AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking News Today Live: RSS ನೋಂದಣಿ ಬಗ್ಗೆ ಮೋಹನ್ ಭಾಗವತ್​ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

TV9 Kannada News Live Updates: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮುಂಗಾರು ಮಳೆ ಚುರುಕುಗೊಳ್ಳುತ್ತಿದೆ. ಮತ್ತೊಂದೆಡೆ, ಪರಿಷತ್​​ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ ಎದುರಾಗಿದ್ದು ರೆಸಾರ್ಟ್ ರಾಜಕೀಯ ಶುರುವಾಗಿದ್ದರೆ ಅತ್ತ ಇರಾನ್-ಅಮೆರಿಕ ಯುದ್ಧ ಕೊನೆಗೊಳ್ಳುವ ಹಂತಕ್ಕೆ ಬಂದಿದೆ. ಕಚ್ಚಾತೈಲ ಬೆಲೆ ಇಳಿಕೆಯಾಗಿದ್ದು, ಭಾರತದಲ್ಲಿ ಷೇರುಮಾರುಕಟ್ಟೆ ಚೇತರಿಕೆ ಕಂಡಿದೆ. ಇಂದಿನ ಪ್ರಮುಖ ವಿದ್ಯಮಾನಗಳ ಕ್ಷಣಕ್ಷಣದ ಅಪ್​ಡೇಟ್ಸ್ ಇಲ್ಲಿವೆ.

Breaking News Today Live: RSS ನೋಂದಣಿ ಬಗ್ಗೆ ಮೋಹನ್ ಭಾಗವತ್​ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ
Priyank Kharge -mohan bhagwat
ಗಣಪತಿ ಶರ್ಮಾ
| Edited By: |

Updated on:Jun 15, 2026 | 6:04 PM

Share

Breaking News 15 June 2026 Live Updates in Kannada: ಜಗತ್ತನ್ನೇ ತಲ್ಲಣಗೊಳಿಸಿದ್ದ ಅಮೆರಿಕ-ಇರಾನ್ ಯುದ್ಧ ಕೊನೆಗೊಳ್ಳುವ ಹಂತಕ್ಕೆ ಬಂದಿದೆ. ಯುದ್ಧವಿರಾಮದ ನಿಟ್ಟಿನಲ್ಲಿ ಉಭಯ ದೇಶಗಳು ಒಪ್ಪಂದಕ್ಕೆ ಬಂದಿದ್ದು, ಜೂನ್ 19ರಂದು ಜಿನಿವಾದಲ್ಲಿ ಸಹಿ ಹಾಕಲಿವೆ. ಇದರೊಂದಿಗೆ ಹಾರ್ಮುಝ್ ಜಲಸಂಧಿ ಸಹ ವಿಶ್ವದ ಎಲ್ಲ ದೇಶಗಳ ಹಡಗು ಸಂಚಾರಕ್ಕೆ ಮುಕ್ತವಾಗಲಿದೆ. ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಒಂದೇ ದಿನ ಶೇ 4 ರಷ್ಟು ಇಳಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆಯ ನಿರೀಕ್ಷೆ ಇದೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಷೇರುಮಾರುಕಟ್ಟೆ ಚೇತರಿಕೆ ಕಂಡಿದೆ. ಇತ್ತ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಪರಿಷತ್ ಚುನಾವಣೆಯ ರಾಜಕೀಯ ಕಾವೇರಿದೆ. ಅಡ್ಡಮತದಾನದ ಭೀತಿ ಹಿನ್ನೆಲೆ ರೆಸಾಟರ್ಟ್ ರಾಜಕೀಯ ಶುರುವಾಗಿದೆ. ದಿನದ ಪ್ರಮುಖ ವಿದ್ಯಮಾನಗಳ ತಾಜಾ ಅಪ್​ಡೇಟ್ ಪಡೆಯಲು ಈ ಪುಟವನ್ನು ಆಗಾಗ್ಗೆ ರಿಫ್ರೆಷ್ ಮಾಡುತ್ತಿರಿ.

