ಪ್ರೀತಿ ಹೆಸರಲ್ಲಿ ಮೋಸ, UPSC ಕೋಚಿಂಗ್ ಪಡೀತಿದ್ದ ಯುವತಿಯ ಬಾಳಲ್ಲಿ ಆಗಿದ್ದೇನು?
ಚಿತ್ರದುರ್ಗ: ಪ್ರೀತಿಯಲ್ಲಿ ಬಿದ್ಮೇಲೆ ಯಾರಿಗೂ ಪ್ರಪಂಚವೇ ಕಾಣ್ಸಲ್ಲ, ವೇಳೆಯೂ ಗೊತ್ತಾಗಲ್ಲ. ಎಲ್ಲವೂ ಕಲರ್ಫುಲ್ ಅನ್ಸುತ್ತೆ. ಜೀವನ ಪೂರ್ತಿ ಹೀಗೆ ಇರ್ಬೋದು ಅಂತ್ಲೂ ಅಂದುಕೊಳ್ತಾರೆ. ಆದ್ರೆ, ಆ ಪ್ರೀತಿಯಲ್ಲಿ ಚೂರೇ ಚೂರು ಎಡವಟ್ ಆದ್ರೂ ಬಳಿಕ ನಡೆಯೋದೇ ರಗಳೆ! ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚೌಳಕೆರೆ ಗ್ರಾಮದ ನಿವಾಸಿ ಉಮೇಶ್.. ಈ ಲವ್ ಸ್ಟೋರಿಯಲ್ಲಿ ಹೀರೋನೂ ಇವನೇ.. ವಿಲನ್ನೂ ಇವನೇ.. ಹಾಗಾದ್ರೆ ಇವನು ಅಂತಾದ್ದು ಏನ್ ಮಾಡ್ದಾ..? ಏನಿದು ಪ್ರೇಮ್ ಕಹಾನಿ? ಅಂದ್ರೆ.. 3 ವರ್ಷ ಪ್ರೀತಿ.. ಪ್ರೇಯಸಿ […]
ಚಿತ್ರದುರ್ಗ: ಪ್ರೀತಿಯಲ್ಲಿ ಬಿದ್ಮೇಲೆ ಯಾರಿಗೂ ಪ್ರಪಂಚವೇ ಕಾಣ್ಸಲ್ಲ, ವೇಳೆಯೂ ಗೊತ್ತಾಗಲ್ಲ. ಎಲ್ಲವೂ ಕಲರ್ಫುಲ್ ಅನ್ಸುತ್ತೆ. ಜೀವನ ಪೂರ್ತಿ ಹೀಗೆ ಇರ್ಬೋದು ಅಂತ್ಲೂ ಅಂದುಕೊಳ್ತಾರೆ. ಆದ್ರೆ, ಆ ಪ್ರೀತಿಯಲ್ಲಿ ಚೂರೇ ಚೂರು ಎಡವಟ್ ಆದ್ರೂ ಬಳಿಕ ನಡೆಯೋದೇ ರಗಳೆ!
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚೌಳಕೆರೆ ಗ್ರಾಮದ ನಿವಾಸಿ ಉಮೇಶ್.. ಈ ಲವ್ ಸ್ಟೋರಿಯಲ್ಲಿ ಹೀರೋನೂ ಇವನೇ.. ವಿಲನ್ನೂ ಇವನೇ.. ಹಾಗಾದ್ರೆ ಇವನು ಅಂತಾದ್ದು ಏನ್ ಮಾಡ್ದಾ..? ಏನಿದು ಪ್ರೇಮ್ ಕಹಾನಿ? ಅಂದ್ರೆ..
