ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಸುಟ್ಟು ಕರಕಲಾದ ಬೆಳೆ; ಕೃಷಿ ಕನಸು ಕಂಡಿದ್ದ ಚಿಕ್ಕಮಗಳೂರು ರೈತ ಕಂಗಾಲು

ರೈತ ರವಿ ಅವರ ಜಮೀನಿನ ಒಳಗೆ 11 ಕೆವಿ ವಿದ್ಯುತ್ ಪರಿವರ್ತಕ ಆಳವಡಿಸಿದ್ದು, ಆ ಪರಿವರ್ತಕದಿಂದ ಹೊರಹೊಮ್ಮುವ ಕಿಡಿಗಳಿಂದ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

  • ಪ್ರಶಾಂತ್
  • Published On - 9:57 AM, 14 Apr 2021
ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಸುಟ್ಟು ಕರಕಲಾದ ಬೆಳೆ; ಕೃಷಿ ಕನಸು ಕಂಡಿದ್ದ ಚಿಕ್ಕಮಗಳೂರು ರೈತ ಕಂಗಾಲು
ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಸುಟ್ಟು ಕರಕಲಾದ ಬೆಳೆ

ಚಿಕ್ಕಮಗಳೂರು: ತನ್ನ 5 ಎಕರೆ ಜಮೀನಿನಲ್ಲಿ ವಿವಿಧ ಹಣ್ಣಿನ ಗಿಡಗಳನ್ನ ನೆಟ್ಟು ಪ್ರಗತಿಪರ ಕೃಷಿಕನಾಗಬೇಕು ಎಂದು ಕನಸು ಕಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ಕೃಷಿಕರೊಬ್ಬರ ಕನಸಿಗೆ ಮೆಸ್ಕಾಂ ಇಲಾಖೆ ಶಾಕ್ ನೀಡಿದೆ. ಪ್ರಗತಿಪರ ಕೃಷಿಕನಾಗಬೇಕು ಎಂದು ತಿಳಿದಿದ್ದ ರೈತ ರವಿ ಈ ಕಾರಣಕ್ಕೆ ಬೇರೆ ಬೇರೆ ದೇಶ ಸುತ್ತಿದ್ದರು ತಮ್ಮ ಊರಿಗೆ ಮರಳಿ ಬಂದಿದ್ದರು. ಆದರೆ ಈಗ ಕೃಷಿಯ ಕನಸು ನಸಾಗದೆ ಹಾಗೇ ಉಳಿದಿದೆ.

ಚಿಕ್ಕಮಗಳೂರು ತಾಲೂಕಿನ ಲಕ್ಷ್ಮೀಪುರದ ರವಿ ಎಂಬುವರ ತೋಟ ಬೆಂಕಿಗೆ ಆಹುತಿಯಾಗಿದೆ. ರೈತ ರವಿ ಅವರ ಜಮೀನಿನ ಒಳಗೆ 11 ಕೆವಿ ವಿದ್ಯುತ್ ಪರಿವರ್ತಕ ಆಳವಡಿಸಿದ್ದು, ಆ ಪರಿವರ್ತಕದಿಂದ ಹೊರಹೊಮ್ಮುವ ಕಿಡಿಗಳಿಂದ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಕೃಷಿಯಲ್ಲಿ ವಿಭಿನ್ನ ಪ್ರಯೋಗ ಮಾಡಬೇಕು ಎನ್ನುವ ಮಹತ್ವಕಾಂಕ್ಷೆಯನ್ನ ಇಟ್ಟುಕೊಂಡು ವಿದೇಶದಲ್ಲಿ ಕೆಲಸದಲ್ಲಿದ್ದರೂ ಕೃಷಿಯ ಕನಸನ್ನ ಹೊತ್ತು ತವರೂರಿಗೆ ರವಿ ಮರಳಿದ್ದರು. ಅದರಂತೆಯೇ ಹಲಸು, ಮಾವು, ತೆಂಗು, ಸೀಬೆ, ಜೊತೆಗೆ ಶ್ರೀಗಂಧ ಹಾಗೂ ಕಾಡು ಜಾತಿಯ ಮರಗಳನ್ನ ನೆಟ್ಟು ನೈಸರ್ಗಿಕ ಕೃಷಿ ಮಾಡಲು ರವಿ ಮುಂದಾಗಿದ್ದರು.

