AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ವಿರುದ್ಧ ಸಮರ ನಿರಂತರ ಎಂದ ಪ್ರದೀಪ್ ಈಶ್ವರ್​​ಗೆ ಎಂಸಿ ಸುಧಾಕರ್‌ ಸೈಲೆಂಟ್ ಸ್ಕೆಚ್!

ಕಾಂಗ್ರೆಸ್ಸಿನ ಎರಡು ಬಣಗಳ ನಡುವಿನ ಪೈಪೋಟಿ ಚಿಕ್ಕಬಳ್ಳಾಪುರದಲ್ಲಿ ತೀವ್ರ ಸ್ವರೂಪವನ್ನು ಪಡೆಯುತ್ತಿದೆ. ಶಾಸಕರಾದ ಪ್ರದೀಪ್ ಈಶ್ವರ್, ಎಂಸಿ ಸುಧಾಕರ್ ನಡುವೆ ಆರಂಭವಾದ ಏಕವಚನದ ವಾಕ್ಸಮರ ತಾರಕಕ್ಕೇರಿದೆ. ಸಾಮಾಜಿಕ ಜಾಲತಾಣಗಳ ​ಮೂಲಕ ಸವಾಲು, ಎಚ್ಚರಿಕೆ ನೀಡುತ್ತಿದ್ದ ಪ್ರದೀಪ್ ಈಶ್ವರ್​​ಗೆ ಸುಧಾಕರ್ ಒಂದೇ ಮಾತಿನಲ್ಲಿ ತಿರುಗೇಟು ನೋಡಿದ್ದಾರೆ.

ನಿನ್ನ ವಿರುದ್ಧ ಸಮರ ನಿರಂತರ ಎಂದ ಪ್ರದೀಪ್ ಈಶ್ವರ್​​ಗೆ ಎಂಸಿ ಸುಧಾಕರ್‌ ಸೈಲೆಂಟ್ ಸ್ಕೆಚ್!
Pradeep Eshwar And Mc Sudhakar
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Oct 08, 2026 | 4:42 PM

Share

ಚಿಕ್ಕಬಳ್ಳಾಪುರ, (ಅಕ್ಟೋಬರ್ 08): ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ನಡುವಿನ ರಾಜಕೀಯ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರದೀಪ್ ಈಶ್ವರ್ ಕಳೆದ ನಾಲ್ಕೈದು ದಿನಗಳಿಂದ ಎಂಸಿ ಸುಧಾಕರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಅದು ಮತ್ತೆ ಮುಂದುವರೆದಿದ್ದು, ಸುಧಾಕರ್ ಅವರು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ವಿರೋಧಿಯಾಗಿದ್ದು, ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಕೆ.ಎಚ್. ಮುನಿಯಪ್ಪ ಸೇರಿ ಕಾಂಗ್ರೆಸ್ ನಾಯಕರನ್ನು ವಿನಾಕಾರಣ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದು, ಅವರ ವಿರುದ್ಧ ‘ಸಮರ ನಿರಂತರ’ ಎಂದು ಸವಾಲು ಹಾಕಿದ್ದಾರೆ.

