ಚಿಕ್ಕಬಳ್ಳಾಪುರ: ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ನಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ; ಭೂ ವಿಜ್ಞಾನಿ ಕೃಷ್ಣಮೂರ್ತಿ
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅರ್ಕುಂದ ಗ್ರಾಮ ಬಳಿ ಗಣಿಗಾರಿಕೆ ವೇಳೆ ಬ್ಲಾಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸದಂತೆ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಕೃಷ್ಣಮೂರ್ತಿ ಭೇಟಿ ನೀಡಿ ಬ್ಲಾಸ್ಟಿಂಗ್ ನಲ್ಲಿ ಯಾವುದೆ ಲೋಪದೋಷ ನಿಯಮ ಉಲ್ಲಂಘನೆ ಆಗಿಲ್ಲ. ಬಂಡೆ ಮೇಲೆ ಮಣ್ಣಿರುವ ಕಾರಣ ದೊಡ್ಡದಾಗಿ ಬ್ಲಾಸ್ಟ್ ಆಗಿದೆ. ಗಣಿ ಗುತ್ತಿಗೆಯಲ್ಲಿ ಹಗಲಲ್ಲೇ ಬ್ಲಾಸ್ಟಿಂಗ್ ನಡೆಸಬಹುದು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು (Gauribidanur) ತಾಲೂಕಿನ ಅರ್ಕುಂದ ಗ್ರಾಮ ಬಳಿ ಕಲ್ಲು (Stone Mining) ಗಣಿಗಾರಿಕೆ ವೇಳೆ ಬ್ಲಾಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸದಂತೆ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ (Department of mines and geology) ವಿಜ್ಞಾನಿ ಕೃಷ್ಣಮೂರ್ತಿ ಭೇಟಿ ನೀಡಿದರು. ಈ ಬಗ್ಗೆ ಮಾತನಾಡಿದ ಅವರು ಆರ್.ಅಶೋಕ್ ಕುಮಾರ್ ಎಂಬುವರಿಗೆ ಹುಚ್ಚಲಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ. 27ರಲ್ಲಿ 4 ಎಕರೆ 36 ಗುಂಟೆಯಲ್ಲಿ 20 ವರ್ಷ ಕಲ್ಲು ಗಣಿಗಾರಿಕೆಗೆ ನಡೆಸಲು ಅನುಮತಿ ನೀಡಲಾಗಿದೆ. ಕಲ್ಲು ಗಣಿಕಾರಿಕೆಯಲ್ಲಿ ಬ್ಲಾಸ್ಟಿಂಗ್ ನಡೆಸಲು ಡಿ.ಜಿ.ಎಂ.ಎಸ್ ಸಹ ಅನುಮತಿ ನೀಡಿದೆ. ಬ್ಲಾಸ್ಟಿಂಗ್ ನಡೆಸಲು ದ್ವೀತಿಯ ದರ್ಜೆ ಮ್ಯಾನೇಜರ್ ನನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
ಅಕ್ಕ ಪಕ್ಕ ಅರ್ಧ ಕೀಲೋ ಮೀಟರ್ ನಲ್ಲಿ ಜನ ವಸತಿ ಕೃಷಿ ಭೂಮಿ ಇಲ್ಲ. ಬ್ಲಾಸ್ಟ್ ಮಾಡಿದ ಕಲ್ಲನ್ನು ಶೋಬಾ ಎಂಟರ್ ಪ್ರೈಸಸ್ ಕ್ರಷರ್ ನೀಡಲಾಗುತ್ತಿದೆ. ಕಲ್ಲು ಕ್ವಾರಿ ಬಳಿ ಎರಡು ಕ್ರಷರ್ ಯೂನಿಟ್ ಗಳಿವೆ. ಬ್ಲಾಸ್ಟಿಂಗ್ ನಲ್ಲಿ ಯಾವುದೆ ಲೋಪದೋಷ ನಿಯಮ ಉಲ್ಲಂಘನೆ ಆಗಿಲ್ಲ. ಬಂಡೆ ಮೇಲೆ ಮಣ್ಣಿರುವ ಕಾರಣ ದೊಡ್ಡದಾಗಿ ಬ್ಲಾಸ್ಟ್ ಆಗಿದೆ. ಗಣಿ ಗುತ್ತಿಗೆಯಲ್ಲಿ ಹಗಲಲ್ಲೇ ಬ್ಲಾಸ್ಟಿಂಗ್ ನಡೆಸಬಹುದು ಎಂದು ತಿಳಿಸಿದರು.
ಇದನ್ನು ಓದಿ: ಕಾರು ನಿಲ್ಲಿಸಿ ಅಕ್ರಮವಾಗಿ ಫೈನ್ ಹಾಕಿದ್ದ ಹಲಸೂರು ಗೇಟ್ ಎ.ಎಸ್.ಐ ಮತ್ತು ಹೆಡ್ ಕಾನ್ಸ್‌ಟೇಬಲ್ ಸಸ್ಪೆಂಡ್
ಅರ್ಕುಂದ ಬಳಿ ಗಣಿಗಾರಿಕೆಯಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಿಯ ಕದರಿದೇವರಹಳ್ಳಿ ನಿವಾಸಿ ನಾಗರಾಜ್ ಮಾತನಾಡಿ ಪ್ರತಿದಿನ ಸಂಜೆಯಾದ್ರೆ ಸಾಕು ಗಣಿಗಾರಿಕೆಯಲ್ಲಿ ಬ್ಲಾಸ್ಟ್ ಮಾಡುತ್ತಾರೆ. ಬ್ಲಾಸ್ಟ್ ಗೆ ಭೂಮಿಯೆ ಗಡ ಗಡ ನಡುಗುತ್ತೆ. ಕಲ್ಲು ಕ್ವಾರಿ ಗಣಿಗೆ ಹೊಂದಿಕೊಂಡಂತೆ ಕೆರೆ, 66 ಕೆ.ವಿ ವಿದ್ಯುತ್ ಲೈನ್ ಗಳಿವೆ. ಬ್ಲಾಸ್ಟಿಂಗ್ ಅಬ್ಬರಕ್ಕೆ ಗ್ರಾಮದಲ್ಲಿ ಮನೆಗಳು ಶೆಕ್ ಆದ ಅನುಭವ ಆಗುತ್ತೆ. ಗಣಿ ಗುತ್ತಿಗೆ ನೀಡಬಾರದು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದೇವು. ಸ್ಥಳಿಯ ಎರಡು ಮೂರು ಗ್ರಾಮಸ್ಥರು ಗೌರಿಬಿದನೂರು ತಹಶೀಲ್ದಾರ್ , ಜಿಲ್ಲಾಧಿಕಾರಿ, ಪರಿಸರ ಇಲಾಖೆಗೂ ಮನವಿ ಮಾಡಿದ್ದೇವೆ. ಆದರೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಗಣಿ ಗುತ್ತಿಗೆಗಳನ್ನು ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.