SJC ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ಕ್ಯಾಟ್ ವಾಕ್ ಗೆ ನೆಲವೇ ನಾಚುವಂತಿತ್ತು! ಸಿನಿಮಾ ಗೀತೆಗಳಿಗೆ ಕುಣಿದು ಸುಸ್ತಾದ ವಿದ್ಯಾರ್ಥಿನಿಯರು! ಇಲ್ಲಿದೆ ಜಲಕ್
ಪ್ರತಿದಿನ ಪಾಠ ಪ್ರವಚನ, ಲ್ಯಾಬ್ ಪ್ರಯೋಗಗಳಲ್ಲಿಯೇ ಗಂಭೀರವಾಗಿ ಮುಳುಗಿಹೋಗುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಸಂಭ್ರಮಾ 2022 ಅನ್ನೊ ಕಾರ್ಯಕ್ರಮ ಪ್ರಯುಕ್ತ ವಿವಿಧ ಕಲೆ ಸಂಸ್ಕೃತಿ ಫ್ಯಾಷನ್ ಶೋ, ಮಿಮಿಕ್ರಿ, ಸಾಂಗ್ ನೃತ್ಯ ಪ್ರಾಕಾರಗಳಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸುವುದರ ಮೂಲಕ ನವೋಲ್ಲಾಸ ತುಂಬಿಕೊಂಡಂತೆ ಕಂಡು ಬಂದರು.
ಅದು ಹೇಳಿ ಕೇಳಿ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜು. ಪ್ರತಿದಿನ ಅಲ್ಲಿ ಯಾರು ಎಕ್ಟ್ರಾಗಳನ್ನು ಕೆಮ್ಮಂಗಿಲ್ಲ, ಪ್ರತಿದಿನ ವಿದ್ಯಾಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಗಳು, ಕಾಲೇಜಿನ ಸಂಭ್ರಮಾಚರಣೆ ಪ್ರಯುಕ್ತ ಕಲರ್ ಫುಲ್ ಫ್ಯಾಷನ್ ಶೋ ಸೇರಿದಂತೆ ಮಸ್ತ್ ಮಸ್ತ್ ಚಲನಚಿತ್ರ ಗೀತೆಗಳ ರೊಮ್ಯಾಂಟಿಕ್ ಹಾಡುಗಳಿಗೆ ವಿದ್ಯಾರ್ಥಿನಿಯರು ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಕ್ಕೆ ನೆಲವೇ ನಾಚುಂವಂತಾಗಿತ್ತು. ಅಷ್ಟಕ್ಕೂ ಅದೆಲ್ಲಿ ಅಂತೀರಾ? ಇಲ್ಲಿದೆ ಜಲಕ್ ನೋಡಿ!
ಖ್ಯಾತ ಚಲನಚಿತ್ರ ನಟ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಲನಚಿತ್ರದ ವೈರಲ್ ಹಾಡು ಎಕ್ಕ ಸಕ್ಕ ಎಕ್ಕ ಸಕ್ಕಾ ಸಾಂಗ್ ಗೆ ವಿದ್ಯಾರ್ಥಿನಿಯರು ಮೈ ಚಳಿ ಬಿಟ್ಟು, ಬಳ್ಳಿಯಂತೆ ಸೊಂಟ ಬಳುಕಿಸುತ್ತಾ… ಎದುರುಗಡೆ ಇರುವ ಕ್ಲಾಸ್ಮೇಟುಗಳನ್ನು ಮಾದಕ ನೋಟದಲ್ಲಿ ಸೆಳೆಯುತ್ತಾ… ಡ್ಯಾನ್ಸ್ ಮಾಡ್ತಿದ್ದು ಚಿಕ್ಕಬಳ್ಳಾಪುರ ನಗರದ ಎಸ್.ಜೆ.ಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ (S J C Institute of Technology Chikkaballapur).
ಹೌದು!! ಕಾಲೇಜಿನಲ್ಲಿ ಸಂಭ್ರಮಾ 2022 ಅನ್ನೊ (Sambrama 2k22) ಕಾರ್ಯಕ್ರಮದ ಪ್ರಯುಕ್ತ ಸ್ವತಃ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಬೆಳಗಿನಿಂದ ರಾತ್ರಿ ವರೆಗೂ ನಡೆದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಫ್ಯಾಷನ್ ಶೋ ಮನಸೊರೆಗೊಂಡಿತು. ಸಿನಿಮ್ಯಾಟಿಕ್ ಫ್ಯಾಷನ್ ಶೋ ವಿಭಾಗದಲ್ಲಿ ವಿದ್ಯಾರ್ಥಿನಿಯರು ಕ್ಯಾಟ್ ವ್ಯಾಕ್ ನಲ್ಲಿ ಎಂಟ್ರಿ ಆಗ್ತಿದ್ರೆ… ಕಾಲೇಜಿನ ಆವರಣದಲ್ಲಿದ್ದ ಇನ್ನಿತರ ವಿದ್ಯಾರ್ಥಿಗಳು ಸಿಳ್ಳೆ ಕೇಕೆ ಹಾಕಿ ಸಂಭ್ರಮಿಸಿದರು.