ಸುಧಾಕರ್ ವಿರುದ್ಧ ಸಮರ ಮುಂದುವರಿಸಿದ ಪ್ರದೀಪ್ ಈಶ್ವರ್

ಚಿಂತಾಮಣಿಯ ಡಾಕ್ಟರ್‌ಗೆ ನಮಸ್ಕಾರ. ಚಿಂತಾಮಣಿಯಲ್ಲಿ ದಲಿತರನ್ನು ಟಾರ್ಗೆಟ್‌ ಮಾಡುತ್ತಿದ್ದೀರ, ಅಲ್ಪಸಂಖ್ಯಾತರನ್ನು ಟಾರ್ಗೆಟ್‌ ಮಾಡುತ್ತಿದ್ದೀರ, ಹಿಂದುಳಿದವರನ್ನು ಟಾರ್ಗೆಟ್‌ ಮಾಡುತ್ತಿದ್ದೀರ. ಬಲಿಜಿಗರ ಮುಖ ಕಂಡರೆ ನಿಮಗೆ ಆಗುವುದಿಲ್ಲ. ಕುರುಬರನ್ನು ನೀವು ಹತ್ತಿರಕ್ಕೂ ಸೇರಿಸುವುದಿಲ್ಲ. ಎಸ್‌ಸಿ ಎಸ್‌ಟಿಗಳನ್ನು ತಿಂಗಳುಗಟ್ಟಲೆ ನೀವು ಭೇಟಿಯಾಗುವುದೇ ಇಲ್ಲ ” ಎಂದು ಪ್ರದೀಪ್‌ ಈಶ್ವರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಕಾಂಗ್ರೆಸ್​​​ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್‌ ಅಮಾನತಿಗೆ ಆಗ್ರಹ

“ನಿಮ್ಮ ಎಲ್ಲಾ ಪದವಿಗಳನ್ನು ನಿಮ್ಮ ಸಂಬಂಧಿಕರಿಗೆ ಕೊಡುತ್ತೀರ. ಪ್ರತಿಯೊಂದು ಅನ್ಯ ಸಮುದಾಯವನ್ನು ಟಾರ್ಗೆಟ್ ಮಾಡುವ ನಿಮ್ಮ ನೀಚ ಮನಸ್ಥಿತಿಯನ್ನು ನಾನು ಧಿಕ್ಕರಿಸುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ ನಿಮ್ಮದು. ಪಕ್ಷದ ಹಿರಿಯರಾದ ಕೆ.ಎಚ್. ಮುನಿಯಪ್ಪ ಅವರನ್ನು ವಿನಾಕಾರಣ ಟಾರ್ಗೆಟ್‌ ಮಾಡ್ತೀರ. ಶಿಡ್ಲಘಟ್ಟದ ಕಾಂಗ್ರೆಸ್ ಅಭ್ಯರ್ಥಿಯಾದ ರಾಜು ಗೌಡರನ್ನು ವಿನಾಕಾರಣ ಟಾರ್ಗೆಟ್‌ ಮಾಡ್ತೀರ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡಿದ್ದರೆ, ನನ್ನನ್ನೂ ವಿನಾಕಾರಣ ಟಾರ್ಗೆಟ್‌ ಮಾಡ್ತೀರ ” ಎಂದು ಕಿಡಿಕಾರಿದ್ದಾರೆ.

“ಮತ್ತೊಮ್ಮೆ ಹೇಳುತ್ತಿದ್ದೇನೆ, ಅಲ್ಪಸಂಖ್ಯಾತ, ದಲಿತ, ಹಿಂದುಳಿದವರ ವಿರೋಧಿ ನೀನು. ನಿನ್ನ ಸಂಬಂಧಿಕರನ್ನು ಬಿಟ್ಟು ಮತ್ಯಾರೂ ನಿನಗೆ ಬೇಕಾಗಿಲ್ಲ. ಏನೇ ಆಗಲಿ ಡಿಕ್ಟೇಟರ್‌, ನಿನ್ನ ವಿರುದ್ಧ ಸಮರ ನಿರಂತರ ಎಂದು ಸವಾಲು ಹಾಕಿದ್ದಾರೆ.