LIVE NEWS & UPDATES

The liveblog has ended.
  • 15 Jun 2026 05:20 PM (IST)

    ರಣದೀಪ್ ಸುರ್ಜೇವಾಲ ಭೇಟಿಯಾದ ಸಿಎಂ ಡಿಕೆಶಿ

    ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಇಂದು (ಜೂನ್ 15) ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಭೇಟಿಯಾಗಿದ್ದು, ನಾಳಿನ ಸಿಎಲ್​ಪಿ ಸಭೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

  • 15 Jun 2026 03:50 PM (IST)

    RSS ನೋಂದಣಿ ಬಗ್ಗೆ ಮೋಹನ್ ಭಾಗವತ್​ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

    ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್​​ಎಸ್​​ಎಸ್​ ನೊಂದಣಿ ವಿಚಾರವಾಗಿ RSS ಮುಖ್ಯಸ್ಥ ಮೋಹನ್ ಭಾಗವತ್​ಗೆ ಅವರಿಗೆ ಪತ್ರ ಬರೆದಿದ್ದಾರೆ. ಇಷ್ಟು ದೊಡ್ಡ ಸಂಘಟನೆ ಯಾವ ಕಾನೂನಿನ ಆಧಾರದಲ್ಲಿ ನಿರ್ವಹಿಸುತ್ತಿದೆ. ಏಕೆ ನೋಂದಾಯಿತ ಕಾನೂನು ಬದ್ಧ ಸಂಸ್ಥೆಯಾಗಿ ಕಾರ್ಯ ನಿರ್ವಹಿಸ್ತಿಲ್ಲ. ಈ ಬಗ್ಗೆ ವಿವರಣೆ ನೀಡುವಂತೆ ಪತ್ರ ಬರೆದಿದ್ದಾರೆ.

  • 15 Jun 2026 03:29 PM (IST)

    ಬಸವಕಲ್ಯಾಣ ನಗರಕ್ಕೆ ಕನ್ನೇರಿ ಶ್ರೀಗಳ ಪ್ರವೇಶ ತಡೆಯುವಂತೆ ಮನವಿ

    ಜೂ.28ರಂದು ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಸಮಾವೇಶ ಮಾಡಲು ಅನುಮತಿ ನೀಡಬಾರದು. ಹಾಗೇ ಬಸವಕಲ್ಯಾಣ ನಗರಕ್ಕೆ ಕನ್ನೇರಿ ಶ್ರೀಗಳ ಪ್ರವೇಶ ನಿರ್ಬಂಧಿಸುವಂತೆ ಸಚಿವ ಈಶ್ವರ್ ಖಂಡ್ರೆಗೆ ಮನವಿ ಸಲ್ಲಿಸಿದ್ದಾರೆ. ಕನ್ನೇರಿ ಶ್ರೀಗಳು ಬಸವಣ್ಣ, ಲಿಂಗಾಯತ ಮಠಾಧೀಶರಿಗೆ ಅವಮಾನಿಸಿದ್ದಾರೆ. ಹೀಗಾಗಿ ಕನ್ನೇರಿ ಶ್ರೀ ಬಸವಕಲ್ಯಾಣಕ್ಕೆ ಬರಲು ಬಿಡಲ್ಲ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಪಟ್ಟು ಹಿಡಿದಿದೆ.

  • 15 Jun 2026 02:56 PM (IST)

    ಜೂನ್ 20ರವರೆಗೆ ಪಾಟ್ನಾದಲ್ಲಿ ಶಾಲೆಗಳಿಗೆ ರಜೆ

    ಬಿಹಾರ ರಾಜಧಾನಿ ಪಾಟ್ನಾದಲ್ಲಿ ಎಲ್ಲಾ ಶಾಲೆಗಳಿಗೆ ಜೂನ್ 20ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಬಿಸಿಲಿನ ಝಳ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 1ರಿಂದ 5ನೇ ತರಗತಿವರೆಗಿನ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ.

