ಚಿಕ್ಕಬಳ್ಳಾಪುರ: ಬಂಡಹಳ್ಳಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಮತ್ತೆ ಕಂಪಿಸಿದ ಭೂಮಿ
ಪದೇಪದೆ ಭೂಕಂಪ ಹಿನ್ನೆಲೆ ಕೆಲವರು ಗ್ರಾಮ ತೊರೆದಿದ್ದಾರೆ. ರಾತ್ರಿ ವೇಳೆ ಬೇರೆಡೆ ಹೋಗಿ ಬೆಳಗ್ಗೆ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾರೆ. ಪದೇಪದೆ ಭೂಕಂಪನದಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ.
ಚಿಕ್ಕಬಳ್ಳಾಪುರ: ಇಲ್ಲಿನ ಬಂಡಹಳ್ಳಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪನದ ಅನುಭವ ಉಂಟಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಸುತ್ತಮುತ್ತ ಕಂಪನ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂಜೆ 7 ಗಂಟೆ 8 ನಿಮಿಷಕ್ಕೆ ಲಘು ಕಂಪನ ಬಗ್ಗೆ ಮಾಹಿತಿ ದೊರಕಿದೆ. ಗ್ರಾಮದ ಸುತ್ತಮುತ್ತ ಈಗಾಗಲೇ ಮೂರು ಬಾರಿ ಕಂಪನ ಉಂಟಾಗಿದೆ. ಪದೇಪದೆ ಭೂಕಂಪ ಹಿನ್ನೆಲೆ ಕೆಲವರು ಗ್ರಾಮ ತೊರೆದಿದ್ದಾರೆ. ರಾತ್ರಿ ವೇಳೆ ಬೇರೆಡೆ ಹೋಗಿ ಬೆಳಗ್ಗೆ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾರೆ. ಪದೇಪದೆ ಭೂಕಂಪನದಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ.
ಮೂರನೆ ಭಾರಿಗೆ ಗುರುವಾರ ಚಿಕ್ಕಬಳ್ಳಾಫುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಭೂಕಂಪವಾದ ಹಿನ್ನೆಲೆ ತಾಲೂಕಿನ ಶೆಟ್ಟಿಗೆರೆ ಗ್ರಾಮಸ್ಥರು ಭಯ ಭೀತರಾಗಿದ್ದರು. ಇದ್ರಿಂದ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ದೈರ್ಯ ತುಂಬಿದ್ದರು.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹಾಗೂ ಅಡ್ಡಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಲ್ಲಿ ಮೂರು ಭಾರಿ ಭೂ ಕಂಪನವಾದ ಹಿನ್ನಲೆ ತಾಲೂಕಿನ ಬಂಡಹಳ್ಳಿ ಗ್ರಾಮದ ಜನ ಭಯ ಭೀತರಾಗಿದ್ದು, ಬಿರುಕು ಬಿಟ್ಟ ಮನೆಗಳನ್ನು ತೊರೆದು ಬೇರೆ ಊರುಗಳ ಸಂಬಂಧಿಕರ ಮನೆಗಳಿಗೆ ತೆರಳಿದ್ದರು.
ಆದರೆ ಇನ್ನೂ ಕೆಲವರು ಬಿರಕು ಬಿಟ್ಟ ಮನೆಗಳಲ್ಲಿ ವಾಸ ಮಾಡ್ತಿದ್ದು ಮತ್ತೆ ಯಾವಾಗ ಭೂಕಂಪನ ಆಗುತ್ತೆ ಅನ್ನೊ ಭೀತಿಯಲ್ಲಿ ದಿನದೂಡತ್ತಿದ್ದರು. 50 ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗಿಲ್ಲ. ಈ ವರ್ಷ ಹಲವೆಡೆ ಮಹಾ ಮಳೆಯಾಗಿದೆ. ಮಳೆಯಿಂದ ಅಂತರ್ಜಲದಲ್ಲಿ ಬದಲಾವಣೆಯಾಗಿದೆ. ಭೂಕಂಪದ ಅಲೆಗಳು 1 ತಿಂಗಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಲಬುರಗಿ ಲಘುಭೂಕಂಪನಕ್ಕೆ ಪರಿಹಾರ: ತಾತ್ಕಾಲಿಕ ಟಿನ್ ಶೆಡ್ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಮಂಜೂರು