ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ತೇರಿಗೆ 190 ಕೆಜಿ ಗಟ್ಟಿ ಬೆಳ್ಳಿಯಿಂದ ಕವಚ ನಿರ್ಮಾಣ

ಮಲೇ ಮಹದೇಶ್ವರ ದೇವಾಲಯದ ಒಳ ಆವರಣದಲ್ಲಿ ಕಾರ್ಯ ನಡೆಯುತ್ತಿದ್ದು, ಈಗಾಗಲೇ ತೇಗದ ಮರದಲ್ಲಿ ನಿರ್ಮಾಣವಾಗಿರುವ ತೇರಿಗೆ ಬೆಳ್ಳಿ ಕವಚ ನಿರ್ಮಾಣ ಮಾಡಲಾಗುತ್ತಿದೆ. ಇನ್ನೆರಡು ದಿನಗಳ ಕಾಲ‌ ತೇರಿಗೆ ಬೆಳ್ಳಿ ಕವಚ ಹಾಕುವ ಕಾರ್ಯ ಮುಂದುವರಿಯಲಿದೆ.

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ತೇರಿಗೆ 190 ಕೆಜಿ ಗಟ್ಟಿ ಬೆಳ್ಳಿಯಿಂದ ಕವಚ ನಿರ್ಮಾಣ
ದೇವಾಲಯದ ಒಳ ಆವರಣದಲ್ಲಿ ಕಾರ್ಯ ಆರಂಭ
Follow us
TV9 Web
| Updated By: preethi shettigar

Updated on:Dec 18, 2021 | 12:38 PM

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತೇರಿಗೆ ಬೆಳ್ಳಿಯಿಂದ ಕವಚ ನಿರ್ಮಾಣ ಮಾಡುವ ಕಾರ್ಯ ಆರಂಭವಾಗಿದೆ. ಸುಮಾರು 190 ಕೆಜಿ ಗಟ್ಟಿ ಬೆಳ್ಳಿಯಿಂದ ತೇರು ನಿರ್ಮಾಣ ಮಾಡಲಾಗುತ್ತಿದೆ. ಮಲೇ ಮಹದೇಶ್ವರ ದೇವಾಲಯದ (Male Mahadeshwara temple) ಒಳ ಆವರಣದಲ್ಲಿ ಕಾರ್ಯ ನಡೆಯುತ್ತಿದ್ದು, ಈಗಾಗಲೇ ತೇಗದ ಮರದಲ್ಲಿ ನಿರ್ಮಾಣವಾಗಿರುವ ತೇರಿಗೆ ಬೆಳ್ಳಿ ಕವಚ ನಿರ್ಮಾಣ ಮಾಡಲಾಗುತ್ತಿದೆ. ಇನ್ನೆರಡು ದಿನಗಳ ಕಾಲ‌ ತೇರಿಗೆ ಬೆಳ್ಳಿ ಕವಚ ಹಾಕುವ ಕಾರ್ಯ ಮುಂದುವರಿಯಲಿದ್ದು, ನಿಧಾನಗತಿಯಲ್ಲಿ ನಡೆಯುತ್ತಿರುವ ಈ ಕಾರ್ಯ ನಡೆಯುತ್ತಿದೆ.

ಮೈಸೂರು: ಸಚ್ಚಿದಾನಂದ ಆಶ್ರಮದಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಾಲಯ ಉದ್ಘಾಟನೆ ಮಾಡಿದ ಬಿಎಸ್​ವೈ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಸಚ್ಚಿದಾನಂದ ಆಶ್ರಮದಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಾಲಯ ಉದ್ಘಾಟನೆ ಮಾಡಿದ್ದಾರೆ. ಸಚ್ಚಿದಾನಂದ ಗಣಪತಿ ಆಶ್ರಮದ ಆವರಣದಲ್ಲಿ ನಿರ್ಮಾಣವಾಗಿರುವ ದೇವಾಲಯ ಇದಾಗಿದೆ. ಹನುಮಾನ್ ದೇವಾಲಯ ಉದ್ಘಾಟನೆ ವೇಳೆ ಬಿಎಸ್​ವೈ ಜತೆಗೆ ಗಣಪತಿ ಸಚ್ಚಿದಾನಂದ ಶ್ರೀ ಹಾಗೂ ದತ್ತ ವಿಜಯಾನಂದ ಶ್ರೀಗಳು ಉಪಸ್ಥಿತರಿದ್ದರು.

ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಸಿಟಿ ರವಿ ಭಿಕ್ಷಾಟನೆ ದತ್ತಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಭಿಕ್ಷಾಟನೆ ನಡೆಸಿದರು. ಚಿಕ್ಕಮಗಳೂರು ನಗರದ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆಯಲ್ಲಿ ಇತರೆ ದತ್ತಮಾಲಾಧಾರಿಗಳ ಜೊತೆ ಸಿಟಿ ರವಿ ಪಡಿ ಸಂಗ್ರಹಿಸಿದರು. ಈ ವೇಳೆ ಅಕ್ಕಿ, ಬೆಲ್ಲ, ಎಲೆ, ಅಡಿಕೆ, ಕೊಬ್ಬರಿ, ಬಾಳೆಹಣ್ಣುಗಳನ್ನ ದತ್ತಮಾಲಾಧಾರಿಗಳಿಗೆ ಸ್ಥಳೀಯರು ನೀಡಿದರು. ಜನರಿಂದ ಪಡೆದ ಪಡಿಯನ್ನ ಇರುಮುಡಿ ರೂಪದಲ್ಲಿ ನಾಳೆ ದತ್ತಾತ್ರೇಯನಿಗೆ ದತ್ತಮಾಲಾಧಾರಿಗಳು ಅರ್ಪಿಸಲಿದ್ದಾರೆ. ಭಿಕ್ಷಾಟನೆ ಬಳಿಕ ಮಾತನಾಡಿದ ಸಿಟಿ ರವಿ, ಬ್ರಹ್ಮ ವಿಷ್ಣು ಮಹೇಶ್ವರರ ಅವಿರ್ಭಾವ ರೂಪದೇ ದತ್ತಾತ್ರೇಯರು.

ದತ್ತಾತ್ರೇಯರನ್ನ ಅವಧೂತ ಪರಂಪರೆ ಅಂತಾ ಗುರುತಿಸಲಾಗುತ್ತದೆ. ಅವಧೂರ ಪರಂಪರೆಯವರು ಭಿಕ್ಷಾಟನೆ ಮಾಡಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ದತ್ತಜಯಂತಿ ಹಿನ್ನೆಲೆಯಲ್ಲಿ ನಾವು ಭಿಕ್ಷಾಟನೆ ಮಾಡಿದ್ದೇವೆ, ನಾಳೆ ದತ್ತಾತ್ರೇಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದೇವೆ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರತಿಕ್ರಿಯಿಸಿದರು.

ದತ್ತಮಾಲಾಧಾರಿಗಳನ್ನ ಕುಡುಕರೆಂಬಂತೆ ಬಣ್ಣಿಸಿರುವ ಹಾಸನ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ ಸಿಟಿ ರವಿ, ಬಳಸಿರುವ ಭಾಷೆ ಗೌರವ ತರುವಂತದಲ್ಲ. ಅದನ್ನ ನಾನು ಖಂಡಿಸುತ್ತೇನೆ. ಅವಹೇಳನ-ಅಪಮಾನ ಮಾಡುವ ರೀತಿ ಡಿಸಿ ಸರ್ಕ್ಯೂಲರ್ ಹೊರಡಿಸಿದ್ದಾರೆ. ಆ ರೀತಿ ಸರ್ಕ್ಯೂಲರ್ ಹೊರಡಿಸಿರುವ ಡಿಸಿ ಅವರಿಗೆ ತಪ್ಪು ಕಲ್ಪನೆ ತೋರಿಸುತ್ತದೆ. ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸುತ್ತೇನೆ ಅಂತಾ ಸಿಟಿ ರವಿ ಹೇಳಿದ್ದಾರೆ.

ಸಾವಿರಾರು ದತ್ತಮಾಲಾಧಾರಿಗಳು ಬೇಲೂರು ಮೂಲಕ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹೋಗಲಿದ್ದು, ಬರುವಾಗ ವಾಹನಗಳನ್ನ ನಿಲ್ಲಿಸಿಕೊಂಡು ಮದ್ಯ ಸೇವನೆ ಮಾಡಿಕೊಂಡು, ಅನ್ಯ ಧರ್ಮಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಘೋಷಣೆ ಕೂಗು ಸಾಧ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಬೇಲೂರು ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಹಾಸನ ಡಿಸಿ ಆದೇಶ ಮಾಡಿದ್ದರು. ಇದು ರಾಜ್ಯಾದ್ಯಂತ ಇರುವ ದತ್ತಮಾಲಾಧಾರಿಗಳಲ್ಲಿ ಆಕ್ರೋಶ ಹೆಚ್ಚುವಂತೆ ಮಾಡಿತ್ತು.

ಇದನ್ನೂ ಓದಿ: ರಂಗನಾಥಸ್ವಾಮಿ ದೇವಾಲಯಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ

ಸುಬ್ರಹ್ಮಣ್ಯನಿಗೆ 56 ಲಕ್ಷ ರೂ. ಮೌಲ್ಯದ ಬೆಳ್ಳಿ ರಥ ಸಮರ್ಪಣೆ; ಭಕ್ತರ ಕೋರಿಕೆ ಈಡೇರಿಸಿದ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

Published On - 12:30 pm, Sat, 18 December 21

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