ಚಿತ್ರದುರ್ಗ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಚಾಲನೆ ದೊರೆತು 3 ವರ್ಷಗಳೇ ಕಳೆದಿವೆ! ಆದ್ರೆ ಕಾಮಗಾರಿ ಆರಂಭವೇ ಆಗಿಲ್ಲ

ಮೂರು ವರ್ಷಗಳ ಹಿಂದೆಯೇ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಸರ್ಕಾರ 25 ಕೋಟಿ ರೂಪಾಯಿ ಅನುದಾನವನ್ನೂ ಬಿಡುಗಡೆಗೊಳಿಸಿದೆ. ಆದ್ರೆ, ಕಣಿವೆ ಪ್ರದೇಶ ಸಮತಟ್ಟುಗೊಳಿಸುವ ನೆಪದಲ್ಲಿ ಪಿಎನ್ ಸಿ ಕಂಪನಿ ಮೂಲಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕಲ್ಲು, ಮಣ್ಣು ಸಾಗಣೆ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಚಾಲನೆ ದೊರೆತು 3 ವರ್ಷಗಳೇ ಕಳೆದಿವೆ! ಆದ್ರೆ ಕಾಮಗಾರಿ ಆರಂಭವೇ ಆಗಿಲ್ಲ
ಚಿತ್ರದುರ್ಗ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಚಾಲನೆ ದೊರೆತು ಮೂರು ವರ್ಷಗಳೇ ಕಳೆದಿವೆ! ಆದ್ರೆ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 08, 2023 | 4:53 PM

ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಜಿಲ್ಲಾಡಳಿತ ಭವನ (Chitradurga Zilla Adalitha Bhavan) ನಿರ್ಮಾಣಕ್ಕೆ ಚಾಲನೆ ದೊರೆತು ಮೂರು ವರ್ಷಗಳೇ ಕಳೆದಿವೆ. ಆದ್ರೆ, ಕಾಮಗಾರಿ ಮಾತ್ರ ಈವರೆಗೆ ಸಹ ಆರಂಭ ಆಗಿಲ್ಲ. ಬದಲಾಗಿ ಸಮತಟ್ಟುಗೊಳಿಸುವ ನೆಪದಲ್ಲಿ ಕೋಟ್ಯಾಂತರ ಮೌಲ್ಯದ ಕಲ್ಲು, ಮಣ್ಣು ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ವಿವಾದಕ್ಕೆ ಸಿಲುಕಿದೆ. ಈ ಕುರಿತು ವರದಿ ಇಲ್ಲಿದೆ. ಮೂರು ವರ್ಷ ಕಳೆದರೂ ಆರಂಭವಾಗದ ಜಿಲ್ಲಾಡಳಿತ ಭವನ. ನೆಲ ಸಮತಟ್ಟುಗೊಳಿಸುವ ನೆಪದಲ್ಲಿ ಕಲ್ಲು, ಮಣ್ಣು ಲೂಟಿ ಆರೋಪ. ಸೂಕ್ತ ಕ್ರಮಕ್ಕೆ ಸ್ಥಳೀಯರ ಆಗ್ರಹ. ಹೌದು, ಚಿತ್ರದುರ್ಗ ನಗರ ಬಳಿಯ ಕಣಿವೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಮೂರು ವರ್ಷಗಳ ಹಿಂದೆಯೇ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಸರ್ಕಾರ 25 ಕೋಟಿ ರೂಪಾಯಿ ಅನುದಾನವನ್ನೂ ಬಿಡುಗಡೆಗೊಳಿಸಿದೆ. ಆದ್ರೆ, ಕಣಿವೆ ಪ್ರದೇಶ ಸಮತಟ್ಟುಗೊಳಿಸುವ ನೆಪದಲ್ಲಿ ಪಿಎನ್ ಸಿ ಕಂಪನಿ ಮೂಲಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕಲ್ಲು, ಮಣ್ಣು ಸಾಗಣೆ ಮಾಡಲಾಗಿದೆ. ಆದ್ರೆ, ಕಣಿವೆ ಪ್ರದೇಶ ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟಿದ್ದು ಯಾವುದೇ ಪರವಾನಿಗೆ ಪಡೆದಿಲ್ಲ. ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಸಂಪತ್ತು ಅಕ್ರಮವಾಗಿ ದೋಚಲಾಗಿದೆ (Misappropriation). ಆದ್ರೆ, ಸರ್ಕಾರಕ್ಕೆ ರಾಯಲ್ಟಿ ಮಾತ್ರ ಕಟ್ಟಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಗಣಿ ಇಲಾಖೆಗೆ ದೂರು ನೀಡಿದ್ರೂ ಪ್ರಯೋಜನ ಆಗಿಲ್ಲ. ಹೀಗಾಗಿ, ಕೋರ್ಟ್ ಮೂಲಕ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಕೋರ್ಟ್ ಸುಮಾರು 3 ಲಕ್ಷ ರೂಪಾಯಿ ರಾಯಲ್ಟಿ ಕಟ್ಟುವಂತೆ ಆದೇಶಿಸಿದೆ. ಅಂತೆಯೇ ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಬೇಕಿದೆ ಅಂತಾರೆ ಇಂಗಳದಾಳ್ ಗ್ರಾಮ ಪಂಚಾಯತಿ ಸದಸ್ಯರ ಪರ ವಕೀಲ ಪ್ರತಾಪ್ ಜೋಗಿ (Chitradurga News).

