ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ: ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದರೂ ಆರೋಪಿಗಳ ಬಂಧಿಸದ ಪೊಲೀಸರು

ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ: ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದರೂ ಆರೋಪಿಗಳ ಬಂಧಿಸದ ಪೊಲೀಸರು
ಚಾಮರಾಜನಗರದ ಮಹಿಳಾ ಪೊಲೀಸ್ ಠಾಣೆ

ಅರಣ್ಯ ಇಲಾಖೆಯ ಗಾರ್ಡ್ ಶಿವಣ್ಣ ನಾಯಕನಿಂದ ಲೈಂಗಿಕ ಕಿರುಕುಳ ಎಸಲಾಗಿದೆ ಎಂದು ಬಾಲಕಿ ಪೋಷಕರು ದೂರು ನೀಡಿದ್ದರು. ದೂರಿನನ್ವಯ ಈತನ ವಿರುದ್ಧ ಚಾಮರಾಜನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಇನ್ನೂ ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆಯಾಗಿಲ್ಲ.

TV9kannada Web Team

| Edited By: preethi shettigar

Jan 01, 2022 | 1:44 PM

ಚಾಮರಾಜನಗರ: ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿಗೆ ನ್ಯಾಯ ಇನ್ನೂ ಸಿಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಚಾಮರಾಜನಗರದಲ್ಲಿ ಡಿಸಿ, ಎಸ್​ಪಿ, ಸಿಇಒ, ಡಿವೈಎಸ್​ಪಿ ಎಲ್ಲರೂ ಮಹಿಳಾ ಅಧಿಕಾರಿಗಳಿದ್ದರೂ ನೊಂದ ಬಾಲಕಿಗೆ ಮಾತ್ರ ಇನ್ನೂ ಕೂಡ ನ್ಯಾಯ ಸಿಗಲಿಲ್ಲ ಎಂದು ಬಾಲಕಿಯ ಪೋಷಕರು ಆರೋಪ ಮಾಡಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಾಲ್ವರ ವಿರುದ್ಧ ಪೋಕ್ಸೊ ಕಾಯ್ದೆಯಡಿ (pocso act) ಪ್ರಕರಣ ದಾಖಲಾಗಿದೆ. ಆದರೆ ಘಟನೆ ನಡೆದು 25 ದಿನ ಕಳೆದರೂ ಪೊಲೀಸರು ಮಾತ್ರ ಆರೋಪಿಗಳನ್ನು ಬಂಧಿಸಿಲ್ಲ. ಇದು ಸಹಜವಾಗಿಯೇ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಡಿಸೆಂಬರ್​ 6 ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಹೊಣಕನಪುರ ಬಳಿ, ಬಾಲಕಿ ಶಾಲೆಗೆ ಹೋಗಿ ವಾಪಸ್ ಬರುವ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅರಣ್ಯ ಇಲಾಖೆಯ ಗಾರ್ಡ್ ಶಿವಣ್ಣ ನಾಯಕನಿಂದ ಲೈಂಗಿಕ ಕಿರುಕುಳ ಎಸಲಾಗಿದೆ ಎಂದು ಬಾಲಕಿ ಪೋಷಕರು ದೂರು ನೀಡಿದ್ದರು. ದೂರಿನನ್ವಯ ಈತನ ವಿರುದ್ಧ ಚಾಮರಾಜನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಆದರೆ ಇನ್ನೂ ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆಯಾಗಿಲ್ಲ. ಅಲ್ಲದೇ ಕರ್ತವ್ಯಕ್ಕೆ ರಾಜಾರೋಷವಾಗಿ ಅರಣ್ಯ ಇಲಾಖೆ ಗಾರ್ಡ್ ಶಿವಣ್ಣನಾಯಕ ಹಾಜರಾಗುತ್ತಿದ್ದಾನೆ. ಆರೋಪಿ ಬಂಧಿಸದೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆಂದು ಬಾಲಕಿ ಪೋಷಕರು ಆರೋಪ ಮಾಡಿದ್ದಾರೆ.

ಈ ವಿಚಾರವಾಗಿ ಎಎಸ್​ಪಿ ಸುಂದರ್ ರಾಜ್ ಮಾತನಾಡಿದ್ದು, ಈ ಪ್ರಕರಣದಲ್ಲಿ ಎರಡು ಕಡೆಯಿಂದ ದೂರು ದಾಖಲಾಗಿದೆ. ಹೀಗಾಗಿ ಕೂಡಲೇ ಈ ಬಗ್ಗೆ ವಿಚಾರಿಸಿ ಕ್ರಮವಹಿಸುತ್ತೇನೆ. ಯಾವ ಕಾರಣಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದಿಲ್ಲ ಎಂಬುದರ ಬಗ್ಗೆ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತೇನೆ. ಈಗಾಗಲೇ ತನಿಖೆ ಕೂಡ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮರದ ದಿಮ್ಮಿಗಳ ಮಧ್ಯೆ ಸಿಲುಕಿ ಮಗು ಸಾವು, ಲೈಂಗಿಕ ಕಿರುಕುಳ ಆರೋಪ ಬೆನ್ನಲ್ಲೇ ಶಿಕ್ಷಕ ಎಸ್ಕೇಪ್

ಪ್ರಜ್ಞೆ ತಪ್ಪಿಸಿ ಲೈಂಗಿಕ ಕಿರುಕುಳ ಆರೋಪ; ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ

Follow us on

Related Stories

Most Read Stories

Click on your DTH Provider to Add TV9 Kannada