ಚಿತ್ರದುರ್ಗ: ಕಾವಿಧಾರಿ ಹೇಗಿರಬೇಕೆಂಬ ವಿಶಿಷ್ಟ ಆಚರಣೆಯೊಂದು ನಡೆದಿದ್ದು, ಏನಿದು ಆಚರಣೆ ಅಂತೀರಾ? ಈ ಸ್ಟೋರಿ ನೋಡಿ
ಇತ್ತೀಚೆಗೆ ಕಾವಿಧಾರಿಗಳ ಕಪಟ ಮುಖಗಳು ಬಟಾ ಬಯಲಾಗುತ್ತಿದೆ. ಆದರೆ ಕೋಟೆನಾಡು ಚಿತ್ರದುರ್ಗದ ಆರೂಢ ಪರಂಪರೆಯ ಆಶ್ರಮದಲ್ಲಿ ಮಾತ್ರ ಅಸಲಿಗೆ ಕಾವಿಧಾರಿ ಹೇಗಿರಬೇಕೆಂಬ ವಿಶಿಷ್ಟ ಆಚರಣೆಯೊಂದು ನಡೆದಿದೆ.
ಚಿತ್ರದುರ್ಗ: ನಗರದ ಆರೂಢ ಪರಂಪರೆಯ ಕಬೀರಾನಂದ ಆಶ್ರಮದಲ್ಲಿ ಒಂದು ವಾರ ಕಾಲ 93ನೇ ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಕೊನೆಯ ದಿನವಾದ ನಿನ್ನೆ(ಫೆ.19) ಆಶ್ರಮದ ಪೀಠಾಧ್ಯಕ್ಷರಾದ ಶಿವಲಿಂಗಾನಂದ ಶ್ರೀಗಳು ಶಿವನ ಅವತಾರ ಧರಿಸುತ್ತಾರೆ. ವಿಶೇಷ ಪೂಜೆ ಸಲ್ಲಿಸಿ ಕೌದಿ, ತಂಗಟಿಗೆ ಹೂವು ಧಾರಣೆ ಮಾಡುತ್ತಾರೆ. ಕೈಯಲ್ಲಿ ಕಮಂಡಲ ಹಿಡಿದು ದೇಗುಲದ ಸುತ್ತ ಮೂರು ಸುತ್ತು ಹಾಕುವ ಮೂಲಕ ಭಕ್ತರಿಗೆ ದರ್ಶನ ನೀಡುತ್ತಾರೆ. ಆ ಮೂಲಕ ಮಠಾಧೀಶರಾದವರು, ಸಂತರಾದವರು ಸರ್ವಸಂಗ ಪರಿತ್ಯಾಗಿಗಳಾಗಿರಬೇಕೆಂಬ ಸಂದೇಶವನ್ನು ಸಾರುತ್ತಾರೆ.
ಕೌದಿ ಪೂಜೆ ಆಚರಣೆ
ಇನ್ನು ನೂರಾರು ಭಕ್ತರು ಈ ಸಂದರ್ಭದಲ್ಲಿ ಸಾಕ್ಷಿಯಾಗಿರುತ್ತಾರೆ. ದೇಗುಲದಲ್ಲಿ ವಿಶೇಷ ಭಜನೆ ಸಲ್ಲಿಸುವ ಮೂಲಕ ಶಿವರಾತ್ರಿ ಆಚರಣೆ ಮಾಡುತ್ತಾರೆ. 9ದಶಕಗಳಿಂದ ನಡೆದುಕೊಂಡು ಬಂದಿರುವ ಕೌದಿ ಪೂಜೆ ಆಚರಣೆ ಇಂದಿಗೂ ಶ್ರೀಗಳು ಆಚರಿಸುತ್ತಿದ್ದಾರೆ. ಆ ಮೂಲಕ ಕಾವಿಧಾರಿಗಳ ಬಗ್ಗೆ ಉತ್ತಮ ಸಂದೇಶ ಸಾರುತ್ತಿದ್ದಾರೆ. ನಾಡಿಗೆ ಒಳಿತಾಗುವ ದೃಷ್ಠಿಯಿಂದ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷರು ಹೇಳಿದರು.
ಇದನ್ನೂ ಓದಿ:ಚಿತ್ರದುರ್ಗ: ಹೆದ್ದಾರಿ ಮಧ್ಯೆ ಏಕಾಏಕಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕೌದಿ ಪೂಜೆ ಆಚರಣೆ ಆಚರಿಸಲಾಗಿದೆ. ಆ ಮೂಲಕ ಮಠಾಧೀಶರು ಹೇಗಿರಬೇಕೆಂಬ ಸಂದೇಶ ರವಾನಿಸಲಾಗಿದೆ. ನಾಡಿನಲ್ಲಿ ಮಳೆ ಬೆಳೆ ಉತ್ತಮವಾಗಿ ಆಗಿ ಜನ ಜೀವನಸಮೃದ್ಧಿಯಾಗಿರಲಿ ಎಂದು ಶಿವನಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ.
ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Mon, 20 February 23