3 ವರ್ಷ ಪ್ರೀತಿ.. ಪ್ರೇಯಸಿ ಹಣದಲ್ಲೇ ಮಸ್ತಿ.. ಆಗಿದ್ದೇನು? ಉಮೇಶ್ ಕೆಳಗೋಟೆ ಬಡಾವಣೆಯ ಯುವತಿಯನ್ನ ಮೂರು ವರ್ಷ ಪ್ರೀತಿ ಮಾಡಿದ್ದ. ಆಕೆಯ ಹಿಂದೆ ಪ್ರೀತ್ಸೆ ಪ್ರೀತ್ಸೆ ಅಂತಾ ಅಲೆದಾಡಿದ್ದ. ಅಷ್ಟೇ ಯಾಕೆ, ಕಾಡಿ, ಬೇಡಿ ಪ್ರೀತಿಯನ್ನೂ ಗಿಟ್ಟಿಸಿಕೊಂಡಿದ್ದಾನೆ. ಬಳಿಕ ಸಲುಗೆ ಬೆಳೆಸಿಕೊಂಡಿದ್ದ ಉಮೇಶ, ಶಿಕ್ಷಕಿಯಾಗಿರುವ ಯುವತಿಯ ತಾಯಿಗೂ ನಿಮ್ಮ ಮನೆ ಅಳಿಯ ನಾನೇ ಎಂದು ಹೇಳಿದ್ದನಂತೆ. ಇಲ್ಲದ ಕಥೆಗಳನ್ನ ಕಟ್ಟಿ ಮದುವೆ ಆಗುತ್ತೇನೆಂದು ನಂಬಿಸಿದ್ದಾನೆ. ಬಳಿಕ ಸುಮಾರು 15ಲಕ್ಷ ರೂಪಾಯಿ ಹಣ ಪಡೆದಿದ್ದಾನಂತೆ. ಇದಕ್ಕೆ ಉಮೇಶ್ನ ಪೋಷಕರೂ ಸಹ ಸಾಥ್ ನೀಡಿದ್ದರಂತೆ. ಆದ್ರೆ, ಇತ್ತೀಚೆಗೆ ಉಮೇಶನ ರಾಸಲೀಲೆ ಯುವತಿಗೆ ಗೊತ್ತಾಗಿದೆ. ಇದನ್ನ ಪ್ರಶ್ನೆಸಿದ್ರೆ, ನಿನ್ನ ಮದುವೆ ಆದರೆ ಕೊಟ್ಟ ಹಣ ತೀರುತ್ತದೆ. ನಿನ್ನ ಮುಂದೆ ಆದ್ರೂ ನಾನು ಬೇರೆ ಯುವತಿಯರ ಜತೆ ಇರುತ್ತೇನೆ ಅಂತಾ ಪ್ರೇಯಸಿಗೆ ಹಲ್ಲೆ ಮಾಡಿದ್ದಾನಂತೆ.
ಇನ್ನು, ಬೆಂಗಳೂರಲ್ಲಿ ಯುಪಿಎಸ್ಸಿ ಕೋಚಿಂಗ್ ಪಡೀತಿದ್ದ ಯುವತಿ, ಪ್ರೀತಿಯ ಬಲೆಗೆ ಬಿದ್ದು ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ. ವಂಚಕನಿಗೆ ತಕ್ಕ ಪಾಠ ಕಲಿಸಿ, ಹಣ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಎಸ್ಪಿ ಡಾ.ಅರುಣ್ ಅವ್ರನ್ನು ಕೇಳಿದ್ರೆ, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಿದ್ದಾರೆ.
ಒಟ್ನಲ್ಲಿ, ನಯವಂಚಕನ ಪ್ರೇಮ ಬಲೆಗೆ ಬಿದ್ದಿರೋ ಯುವತಿ, ಕಾಸು ಕಳ್ಕೊಂಡು ಪರದಾಡ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಅಂತಾ ಅಲೆಯುತ್ತಿದ್ದಾರೆ. ಅದೇನೆ ಇರಲಿ, ಪ್ರೀತಿ ಮಾಡೋದು ತಪ್ಪೇ ಅಲ್ಲ. ಆದ್ರೆ, ಅದೇ ಪ್ರೀತಿ ಹೆಸರಲ್ಲಿ ಮೋಸ ಮಾಡ್ಬೇಡಿ. ಮೋಸನೂ ಹೋಗ್ಬೇಡಿ.
Published On - 1:34 pm, Fri, 17 January 20