ಸ್ಟಾಪ್ ಬಾಡಿ ಶೇಮಿಂಗ್ ವಿಭಾಗದಲ್ಲಿ ವಿದ್ಯಾರ್ಥಿನಿಯರ ಕ್ಯಾಟ್ ವಾಕ್ ಝಲಕ್ ಮನಮೋಹಕವಾಗಿತ್ತು. ವೇಷಭೂಷಣ ವಿಭಾಗದಲ್ಲಿ ನಡೆದ ಫ್ಯಾಷನ್ ಶೋ ವಿದ್ಯಾರ್ಥಿಗಳನ್ನು ರೋಮಾಂಚನಗೊಳಿಸಿತು. ನೇಚರ್ ಹಾಗೂ ತಾಂತ್ರಿಕತೆ ಮಿಶ್ರ ಸಂಯೋಜನೆಯಲ್ಲಿ ನಡೆದ ಫ್ಯಾಷನ್ ಶೋ ರಮ್ಯ ಲೋಕವನ್ನೇ ಅನಾವರಣಗೊಳಿಸಿತು. ಸಮ್ಮಿಲನ ಉಡುಗೆ ವಿಭಾಗ, ವೆಡ್ಡಿಂಗ್ ಔಟ್ ಫಿಟ್ಸ್ ವಿಭಾಗದಲ್ಲಿ ವಿದ್ಯಾರ್ಥಿನಿ -ವಿದ್ಯಾರ್ಥಿಗಳು ಸ್ಪರ್ಧೆಗೆ ಬಿದ್ದವರಂತೆ ನಾಮುಂದು ತಾಮುಂದು ಅಂತಾ ಹೊಸ ರೊಮ್ಯಾಂಟಿಕ್ ಲೋಕವನ್ನೆ ಧರೆಗಿಳಿಸಿದ್ದರು.
ಕಾಲೇಜಿನ ಕ್ಯಾಂಪಸ್ ಆವರಣದಲ್ಲಿ ಎಲ್ಲಿ ನೋಡಿದ್ರೂ ಕಲರ್ ಫುಲ್ ಹಕ್ಕಿಗಳ ಲೋಕವೇ ಧರಿಗಿಳಿದಂತಾಗಿತ್ತು, ಒಂದೆಡೆ ಕಲೆ ನೃತ್ಯ ಫ್ಯಾಷನ್ ಶೋ ಸೇರಿದಂತೆ ವಿನೂತನ ಹಾಡು ನೃತ್ಯಗಳು ನಡೆದವು. ಇತ್ತೀಚೆಗೆ ವೈರಲ್ ಆಗಿರುವ ನಟ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಲನಚಿತ್ರದ ವೈರಲ್ ಹಾಡು ಎಕ್ಕ ಸಕ್ಕ ಎಕ್ಕ ಸಕ್ಕಾ ಸಾಂಗ್ ಗೆ ವಿದ್ಯಾರ್ಥಿನಿಯರು ಮೈ ಚಳಿ ಬಿಟ್ಟು, ಬಳ್ಳಿಯಂತೆ ಸೊಂಟ ಬಳುಕಿಸುತ್ತಾ ಕುಣಿದಾಡಿದ್ರು. ಇನ್ನು ಕೆಲವು ವಿದ್ಯಾರ್ಥಿಗಳು ನಾಗಿನಿ ಡ್ಯಾನ್ಸ್ ಗೆ ನೃತ್ಯ ಮಾಡಿ ಸೈ ಎನಿಸಿಕೊಂಡರು. ರ್ಯಾಂಪ್ ಡ್ಯಾನ್ಸರ್ ಹಾಗೂ ಸಿಂಗರ್ ಚಂದನ್ ಶೆಟ್ಟಿ ಹಾಡಿರುವ ಇವಳ ನೋಡಣ್ಣ ಸಾಂಗ್ ಗೆ ಹುಡುಗ ಹುಡುಗಿಯರು ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ರು.
ಒಟ್ಟಾರೆ ಪ್ರತಿದಿನ ಪಾಠ ಪ್ರವಚನ, ಲ್ಯಾಬ್ ಪ್ರಯೋಗಗಳಲ್ಲಿಯೇ ಗಂಭೀರವಾಗಿ ಮುಳುಗಿಹೋಗುತ್ತಿದ್ದ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಸಂಭ್ರಮಾ 2022 ಅನ್ನೊ ಕಾರ್ಯಕ್ರಮ ಪ್ರಯುಕ್ತ ವಿವಿಧ ಕಲೆ ಸಂಸ್ಕೃತಿ ಫ್ಯಾಷನ್ ಶೋ, ಮಿಮಿಕ್ರಿ, ಸಾಂಗ್ ನೃತ್ಯ ಪ್ರಾಕಾರಗಳಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸುವುದರ ಮೂಲಕ ನವೋಲ್ಲಾಸ ತುಂಬಿಕೊಂಡಂತೆ ಕಂಡು ಬಂದರು.
-ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