ಸಾರ್ವಜನಿಕರ ಹಣದಲ್ಲಿ 290 ಕೋಟಿ ಮೌಲ್ಯದ ಹವಾಲಾ ದಂದೆ! ಸಿಐಡಿಯಿಂದ ಕಿಂಗ್​ಪಿನ್ ಅರೆಸ್ಟ್

ಚೀನಾ ಮೂಲದ ಮತ್ತು ಟಿಬೆಟ್ ಪ್ರಜೆಗಳು ಬ್ಯಾಂಕ್ ಖಾತೆ, ಕಂಪನಿ ತೆರೆಯುತ್ತಿದ್ದರು. ಅನಸ್ ಅಹ್ಮದ್ ಚೈನಾ ಹವಾಲಾ ಏಜೆಂಟ್​ರ ಸಂಪರ್ಕಿಸುತ್ತಿದ್ದ. ಅಕ್ರಮ ಹಣ ವರ್ಗಾವಣೆಯ ಸಲುವಾಗಿ ಬುಲ್ ಫಿಂಚ್ ಟೆಕ್ನಾಲಜೀಸ್‌, ಹೆಚ್ ಆ್ಯಂಡ್ ಎಸ್ ವೈಚರ್ಸ್, ಕ್ಲಿಪೋಡ್‌ ವೆಂಚರ್ಸ್ ಮುಂತಾದ ಕಂಪನಿಗಳನ್ನು ತೆರೆದಿದ್ದರು ಎಂಬ ಮಾಹಿತಿ ದೊರೆತಿದೆ.

ಸಾರ್ವಜನಿಕರ ಹಣದಲ್ಲಿ 290 ಕೋಟಿ ಮೌಲ್ಯದ  ಹವಾಲಾ ದಂದೆ! ಸಿಐಡಿಯಿಂದ ಕಿಂಗ್​ಪಿನ್ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 13, 2021 | 8:28 AM

ಬೆಂಗಳೂರು: ಪವರ್ ಬ್ಯಾಂಕ್ ಎಂಬ ಹೆಸರಲ್ಲಿ ಹೂಡಿಕೆ ನಡೆಸುತ್ತಿದ್ದ 290 ಕೋಟಿ ಮೌಲ್ಯದ  ಅಕ್ರಮ ಹವಾಲಾ ದಂದೆಯನ್ನು ಬೇಧಿಸಿರುವ ಸಿಐಡಿ ಎಸ್​ಪಿ ಶರತ್ ನೇತೃತ್ವದ ತನಿಖಾ ತಂಡ ಪ್ರಕರಣದ ಕಿಂಗ್​ಪಿನ್ ಆಗಿರುವ ಕೇರಳ ಮೂಲದ ಅನಸ್ ಅಹ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಆದಾಯ ನೀಡುವುದಾಗಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳಲಾಗುತ್ತಿತ್ತು. ಹಣ ಹೂಡಿಕೆ ಮಾಡುವ ಅಪ್ಲಿಕೇಷನ್ ತಯಾರಿಸಿ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆರಂಭಿಕವಾಗಿ ಹೊಡಿಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಬಡ್ಡಿ ಪಾವತಿಸಲಾಗುತ್ತಿತ್ತು. ಹೆಚ್ಚು ಹೂಡಿಕೆ ಆದ ನಂತರ ಬಡ್ಡಿ ನೀಡದೆ ಹೂಡಿಕೆ ಹಣ ಬಳಸಿ ಶೇರ್ ಅಥವಾ ಬೇನಾಮಿ ಕಂಪನಿ ತೆರೆಯಲಾಗುತ್ತಿತ್ತು. ಈ ಮೂಲಕ ಜನರ ಹಣಕ್ಕೆ ಪಂಗನಾಮ ಎರಚಲಾಗುತ್ತಿತ್ತು ಎಂದು ತನಿಖಾ ತಂಡ ತಿಳಿಸಿದೆ.

ಚೀನಾ ಮೂಲದ ಮತ್ತು ಟಿಬೆಟ್ ಪ್ರಜೆಗಳು ಬ್ಯಾಂಕ್ ಖಾತೆ, ಕಂಪನಿ ತೆರೆಯುತ್ತಿದ್ದರು. ಅನಸ್ ಅಹ್ಮದ್ ಚೈನಾ ಹವಾಲಾ ಏಜೆಂಟ್​ರ ಸಂಪರ್ಕಿಸುತ್ತಿದ್ದ. ಅಕ್ರಮ ಹಣ ವರ್ಗಾವಣೆಯ ಸಲುವಾಗಿ ಬುಲ್ ಫಿಂಚ್ ಟೆಕ್ನಾಲಜೀಸ್‌, ಹೆಚ್ ಆ್ಯಂಡ್ ಎಸ್ ವೈಚರ್ಸ್, ಕ್ಲಿಪೋಡ್‌ ವೆಂಚರ್ಸ್ ಮುಂತಾದ ಕಂಪನಿಗಳನ್ನು ತೆರೆದಿದ್ದರು ಎಂಬ ಮಾಹಿತಿ ದೊರೆತಿದೆ.

ಈ ಪ್ರಕರಣದಲ್ಲಿ ಕೊವಿಡ್​ನ ಸಂಕಷ್ಟ ಸಮಯದಲ್ಲಿ ಹೆಚ್ಚಿನ ಜನರು ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. 15 ಲಕ್ಷ ಮಂದಿಗೆ ಸುಮಾರು 250 ಕೋಟಿಗೂ ಹೆಚ್ಚು ವಂಚನೆ ಆಗಿರುವ ದಾಖಲೆ ಪತ್ತೆಯಾಗಿದೆ.  ಕಂಪನಿ ಹಾಗೂ ಗ್ರಾಹಕರಿಗೆ ಹಣ ವರ್ಗಾವಣೆ ಮಧ್ಯವರ್ತಿಯಾಗಿ ರೇಜೋರ್ ಪೇ ಎಂಬ ಕಂಪನಿ ಕೆಲಸ ಮಾಡಿರುವುದು ತಿಳಿದುಬಂದಿದ್ದು, ರೇಜೋರ್ ಪೇ ಕಂಪನಿ ದೂರಿನ ಮೇರೆಗೆ ಸಿಐಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ

G7 Summit 2021: ಜಿ7 ಶೃಂಗಸಭೆಯಲ್ಲಿ ‘ಒಂದು ಭೂಮಿ, ಒಂದು ಆರೋಗ್ಯ’ ಮಂತ್ರ ಉಚ್ಛರಿಸಿದ ಪ್ರಧಾನಿ ನರೇಂದ್ರ ಮೋದಿ

(CID arrests kingpin of Cyber crime Hawala worth Rs 290 crore in public money in the name of power bank)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