ಇನ್ನು ಈಗಾಗಲೇ ಇಂಗಳದಾಳ್ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಇತರೆ ಹೋರಾಟಗಾರರು ನಿರಂತರ ಹೋರಾಟದಲ್ಲಿ ತೊಡಗಿದ್ದಾರೆ. ಜಿಲ್ಲಾಡಳಿತ ಭವನ ಕಟ್ಟಡ ಸ್ಥಳದಲ್ಲಿ ಸಮತಟ್ಟುಗೊಳಿಸುವ ನೆಪದಲ್ಲಿ ಕೋಟ್ಯಾಂತರ ಮೌಲ್ಯದ ಭೂಸಂಪತ್ತು ಲೂಟಿ ಮಾಡಿದ್ದರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಇನ್ನು ಈ ಬಗ್ಗೆ ಗಣಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವ್ರನ್ನು ಕೇಳಿದಾಗ ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಮತ್ತು ಗಣಿ ಇಲಾಖೆ ಕ್ರಮ ಜರುಗಿಸುತ್ತದೆ. ಕೋರ್ಟ್ ಮೊರೆ ಹೋದಲ್ಲಿ ಕಾನೂನು ಕ್ರಮ ಆಗುತ್ತದೆ. ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ ಅಂತಾರೆ.

Also Read:

ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಸ್ಥಳ ಸಮತಟ್ಟುಗೊಳಿಸುವ ನೆಪದಲ್ಲಿ ಕೋಟ್ಯಾಂತರ ಮೌಲ್ಯದ ಭೂಸಂಪತ್ತು ಲೂಟಿ ನಡೆದಿದೆ. ಸರ್ಕಾರಕ್ಕೆ ರಾಯಲ್ಟಿ ಕಟ್ಟದೆ ವಂಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಆದ್ರೆ, ಗಣಿ ಸಚಿವರು ಮಾತ್ರ ಈ ವಿಚಾರ ನನ್ನ ಗಮನಕ್ಕೇ ಬಂದಿಲ್ಲ. ಪರಿಶೀಲಿಸಿ ಕ್ರಮಕ್ಕೆ ಸೂಚಿಸುತ್ತೇನೆ ಎಂದಿದ್ದಾರೆ. ಇನ್ನಾದ್ರೂ ಈ ಬಗ್ಗೆ ಪರಿಶೀಲನೆ ಮತ್ತು ಕ್ರಮ ಕೈಗೊಳ್ಳಬೇಕಿದೆ. ಅಂತೆಯೇ ಶೀಘ್ರ ಈ ವಿವಾದ ಅಂತ್ಯಗೊಳಿಸಿ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಾಗಾರಿ ಪೂರ್ಣಗೊಳ್ಳಲು ಸೂಕ್ತ ಕ್ರಮ ಜರುಗಿಸಬೇಕಿದೆ.

ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