ಚಿಕ್ಕಬಳ್ಳಾಪುರದಲ್ಲಿ ಚಿನ್ನದ ಗೋಪುರದ ಮಧ್ಯೆ ಅಮೃತಶಿಲೆಯ ಶಿರಡಿ ಸಾಯಿಬಾಬಾ

ಶಿರಡಿಗೆ ಹೋಗಿ ಸಾಯಿಬಾಬಾ ದರ್ಶನ ಪಡೆಯದವರು ಹಾರೋಬಂಡೆ ಗ್ರಾಮಕ್ಕೆ ಬಂದು ಬಾಬಾರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಬಾಬಾರ ಅಮೃತ ಶಿಲೆಯ ವಿಗ್ರಹದ ಜೊತೆ ಚಿನ್ನ ಲೇಪಿತ ಅಲಂಕಾರ ವೀಕ್ಷಿಸುವುದು ಕಣ್ಣು ಮತ್ತು ಮನಸ್ಸಿಗೆ ಆನಂದ ಉಂಟುಮಾಡುತ್ತದೆ ಎನ್ನುತ್ತಾರೆ ಬಾಬಾ ಭಕ್ತರು.

ಚಿಕ್ಕಬಳ್ಳಾಪುರದಲ್ಲಿ ಚಿನ್ನದ ಗೋಪುರದ ಮಧ್ಯೆ ಅಮೃತಶಿಲೆಯ ಶಿರಡಿ ಸಾಯಿಬಾಬಾ
ಚಿಕ್ಕಬಳ್ಳಾಪುರದಲ್ಲಿ ಶಿರಡಿ ಸಾಯಿಬಾಬಾ ದೇಗುಲ

ಚಿಕ್ಕಬಳ್ಳಾಪುರ: ಚಿನ್ನದ ಗೋಪುರದ ಮಧ್ಯೆ ಪ್ರತಿಷ್ಠಾಪನೆಯಾಗಿರುವ ಅಮೃತ ಶಿಲೆಯ ಶಿರಡಿ ಸಾಯಿ ಬಾಬಾರ ವಿಗ್ರಹವನ್ನು ವೀಕ್ಷಿಸುತ್ತಿದ್ದರೆ ಎಂಥವರಿಗೂ ಭಕ್ತಿ ಭಾವ ಉಕ್ಕಿ ಬರುತ್ತದೆ. ಕೆಲಕಾಲ ಕಣ್ಮುಚ್ಚಿ ಧ್ಯಾನಸ್ಥ ಸ್ಥಿತಿಗೆ ತೆರಳುತ್ತಾರೆ. ಇನ್ನೂ ಚಿನ್ನದ ಲೋಕದಲ್ಲಿ ಬಾಬಾರ ವಿಗ್ರಹ ನೋಡೊದು ಅಂದರೆ ಸುಮ್ಮನೇನಾ! ಇಂಥ ಚಿನ್ನದ ಲೋಕದಲ್ಲಿ ಅಮೃತ ಶಿಲೆಯ ಶಿರಡಿ ಸಾಯಿಬಾಬಾರನ್ನು ನೋಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕು ಹಾರೋಬಂಡೆ ಗ್ರಾಮದಲ್ಲಿ. ಚಿಕ್ಕಬಳ್ಳಾಪುರದ ಉದ್ಯಮಿ ಹಾಗೂ ರಾಜಕೀಯ ಮುಖಂಡ ಜಿ.ಎಚ್.ನಾಗರಾಜ್, ಬಾಬಾರ ಪ್ರೇರಣೆಯಂತೆ ನೂತನ ಶಿರಡಿ ಸಾಯಿಬಾಬಾರ ದೇವಸ್ಥಾನ ನಿರ್ಮಿಸಿ, ದೇವಸ್ಥಾನದ ಒಳಾಂಗಣ ಗೋಪುರದಲ್ಲಿ ಬರೋಬ್ಬರಿ ಎಂಟೂವರೆ ಕೆಜಿಯ ಚಿನ್ನದ ಲೇಪನ ಮಾಡಿಸಿ ಭಕ್ತಿ ಭಾವ ಮೆರೆದಿದ್ದಾರೆ.

ಇನ್ನೂ ಶಿರಡಿ ಸಾಯಿಬಾಬಾರನ್ನು ನೋಡಬೇಕು ಅಂತ ಚಿಕ್ಕಬಳ್ಳಾಪುರದಿಂದ ಶಿರಡಿಗೆ ಹೋಗಿ ಬರಬೇಕು ಅಂದರೆ ಕನಿಷ್ಠ ಮೂರು ದಿನಗಳಾದರೂ ಬೇಕು. ಪ್ರವಾಸ ಪ್ರಯಾಸದ ಮಧ್ಯೆ ಹರಸಾಹಸ ಪಡಬೇಕು. ಶಿರಡಿಯ ಸಾಯಿಬಾಬಾ ದೇಗುಲದ ಮಾದರಿಯಲ್ಲೆ ದೇವಸ್ಥಾನ ನಿರ್ಮಿಸಿ ಬಾಬಾರ ವಿಗ್ರಹವನ್ನು ಇಲ್ಲೇ ಪ್ರತಿಷ್ಠಾಪನೆ ಮಾಡಿದರೆ ಹೇಗೆ ಎಂದುಕೊಂಡು ಜಿ.ಎಚ್.ನಾಗರಾಜ್, 7 ವರ್ಷಗಳ ಹಿಂದೆ ದೇವಸ್ಥಾನ ನಿರ್ಮಾಣಕ್ಕೆ ಕೈ ಹಾಕಿ, ಐದು ವರ್ಷಗಳ ನಂತರ ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರದ ಶಿರಡಿ ಸಾಯಿಬಾಬಾರ ದೇವಸ್ಥಾನ ಬೆಂಗಳೂರು ಪುಟ್ಟಪರ್ತಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಪುಟ್ಟಪರ್ತಿಯ ಸಾಯಿಬಾಬಾ ಭಕ್ತರು ಮೊದಲು ಇಲ್ಲಿರುವ ಬಾಬಾರ ದರ್ಶನ ಪಡೆದು ಮುಂದೆ ತೆರಳುತ್ತಾರೆ. ಇನ್ನೂ ಶಿರಡಿಗೆ ಹೋಗಿ ಸಾಯಿಬಾಬಾ ದರ್ಶನ ಪಡೆಯದವರು ಹಾರೋಬಂಡೆ ಗ್ರಾಮಕ್ಕೆ ಬಂದು ಬಾಬಾರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಬಾಬಾರ ಅಮೃತ ಶಿಲೆಯ ವಿಗ್ರಹದ ಜೊತೆ ಚಿನ್ನ ಲೇಪಿತ ಅಲಂಕಾರ ವೀಕ್ಷಿಸುವುದು ಕಣ್ಣು ಮತ್ತು ಮನಸ್ಸಿಗೆ ಆನಂದ ಉಂಟುಮಾಡುತ್ತದೆ ಎನ್ನುತ್ತಾರೆ ಬಾಬಾ ಭಕ್ತರು.

ವರದಿ: ಭೀಮಪ್ಪ ಪಾಟೀಲ್,
ಟಿವಿ9 ಚಿಕ್ಕಬಳ್ಳಾಪುರ

Temple Tour: ಭಾರತಾಂಬೆಗೊಂದು ಭವ್ಯ ಮಂದಿರ ಇರೋದೆಲ್ಲಿ ಗೊತ್ತಾ?

17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದುT

Read Full Article

Click on your DTH Provider to Add TV9 Kannada