AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಕ್ಲು ಶಿವ ಕೊಲೆ ಪ್ರಕರಣ: ಜಾಮೀನು ಅರ್ಜಿ ವಜಾ, ಬಿಜೆಪಿ ಶಾಸಕನಿಗೆ ಬಂಧನದ ಭೀತಿ

Biklu Shiva Murder Cas: ಬೆಂಗಳೂರು ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್​​ಗೆ ಹಿನ್ನಡೆಯಾಗಿದ್ದು, ಇದೀಗ ಅವರಿಗೆ ಬಂಧನದ ಭೀತಿ ಎದುರಾಗಿದೆ. ಈಗಾಗಲೇ ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್​​ಗೆ ಪೊಲೀಸರು ಶೋಧಕಾರ್ಯ ನಡೆಸಿದ್ದು, ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು.

ಬಿಕ್ಲು ಶಿವ ಕೊಲೆ ಪ್ರಕರಣ: ಜಾಮೀನು ಅರ್ಜಿ ವಜಾ, ಬಿಜೆಪಿ ಶಾಸಕನಿಗೆ ಬಂಧನದ ಭೀತಿ
Byrathi Basavaraj
Ramesha M
| Edited By: |

Updated on:Feb 10, 2026 | 2:32 PM

Share

ಬೆಂಗಳೂರು (ಫೆಬ್ರವರಿ.10): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Biklu Shiva Murder Case) ಸಂಬಂಧಿಸಿದಂತೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ( BJP MLA Byrathi Basavaraj) ಜಾಮೀನು ಅರ್ಜಿ ವಜಾಗೊಂಡಿದೆ. ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯಾಗಿರುವ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು‌ ಅರ್ಜಿಯನ್ನ ಇಂದು (ಫೆಬ್ರವರಿ 10) ಹೈಕೋರ್ಟ್​​ ವಜಾ‌ಗೊಳಿಸಿ ಆದೇಶ ಹೊರಡಿಸಿದ್ದು, ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್​​ಗೆ ಬಂಧನದ ಭೀತಿ ಎದುರಾಗಿದೆ. ಇದೀಗ ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು.

ಸದ್ಯ, ಅವರು ವಿದೇಶಕ್ಕೆ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಅವರು ವಿರುದ್ಧ ‘ಲುಕ್‌ಔಟ್‌’ ನೋಟಿಸ್‌ ಜಾರಿಯಲ್ಲಿದೆ. ರಾಜ್ಯದ ಸಿಐಡಿ ಪೊಲೀಸರು ಹೊರರಾಜ್ಯಗಳ ಪೊಲೀಸರ ಜತೆಗೂ ಸಂಪರ್ಕ ಸಾಧಿಸಿದ್ದು, ಅವರ ಬಂಧನಕ್ಕಾಗಿ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಿಂದ ಯಾವುದೇ ಕ್ಷಣದಲ್ಲಿ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ.

ಇದನ್ನೂ ನೋಡಿ: ಬಿಕ್ಲು ಶಿವ ಕೊಲೆ ಕೇಸ್​​ನಲ್ಲಿ BJP ಶಾಸಕ ಭೈರತಿ ಬಸವರಾಜ್​​ಗೆ ಮತ್ತಷ್ಟು ಸಂಕಷ್ಟ?

ಕಳೆದ ವರ್ಷ ಜುಲೈ 15ರಂದು ಬೆಂಗಳೂರಿನ ಹಲಸೂರಿನಲ್ಲಿ ನಡೆದ ರೌಡಿ ಬಿಕ್ಲುಶಿವನ ಕೊಲೆ ಪ್ರಕರಣದ ಪ್ರಮುಖ ಆರೋಪಿ ರೌಡಿ ಜಗದೀಶ್‌ ಅಲಿಯಾಸ್‌ ಜಗ್ಗನೊಂದಿಗೆ ಶಾಸಕ ಬಸವರಾಜ್‌ಗೆ ನೇರ ಸಂಪರ್ಕವಿದೆ. ಬಿಕ್ಲು ಶಿವನ ಹತ್ಯೆಗೂ ಮುನ್ನ ಹತ್ತಾರು ಬಾರಿ ಭೇಟಿ ಮಾಡಿದ್ದಾರೆ. ಶಾಸಕರ ವಿರುದ್ಧ ಕೆಲವು ಪ್ರಮುಖ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದೆ ಎಂದು ಸಿಐಡಿ ಮೂಲಗಳು ಹೇಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:23 pm, Tue, 10 February 26

ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ
ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ
ಬೆಂಗಳೂರು: ಅಂಜನಾಪುರದಲ್ಲಿ ಮನೆ ಗೇಟ್ ಒಳಗೇ ಬಂತು ಚಿರತೆ!
ಬೆಂಗಳೂರು: ಅಂಜನಾಪುರದಲ್ಲಿ ಮನೆ ಗೇಟ್ ಒಳಗೇ ಬಂತು ಚಿರತೆ!
ಚಲಿಸುತ್ತಿದ್ದ KSRTC ಬಸ್‌ನ ಆಕ್ಸೆಲ್ ಕಟ್​​: ತಪ್ಪಿದ ಭಾರೀ ದುರಂತ
ಚಲಿಸುತ್ತಿದ್ದ KSRTC ಬಸ್‌ನ ಆಕ್ಸೆಲ್ ಕಟ್​​: ತಪ್ಪಿದ ಭಾರೀ ದುರಂತ
ಹಿಟಾಚಿ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಹೇಳಿದ್ದೇನು ನೋಡಿ!
ಹಿಟಾಚಿ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಹೇಳಿದ್ದೇನು ನೋಡಿ!
Video: ಯುವತಿ ನಾಪತ್ತೆ, ಆಕೆ ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆ
Video: ಯುವತಿ ನಾಪತ್ತೆ, ಆಕೆ ಮಲಗಿದ್ದ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆ
ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ!
ವಿಧಾನಸೌಧ ಪಡಸಾಲೆಯಲ್ಲಿ ನಗದು, ಚಿನ್ನ ಇದ್ದ ಬ್ಯಾಗ್ ಬಿಟ್ಟುಹೋದ ವ್ಯಕ್ತಿ!
3 ಭರ್ಜರಿ ಸಿಕ್ಸ್, 7 ಫೋರ್: ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ
3 ಭರ್ಜರಿ ಸಿಕ್ಸ್, 7 ಫೋರ್: ಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ಶಮಿ
ಕುಡಿದ ಮತ್ತಲ್ಲಿ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಆಮೇಲೇನಾಯ್ತು ನೋಡಿ
ಕುಡಿದ ಮತ್ತಲ್ಲಿ ಪ್ರಿಸ್ಕ್ರಿಪ್ಷನ್ ಬರೆದ ವೈದ್ಯ, ಆಮೇಲೇನಾಯ್ತು ನೋಡಿ
ಬೊಲೆರೋಗೆ ಡಿಕ್ಕಿ ಹೊಡೆದು ಅರ್ಧ ಕಿಮೀ ತಳ್ಳಿಕೊಂಡೋಗಿ ಉರುಳಿಬಿದ್ದ ಕಂಟೇನರ್!
ಬೊಲೆರೋಗೆ ಡಿಕ್ಕಿ ಹೊಡೆದು ಅರ್ಧ ಕಿಮೀ ತಳ್ಳಿಕೊಂಡೋಗಿ ಉರುಳಿಬಿದ್ದ ಕಂಟೇನರ್!
ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?
ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಗೌಡ ಸಿಕ್ಕಿದ್ರಾ? ಗಿಲ್ಲಿ ಉತ್ತರ ಏನು?