ಹಾಲು ಕರೆಯುವ ಹಸುಗಳ ಸಾಕಣೆ: ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಸ್ಪಷ್ಟೀಕರಣ ಏನು?
ಇತ್ತೀಚೆಗೆ ಹಸುಗಳನ್ನು ಸಾಕುವುದರ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಸ ಆದೇಶವೊಂದನ್ನು ಜಾರಿಗೆ ತಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು. ಆ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿದ್ದುಪಡಿ ರೂಪದಲ್ಲಿ ಹೊಸ ಕಾನೂನು ಏನು ಹೇಳುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅದರಂತೆ ಜುಲೈ 10ರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಡೈರಿ ಫಾರಂಗಳು 15 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಹಾಲು ಕರೆಯುವ ಪ್ರಾಣಿಗಳನ್ನು ಹೊಂದಿದ್ದಲ್ಲಿ ಮಾತ್ರ ಮಾಲಿನ್ಯ ನಿಯಂತ್ರಣ ನಿರ್ವಹಣೆ ವ್ಯವಸ್ಥೆಗೆ ಒಳಪಡುತ್ತವೆ. […]
ಇತ್ತೀಚೆಗೆ ಹಸುಗಳನ್ನು ಸಾಕುವುದರ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಸ ಆದೇಶವೊಂದನ್ನು ಜಾರಿಗೆ ತಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು. ಆ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿದ್ದುಪಡಿ ರೂಪದಲ್ಲಿ ಹೊಸ ಕಾನೂನು ಏನು ಹೇಳುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅದರಂತೆ ಜುಲೈ 10ರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಡೈರಿ ಫಾರಂಗಳು 15 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಹಾಲು ಕರೆಯುವ ಪ್ರಾಣಿಗಳನ್ನು ಹೊಂದಿದ್ದಲ್ಲಿ ಮಾತ್ರ ಮಾಲಿನ್ಯ ನಿಯಂತ್ರಣ ನಿರ್ವಹಣೆ ವ್ಯವಸ್ಥೆಗೆ ಒಳಪಡುತ್ತವೆ. ರೈತರು ತಮ್ಮ ಮನೆಗಳಲ್ಲಿ ಸಾಕಣೆ ಮಾಡಿ ಹಾಲು ಕರೆಯುವ ಜಾನುವಾರುಗಳಿಗೆ ಸದರಿ ನಿರ್ದೇಶನವು ಅನ್ವಯಿಸುವುದಿಲ್ಲ.
ಗೋಶಾಲೆಗಳೆಂದರೆ ದುರ್ಬಲ, ಅನಾರೋಗ್ಯ, ಗಾಯಗೊಂಡ, ಅಂಗವಿಕಲ ಹಾಗೂ ಅನಾಥ ಜಾನುವಾರುಗಳನ್ನು ಆರೈಕೆ ವಾಡುವ ಪುನರ್ವಸತಿ ಕೇಂದ್ರಗಳಾಗಿದ್ದು, ಇಂತಹ ಕೇಂದ್ರಗಳು ಮಾತ್ರ ಮಾಲಿನ್ಯ ನಿಯಂತ್ರಣ ನಿರ್ವಹಣೆ ವ್ಯವಸ್ಥೆಗೆ ಒಳಪಡುತ್ತವೆ. ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಲ್ಲಿ, ರೈತರು ತಮ್ಮ ಮನೆಗಳಲ್ಲಿ ಸಾಕಣೆ ಮಾಡುವ ಹಾಲು ಕರೆಯುವ ಜಾನುವಾರುಗಳಿಗೆ ಸದರಿ ನಿರ್ದೇಶನವು ಅನ್ವಯಿಸುವುದಿಲ್ಲ ಹಾಗೂ ಮಂಡಳಿಯಿಂದ ಸಮ್ಮತಿ ಪತ್ರ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂಬುದನ್ನು ಈ ಮೂಲಕ ತಿಳಿಸಲಾಗಿದೆ ಹಾಗು ರೈತಾಪಿ ಜನರು ಈ ವಿಷಯ ಕುರಿತು ಆತಂಕ ಪಡುವುದು ಬೇಡ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಯಾಕೀ ತಿದ್ದುಪಡಿ ಮಾಹಿತಿ: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಅರ್ಜಿದಾರರಾದ ನುಗ್ಗೆಹಳ್ಳಿ ಜಯಸಿಂಹ ಪ್ರತಿವಾದಿ ದೆಹಲಿ ರಾಷ್ಟ್ರ ರಾಜಧಾನಿ ಪ್ರಾಂತ್ಯ ರವರ ಮೂಲ ಅರ್ಜಿ ಸಂಖ್ಯೆ 46/2018 ರ ಪ್ರಕರಣದಲ್ಲಿ ಡೈರಿ ಫಾರಂ ಮತ್ತು ಗೋಶಾಲೆಗಳಿಂದ ಉತ್ಫಾದನೆಯಾಗುವ ಘನ ತ್ಯಾಜ್ಯ ಮತ್ತು ಜಲ ಮಾಲಿನ್ಯವು ನದಿಗೆ ಸೇರುತ್ತಿರುವ ಬಗ್ಗೆ ವಿಚಾರಣೆ ನಡೆಸಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸದರಿ ಚಟುವಟಿಕೆಗಳ ಪರಿಸರಾತ್ಮಕ ಅಂಶಗಳ ಕುರಿತು ಮಾರ್ಗಸೂಚಿಗಳನ್ನು ರೂಪಿಸುವಂತೆ ನಿರ್ದೇಶಿಸಿರುತ್ತದೆ. ಮುಂದುವರೆದು, ಡೈರಿ ಫಾರಂ ಹಾಗು ಗೋಶಾಲೆಗಳಿರುವ ಬಗ್ಗೆ ಹಾಗು ತ್ಯಾಜ್ಯ ಉತ್ಫಾದನೆ ಬಗ್ಗೆ ಅಂಕಿ-ಅಂಶ ಹಾಗು ಇತರೆ ವಿವರಗಳನ್ನು ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಂದ ಪಡೆದು ಸಲ್ಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸೂಚಿಸಿರುತ್ತದೆ.
ಇದನ್ನೂ ಓದಿ: 10ಕ್ಕಿಂತ ಹೆಚ್ಚು ಹಸು ಸಾಕುತ್ತಿದ್ದೀರಾ.. ಜಾರಿಗೆ ಬರಲಿದೆ ಹೊಸ ಮಹತ್ವದ ಆದೇಶ
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಡೈರಿ ಫಾರಂ ಹಾಗು ಗೋಶಾಲೆಗಳಲ್ಲಿ ಪರಿಸರ ನಿರ್ವಹಣೆ ಕುರಿತಾಗಿ ರೂಪಿಸಿದ ಮಾರ್ಗಸೂಚಿಗಳನ್ನು ಹಾಗೂ ರಾಜ್ಯಗಳಿಂದ ಪಡೆದು ಕ್ರೂಢೀಕರಿಸಿ ಸಲ್ಲಿಸಿದ ವರದಿ ಆಧಾರದ ಮೇಲೆ ವಿಚಾರಣೆ ನಡೆಸಿ 20.5.2020 ರಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಲಿನ್ಯ ನಿಯಂತ್ರಣ ಮಂಡಳಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಡೈರಿ ಫಾರಂ ಹಾಗು ಗೋಶಾಲೆಗಳಿಂದಾಗುವ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತು ಹಲವು ನಿರ್ದೇಶನಗಳನ್ನು ನೀಡಿರುತ್ತದೆ.
ಇದರ ಅನುಸಾರವಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 10.07.2020 ರಂದು ಜಲ ಕಾಯ್ದೆ, 1974 ರ ಕಲಂ 18(1)(ಬಿ) ಅಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನಿರ್ದೇಶಿಸಿ ಡೈರಿ ಫಾರಂಗಳನ್ನು ಕಿತ್ತಳೆ ಪ್ರವರ್ಗಕ್ಕೆ ಹಾಗು ಗೋಶಾಲೆಗಳನ್ನು ಹಸಿರು ಪ್ರವರ್ಗಕ್ಕೆ ವರ್ಗೀಕರಿಸಿದೆ ಹಾಗು ಜುಲೈ, 2020 ರಲ್ಲಿ ಡೈರಿ ಫಾರಂ ಹಾಗು ಗೋಶಾಲೆಗಳಲ್ಲಿ ಪರಿಸರ ನಿರ್ವಹಣೆ ಕುರಿತು ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಅನುಷ್ಟಾನಗೊಳಿಸಲು ಎರಡು ತಿಂಗಳೊಳಗಾಗಿ ಕ್ರಮವಹಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ 14.07.2020 ರಂದು ಸೂಚಿಸಿರುತ್ತದೆ. ಹಾಗೂ ಎಲ್ಲಾ ರಾಜ್ಯಗಳಿಂದ ಕ್ರೂಢೀಕೃತ ಮಾಹಿತಿಯನ್ನು 15.9.2020 ರೊಳಗೆ ನಮೂನೆ ಪ್ರಕಾರ ಸಲ್ಲಿಸುವಂತೆ ತಿಳಿಸಿರುತ್ತದೆ.
ಇದರ ಪ್ರಕಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 06.09.2020 ರಂದು ದಿನ ಪತ್ರ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. ರಾಜ್ಯದಲ್ಲಿನ ಡೈರಿ ಫಾರಂಗಳು ಹಾಗೂ ಗೋಶಾಲೆಗಳ ಸ್ಥಾಪನೆ ಹಾಗು ನಿರ್ವಹಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮ್ಮತಿ ಪತ್ರಗಳನ್ನು ಜಲ (ಮಾಲಿನ್ಯ ನಿವಾರಣ ಮತ್ತು ನಿಯಂತ್ರಣ) ಕಾಯ್ದೆ, 1974 ಹಾಗು ವಾಯು (ಮಾಲಿನ್ಯ ನಿವಾರಣ ಮತ್ತು ನಿಯಂತ್ರಣ) ಕಾಯ್ದೆ, 1981 ರ ಅಡಿ ಪಡೆಯಲು ತಿಳಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಈಗ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
Published On - 6:02 pm, Mon, 2 November 20