿದ್ದು. ಇಂದು ಶನಿವಾರ ಅಮಾವಾಸ್ಯೆಯಿದ್ದ ಕಾರಣ ಶನೇಶ್ವರ ಮಂದಿರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಶನಿದೇವರ ದರ್ಶನ ಪಡೆದರು. ಜಿಲ್ಲೆಯಲ್ಲಿರುವ ಏಕೈಕ ಶನಿದೇವರ ದೇವಸ್ಥಾನ ಇದಾಗಿದ್ದು ಹೀಗಾಗಿ ಜಿಲ್ಲೆಯ ಮೂಲೇ ಮೂಲೇಯಿಂದ ಜನರು ಬಂದಿದ್ದು ಅಷ್ಟೇ ಅಲ್ಲದೇ ಪಕ್ಕದ ಆಂಧ್ರ-ಮಹಾರಾಷ್ಟ್ರದಿಂದಲೂ ಜನರು ಕೂಡಾ ಬಂದು ಶನಿದೇವರ ದರ್ಶನ ಪಡೆದು ಪುನೀತರಾದರೂ, ಆದರೇ ಈ ದೇವಸ್ಥಾನಕ್ಕೆ ಬರುವವರಿಗೆ ಕುಡಿಯುವ ನೀರು ಊಟದ ವ್ಯವಸ್ಥೆಯನ್ನ ಕೂಡಾ ಮಾಡಿದ್ದು ಭಕ್ತರು ಖುಷಿಯಿಂದಲೇ ದರ್ಶನ ಮಾಡಿ ಮನೆಗಳಿಗೆ ತೆರಳಿದರು.

special pooja in bidar shani temple over saturday amavasya

ಶನೇಶ್ವರ ಮಂದಿರ

ಇದನ್ನೂ ಓದಿ: ಇಂದು ಒಟ್ಟಿಗೇ ಸೂರ್ಯಗ್ರಹಣ- ಶನಿ ಅಮಾವಾಸ್ಯೆ: ಶನೇಶ್ವರನ ಆಶೀರ್ವಾದ ಪಡೆಯಲು ಏನು ಮಾಡಬೇಕು-ಏನು ಮಾಡಬಾರದು, ಇಲ್ಲಿದೆ ಮಾಹಿತಿ

ಇನ್ನೂರು ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಇಲ್ಲಿನ ಶನೀಶ್ವರ ದೇವಸ್ಥಾನ ಖಾನಾಪುರ ಗ್ರಾಮದ ಕಾಡಿನಲ್ಲಿದೆ. ಈ ಶನಿದೇವರ ದರ್ಶನ ಪಡೆಯಬೇಕು ಅಂದರೆ ಐನೂರ ಮೆಟ್ಟಿಲುಗಳನ್ನ ಇಳಿದುಕೊಂಡು ಈ ದೇವರ ದರ್ಶನ ಮಾಡಬೇಕು. ಇನ್ನೂ ಹಚ್ಚ ಹಸಿರಿನಿಂದ ಕೂಡಿದ ಕಾಡಿನಲ್ಲಿ ಈ ಶನಿ ದೇವಾಲಯವಿದ್ದು ವರ್ಷದ 12 ತಿಂಗಳು ಕೂಡಾ ಇಲ್ಲಿನ ಹಳ್ಳದ ನೀರು ಬತ್ತಿದ ಉದಾಹರಣೆಯಿಲ್ಲ. ಇನ್ನೂ ಶನಿದೇವಾಲಯದ ಪಕ್ಕದಲ್ಲಿಯೇ ಭಾವಿಯಿದ್ದು ಈ ಭಾವಿಯಲ್ಲಿ ಸ್ನಾನ ಮಾಡಿ ಅಥವಾ ಕೈಕಾಲು ಮುಖ ತೊಳದೆಕೊಂಡ ಶನಿದೇವರ ದರ್ಶನ ಮಾಡಬೇಕು ಅನ್ನೂವ ಪ್ರತಿಥಿಯೂ ಇಲ್ಲಿದೆ. ಇನ್ನೂ ಈ ಬಾವಿಯಲ್ಲಿನ ನೀರಿನಲ್ಲಿ ರೋಗಗಳನ್ನ ವಾಸಿಮಾಡುವ ಶಕ್ತಿಯಿದೆ ಅಂತಲೇ ಜನರು ನಂಬಿದ್ದಾರೆ. ಹೀಗಾಗಿ ಶನಿವಾರದಂದು ಅಮಾವಾಸ್ಯೆ ಬಂದರೆ ಇಲ್ಲಿನ ಶನಿದೇವರ ಆರ್ಶಿವಾದ ಪಡೆಯಲು ಜನ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಎರಡು ಶತಮಾನದಷ್ಟು ಹಳೆಯದಾದ ಈ ದೇವಸ್ಥಾನ ಬಂದಿರುವ ಭಕ್ತರ ಕಷ್ಟಗಳನ್ನ ಇಲ್ಲಿನ ಶನಿದೇವರು ಪರಿಹಾರ ಮಾಡುತ್ತಾನೆಂದು ಇಲ್ಲಿನ ಅರ್ಚಕರು ಹೇಳುತ್ತಿದ್ದಾರೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶನೇಶ್ವರ ಹತ್ತಾರು ಪವಾಡಗಳನ್ನ ಮಾಡುತ್ತಲೇ ಭಕ್ತರನ್ನ ತನ್ನತ್ತ ಸೆಳೆಯುತ್ತಿದ್ದಾರೆ. ಇತಿಹಾಸ ಪ್ರಶಿದ್ದ ಇಂತಹ ಅಪರೂಪದ ದೇವಸ್ಥಾನದ ಬಗ್ಗೆ ಇಲ್ಲಿ ನಡೆಯುವ ಪವಾಡದ ಬಗ್ಗೆ ಭಕ್ತರು ನಂಬಿದ್ದಾರೆ. ಇಂಥಾ ಅಪರೂಪದ ದೇವಾಲಯ ಗಡಿ ಜಿಲ್ಲೆ ಬೀದರ್ನಲ್ಲಿ ಇದೆ ಅನ್ನೋದೆ ಹೆಮ್ಮೆಯ ವಿಷಯ.

ಬೀದರ್​ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