ಒಂದೇ ಮಾತಿನಲ್ಲಿ ಪ್ರದೀಪ್ ಈಶ್ವರ್​​​ಗೆ ಸುಧಾಕರ್ ತಿರುಗೇಟು

ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಶಾಸಕ ಪ್ರದೀಪ್ ಈಶ್ವರ್​​ಗೆ ಸುಧಾಕರ್ ಒಂದೇ ಮಾತಿನಲ್ಲಿ ತಿರುಗೇಟು ನೀಡಿದ್ದಾರೆ. ನಮ್ಮ ಮೌನ ದೌರ್ಬಲ್ಯವಲ್ಲ. ಕಾಂಗ್ರೆಸ್​ ಪಕ್ಷ ನನ್ನನ್ನು ಗುರುತಿಸಿ ಮಂತ್ರಿಯನ್ನು ಮಾಡಿತ್ತು. ಎಲ್ಲಾ ವಿಚಾರಗಳು ಸಿಎಂ, ಕೆಪಿಸಿಸಿ ಅಧ್ಯಕ್ಷರ ಗಮನದಲ್ಲಿದೆ. ಈ ಬಗ್ಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಈ ಮೂಲಕ ಪ್ರದೀಪ್ ಈಶ್ವರ್​​ಗೆ ಪಕ್ಷ ಏನು ಹೇಳುತ್ತೆ ಎನ್ನುವುದನ್ನು ಮೌನವಾಗಿಯೇ ಎದುರು ನೋಡುತ್ತಿದ್ದಾರೆ.

ಸಿಎಂ-ಕೆಪಿಸಿಸಿ ಅಧ್ಯಕ್ಷರ ನಿರ್ಧಾರ ಕಾಯುತ್ತಿರುವ ಸುಧಾಕರ್

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಪರೋಕ್ಷವಾಗಿ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಪೋಸ್ಟ್ ಮಾಡಿ ವಾಗ್ದಾಳಿ ನಡೆಸುತ್ತಿದ್ದ ಹಿನ್ನಲೆ ಡಾ.ಎಂ.ಸಿ.ಸುಧಾಕರ್ ಕೊನೆಗೂ ಪ್ರದೀಪ್ ವಿರುದ್ದ ಏನು ಮಾತನಾಡದೆ ಪಕ್ಷದ ನಿರ್ಧಾರದತ್ತ ಕಾಯುತ್ತಿದ್ದಾರೆ. ಇನ್ನೂ ತಾವು ಕಾಂಗ್ರೆಸ್​​​ ನಲ್ಲಿ ಜವಾಬ್ದಾರಿಯುತ ಶಾಸಕವಾಗಿದ್ದು, ಎಲ್ಲಾ ವಿಚಾರಗಳು ಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅದ್ಯಕ್ಷರ ಗಮನದಲ್ಲಿ ಇದೆ. ಅವರು ಸೂಕ್ತ ನಿರ್ಧಾರ ಮಾಡ್ತಾರೆ. ನಾನು ಯಾವುದೆ ಪ್ರತಿಕ್ರಿಯೆ ನೀಡಲ್ಲ. ನಮ್ಮ ಮೌನ ದೌರ್ಬಲ್ಯವಲ್ಲ, ಪಕ್ಷ ನನ್ನನ್ನು ಗುರುತಿಸಿ ಮಂತ್ರಿ ಮಾಡಿತ್ತು. ನನಗೆ ಜವಾಬ್ದಾರಿ ಇದೆ ಎಂದಿದ್ದಾರೆ.

ಬೆಂಬಲಿಗರ ಸಭೆ ಮಾಡಿ ಬಹಿರಂಗ ಹೇಳಿಕೆ ನೀಡದಂತೆ ಸುಧಾಕರ್ ಸೂಚನೆ

ಇನ್ನು ಎಂಸಿ ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿಂದು ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿದ್ದು, ಪಕ್ಷದ ವಿರುದ್ಧವಾಗಿ ಯಾರೂ ಕೂಡ ಬಹಿರಂಗ ಹೇಳಿಕೆ ನೀಡಬಾರದು. ಶಾಸಕರು, ಮುಖಂಡರು ಸೇರಿ ಯಾರೇ ಆಗಿರಲಿ ಬಹಿರಂಗ ಹೇಳಿಕೆ ನೀಡಬೇಡಿ. ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಮತ್ತು ನಾಯಕರಿಗೆ ಮುಜುಗರ ಆಗಲಿದೆ. ಏನೇ ಸಮಸ್ಯೆ, ಭಿನ್ನಮತ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ. ಸಿಎಂ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷರಿಗೆ ಎಲ್ಲಾ ವಿಚಾರಗಳು ಗೊತ್ತಿವೆ. ಯಾರು ಆತುರಪಡಬೇಡಿ ಎಂದು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Thu, 8 October 26

Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More