  • 15 Jun 2026 02:36 PM (IST)

    ಜಮೀರ್ ಬೆಂಬಲಿಗರು ಪೊಲೀಸ್ ವಶಕ್ಕೆ

    ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಅವರ ​​ ಬೆಂಬಲಿಗರು ಪಾದರಾಯನಪುರದಿಂದ ವಿಧಾನಸೌಧ ಚಲೋ ನಡೆಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜಮೀರ್ ಬೆಂಬಲಿಗರನ್ನು ಪೊಲೀಸರು ಪಾದರಾಯನಪುರದಲ್ಲಿ ಬ್ಯಾರಿಕೇಡ್ ಹಾಕಿ ತಡೆದಿದ್ದು, ಬಳಿಕ ವಶಕ್ಕೆ ಪಡೆದುಕೊಂಡು ಬಸ್​​​​ನಲ್ಲಿ ಕರೆದೊಯ್ದರು.

  • 15 Jun 2026 01:57 PM (IST)

    ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸಲ್ಲ: ಸಿದ್ದರಾಮಯ್ಯ

    ಗ್ಯಾರಂಟಿ ಯೋಜನೆ ಕುರಿತ ವಿಪಕ್ಷಗಳ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಕ್ಸ ಖಾತೆಯಲ್ಲಿ ಸಂದೇಶ ಪ್ರಕಟಿಸಿರುವ ಅವರು, ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ, ಮುಂದಿನ ಎರಡು ವರ್ಷಗಳ ಕಾಲ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದೇವೆ, ಅದರ ನಂತರವೂ ಅದು ಮುಂದುವರಿಯಲಿದೆ. ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸುವ ಕೆಲಸ ಪ್ರಾರಂಭದಿಂದಲೇ ನಡೆಯುತ್ತಾ ಬಂದಿದೆ, ಈಗಲೂ ಮುಂದುವರೆದಿದೆ. ಈ ಯೋಜನೆಗಳ ಫಲಾನುಭವಿಗಳು ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಟ್ಟು ಆತಂಕಕ್ಕೆ ಈಡಾಗಬೇಕಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

  • 15 Jun 2026 01:49 PM (IST)

    ರೀಲ್ಸ್ ಮಾಡಲು ಹೋಗಿ ಸಮುದ್ರ ಪಾಲಾದ ಯುವಕ

    ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ಮಹಾರಾಷ್ಟ್ರದ ಪುಣೆ ಮೂಲದ ಜೀವನ ಭಟ್ಟರಾಯಿ (26) ಸಮುದ್ರಪಾಲಾಗಿದ್ದಾರೆ. ಜೀವನ ಭಟ್ಟರಾಯಿ ಐದು ಜನ ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದರು. ರೀಲ್ಸ್ ಮಾಡಲು ನಾಲ್ವರು ಸಮುದ್ರಕ್ಕಿಳಿದಿದ್ದರು. ಇದೇ ವೇಳೆ, ಜೀವನ ಭಟ್ಟರಾಯಿ ಕೊಚ್ಚಿಹೊಗಿದ್ದಾನೆ. ಸ್ಥಳಕ್ಕೆ PSI ಖಾದರ್ ಬಾಷಾ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಕರಾವಳಿ ಕಾವಲುಪಡೆ , ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 15 Jun 2026 12:53 PM (IST)

    ಇಕ್ಬಾಲ್ ಹುಸೇನ್ ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ

    ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

  • 15 Jun 2026 12:21 PM (IST)

    ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡುತ್ತೇವೆ: ಸಿಎಂ ಡಿಕೆ ಶಿವಕುಮಾರ್

    ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಗ್ಯಾರಂಟಿ ದಾಖಲೆ ಬೇಕು, ಫೋಟೋ ಐಡೆಂಟಿಫಿಕೇಷನ್ ಬೇಕು ಎಂದು ಅವರು ಹೇಳಿದ್ದಾರೆ. ಈ ಹಿಂದೆ ತರಾತುರಿಯಲ್ಲಿ ಯಾರದ್ದೋ ನಂಬರ್ ಕೊಟ್ಟಿದ್ದಾರೆ, ಆದರೆ ಗೃಹಲಕ್ಷ್ಮಿ ಹಣ ಬೇರೆ ಯಾರದ್ದೋ ಅಕೌಂಟ್​ಗೆ ಹೋಗುತ್ತಿದೆ. ಫಲಾನುಭವಿಗಳ ಖಾತೆಗೇ ಹಣ ಹೋಗಬೇಕು. ನಾವು ಕರ್ನಾಟಕದವರಿಗೆ ಮಾತ್ರ ಗ್ಯಾರಂಟಿಗಳನ್ನು ಕೊಡುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮತ್ತಷ್ಟು ಓದಿ

  • 15 Jun 2026 12:17 PM (IST)

    ಶರಾವತಿ ಹಿನ್ನೀರಿನ ಸೌಂದರ್ಯ ಬಣ್ಣಿಸಿ ಆನಂದ್ ಮಹೀಂದ್ರಾ ಪೋಸ್ಟ್

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಮತ್ತು ಹಿನ್ನೀರಿನ ಪ್ರಾಕೃತಿಕ ಸೌಂದರ್ಯಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಮನಸೋತಿದ್ದು, ಎಕ್ಸ್ ಸಂದೇಶದ ಮೂಲಕ ಅದನ್ನು ವ್ಯಕ್ತಪಡಿಸಿದ್ದಾರೆ. ಕೇರಳದ ಹಿನ್ನೀರುಗಳ ಸೌಂದರ್ಯದ ಜತೆ ಹೋಲಿಸಿ, ಕರ್ನಾಟಕದ ಶರಾವತಿ ಹಿನ್ನೀರು ಸಹ ಯಾವುದಕ್ಕೂ ಕಡಿಮೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಮತ್ತಷ್ಟು ಓದಿ

  • 15 Jun 2026 12:15 PM (IST)

    ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ಹೆಚ್​ಡಿಕೆ

    ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೊಚ್ಚಿನ್ ನಗರದ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ವಿಡಿಯೋ ನೋಡಿ

  • 15 Jun 2026 11:05 AM (IST)

    ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ನಿಧನ

    ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಸೋಮವಾರ ನಿಧನರಾದರು.

  • 15 Jun 2026 10:46 AM (IST)

    ಇಕ್ಬಾಲ್ ಹುಸೇನ್ ಆಸ್ಪತ್ರೆಗೆ ದಾಖಲು

    ರಾಮನಗರ ‌ಕಾಂಗ್ರೆಸ್ ಶಾಸಕ, ಸಿಎಂ ಡಿಕೆ ಶಿವಕುಮಾರ್ ಆಪ್ತ ಇಕ್ಬಾಲ್ ಹುಸೇನ್ ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಈ ಹಿಂದೆ ಹಾರ್ಟ್ ಬ್ಲಾಕ್ ಆಗಿತ್ತು. ಸ್ಟೆಂಟ್ ಹಾಕಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು.

  • 15 Jun 2026 10:28 AM (IST)

    ಮಂತ್ರಾಲಯದಲ್ಲಿ ವರುಣಾರ್ಭಟ

    ಮಂತ್ರಾಲಯದಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಪರದಾಡುವಂತಾಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುತ್ತಮುತ್ತಲ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡು ಭಕ್ತರು ಪರದಾಡಿದರು. ವಿಡಿಯೋ ನೋಡಿ

  • 15 Jun 2026 10:26 AM (IST)

    ಭಾರತೀಯ ಷೇರು ಮಾರುಕಟ್ಟೆಯಲ್ಲೂ ಭಾರಿ ಜಿಗಿತ

    ಭಾರತೀಯ ಷೇರು ಸೂಚ್ಯಂಕಗಳು ಆರಂಭಿಕ ವಹಿವಾಟಿನಲ್ಲೇ ಜಿಗಿತ ಕಂಡಿವೆ. ಆರಂಭಿಕ ಹಂತದಲ್ಲಿ, ಸೆನ್ಸೆಕ್ಸ್ 1,100 ಪಾಯಿಂಟ್‌ಗಳಿಗಿಂತ ಹೆಚ್ಚು ಜಿಗಿದರೆ, ನಿಫ್ಟಿ 350 ಪಾಯಿಂಟ್‌ಗಳ ಏರಿಕೆ ಕಂಡಿತು. ಏತನ್ಮಧ್ಯೆ, ಡಾಲರ್ ಎದುರು ರೂಪಾಯಿ ಮೌಲ್ಯ 79 ಪೈಸೆ ಏರಿಕೆಯಾಗಿ 94.68 ಕ್ಕೆ ವಹಿವಾಟು ಆರಂಭಿಸಿತು, ಶುಕ್ರವಾರದ ವಹಿವಾಟಿನ ಮುಕ್ತಾಯದ ವೇಳೆಗೆ ಇದು 95.11 ಕ್ಕೆ ತಲುಪಿತ್ತು.

  • 15 Jun 2026 10:23 AM (IST)

    ಜಾಗತಿಕ ಷೇರು ಮಾರುಕಟ್ಟೆ ಜಿಗಿತ

    ಯುಎಸ್-ಇರಾನ್ ಮಹತ್ವದ ಒಪ್ಪಂದ ಘೋಷಣೆ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ಜಿಗಿತ ಕಂಡಿದೆ. ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿ ಹೂಡಿಕೆದಾರರಲ್ಲಿ ಮಂದಹಾಸ ಮೂಡಿದೆ. ​ಜಪಾನ್‌ನ ಪ್ರಮುಖ ಸೂಚ್ಯಂಕ ‘ನಿಕಿ 225’ ಶೇಕಡಾ 5 ಕ್ಕಿಂತಲೂ ಹೆಚ್ಚು ತೀವ್ರ ಏರಿಕೆ ಕಂಡಿದೆ. ​ದಕ್ಷಿಣ ಕೊರಿಯಾದ ಮುಂಚೂಣಿ ಸೂಚ್ಯಂಕ ‘ಕೋಸ್ಪಿ’ ಶೇಕಡಾ 5.7 ರಷ್ಟು ಭಾರಿ ಜಿಗಿತ ಕಂಡಿದೆ. ​ತೈವಾನ್‌ನ ‘ಟೈಯೆಕ್ಸ್’ ಶೇಕಡಾ 2.7 ಹಾಗೂ ಆಸ್ಟ್ರೇಲಿಯಾದ ‘ASX200’ ಶೇಕಡಾ 1.5 ರಷ್ಟು ವೃದ್ಧಿಯಾಗಿದೆ. ​ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಣನೀಯವಾಗಿ ಕುಸಿದಿದ್ದು, ಬ್ರೆಂಟ್ ಕಚ್ಚಾ ತೈಲ ದರ ಶೇಕಡಾ 4 ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ​ಪ್ರತಿ ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು 83.70 ಡಾಲರ್‌ಗೆ ಇಳಿಕೆಯಾಗಿದೆ.

  • 15 Jun 2026 10:21 AM (IST)

    ಕಚ್ಚಾ ತೈಲ ಬೆಲೆ ಭಾರೀ ಇಳಿಕೆ

    ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಕೊನೆಗೊಳಿಸುವಿಕೆ ಒಪ್ಪಂದ ಸಿದ್ಧಗೊಂಡ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಶೇ 4ರಷ್ಟು ಕುಸಿತ ಕಂಡು 80 ಡಾಲರ್​​ಗೆ ಇಳಿಕೆಯಾಗಿದೆ. ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ ಇದೆ. ಮತ್ತಷ್ಟು ಓದಿ

Published On - Jun 15,2026 10:18 AM

Follow Us
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಅಪರಾಧ ಕೃತ್ಯ ಮರುಕಳಿಸಿದರೆ ಕೈ, ಕಾಲಿಗೆ ಗುಂಡು ಹಾರಿಸಿ: ಸಚಿವ ಖಾದರ್​​
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ, ಬೆಳಗಾವಿಯಲ್ಲಿ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ?
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