ಹೀಗೆ ಪ್ರಗತಿಪರ ಕೃಷಿಕನಾಗಿ ಈ ಪರಿಸರಕ್ಕೆ ನನ್ನ ಕಾಣಿಕೆ ಕೊಡಬೇಕು ಎಂದು ಆಸೆ ಇತ್ತು. ಆದರೆ ಈಗ ಎಲ್ಲಾ ಬೆಳೆಗಳು ಸುಟ್ಟು ಕರಕಲಾಗಿದೆ. 11 ಕೆವಿ ವಿದ್ಯುತ್ ಪರಿವರ್ತಕದಿಂದ ಕಿಡಿಗಳು ಬೀಳುತ್ತಿರುವುದರಿಂದ ಎಲ್ಲಾ ಹಣ್ಣಿನ ಗಿಡಗಳು ಭಸ್ಮವಾಗಿವೆ. ಈ ಬಗ್ಗೆ ಮೆಸ್ಕಾಂ ಇಲಾಖೆಯ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತ ರೈತ ರವಿ ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಜಮೀನಿನಲ್ಲಿ ಬೆಳೆದಿರುವ ಹಣ್ಣಿನ ಗಿಡಗಳ ಹೊತೆಗೆ ಬೆಲೆಬಾಳುವ ಮರಗಳು ಬೆಂಕಿಗೆ ಆಹುತಿಯಾಗಿವೆ. ಈ ಪರಿವರ್ತಕದಿಂದ ಹಾನಿ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಅಗ್ನಿಶಾಮಕ ಇಲಾಖೆ ಕೂಡ ಅಪಾಯದ ಮುನ್ಸೂಚನೆಯ ವರದಿಯನ್ನ ನೀಡಿದೆ. ಹೈವೋಲ್ಟೆಜ್ ಸಫ್ಲೈ ಮಾಡುವ ವಿದ್ಯುತ್ ಲೈನ್ ಆಗಿರುವುದರಿಂದ ಇಲ್ಲಿ ಕಿಡಿಗಳು ಆಗಾಗ ಬೀಳುತ್ತಲೇ ಇರುತ್ತದೆ. ಹೀಗಾಗಿ ಇಲ್ಲಿ ಯಾವ ರೀತಿ ಕೃಷಿ ಮಾಡುವುದು ಎಂದು ರೈತ ರವಿ ಕಂಗಾಲಾಗಿದ್ದಾರೆ.

current wire

ಜಮೀನಿನ ಒಳಗೆ 11 ಕೆವಿ ವಿದ್ಯುತ್ ಪರಿವರ್ತಕ ಅಳವಡಿಕೆ

ಇನ್ನು ರವಿ ಅವರ ಜಮೀನಿನ ಒಳಗೆ 11 ಕೆವಿ ವಿದ್ಯುತ್ ಪರಿವರ್ತಕ ಆಳವಡಿಸಲು ರೈತನ ಒಪ್ಪಿಗೆಯನ್ನೂ ಇಲಾಖೆ ಪಡೆದಿಲ್ಲ. ಸದ್ಯ ಈ ರೀತಿ ಹಾನಿ ಆಗುತ್ತಿದೆ ಎಂದು ಅಧಿಕಾರಿಗಳ ಬಳಿ ಅವಲತ್ತುಕೊಂಡರೆ ಆ ಸ್ಥಳದಿಂದ ಬೇರೆಡೆಗೆ ಶಿಫ್ಟ್ ಮಾಡಬೇಕು ಎಂದರೆ 2.5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಅದನ್ನ ನೀವು ಕಟ್ಟುವುದಾದರೆ ನಾವು ಬೇರೆಡೆಗೆ ಶಿಫ್ಟ್ ಮಾಡುತ್ತೀವಿ ಎಂದು ಹೇಳುತ್ತಿದ್ದಾರೆ ಎಂದು ರೈತ ರವಿ ಹೇಳಿದ್ದಾರೆ.

ಈ ನಡುವೆ ಕಳೆದ ಒಂದು ವರ್ಷದಲ್ಲಿ ರವಿ ಅವರು ಬೆಳೆದಿದ್ದ 200ಕ್ಕೂ ಹೆಚ್ಚು ಶ್ರೀಗಂಧ ಮರಗಳು ಕಳ್ಳರ ಪಾಲಾಗಿವೆ. ಈಗ ಮೆಸ್ಕಾಂ ಇಲಾಖೆ ರೈತನಿಗೆ ಕೊಟ್ಟ ಶಾಕ್​ನಿಂದ ಕನಸು ಕಟ್ಟಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಕೃಷಿಯ ಕನಸನ್ನ ಹೊತ್ತು ಕೃಷಿಗೆ ಇಳಿದಿದ್ದ ರೈತನ ಕನಸು ಮೆಸ್ಕಾಂ ಶಾಕ್​ನಿಂದ ಭಗ್ನವಾಗಿದೆ.

ಇದನ್ನೂ ಓದಿ:

ರಾಜ್ಯದ ವಿವಿಧೆಡೆ ಬಣವೆ, ಜಮೀನಿಗೆ ಬೆಂಕಿ; ಅಪಾರ ಪ್ರಮಾಣದ ಬೆಳೆ ನಾಶ

ಬೂದುಗುಂಬಳ ಕೆಜಿಗೆ ಕೇವಲ‌ 2 ರೂಪಾಯಿ; ಕುಸಿದ ಬೆಲೆಗೆ ಬೇಸತ್ತು ಬೆಳೆ ನಾಶಕ್ಕೆ ಮುಂದಾದ ದಾವಣಗೆರೆ ರೈತ

(Chikmagalur farmer angry on MESCOM as its negligence destroyed his farm and corm)