AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಜೈಲಿನಲ್ಲಿ ಇದ್ದಾಗಲೇ ಸಿಎಂ ಆಗಲು ಯೋಚಿಸಿದ್ದೆ: ಅಚ್ಚರಿ ಹೇಳಿಕೆ ನಿಡಿದ ಸಿಎಂ ಡಿಕೆ ಶಿವಕುಮಾರ್

ಮೈಸೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ಜೀವನದ ರೋಚಕ ವಿವರಗಳನ್ನು ಹಂಚಿಕೊಂಡರು. ಜೈಲಿನಲ್ಲಿದ್ದಾಗಲೂ ಸಿಎಂ ಆಗುವ ಕನಸು ಕಂಡಿದ್ದೆ, ಹಲವು ನಾಯಕರನ್ನು ಸಿಎಂ ಮಾಡುವಲ್ಲಿ ನನ್ನ ಪಾತ್ರವಿತ್ತು ಎಂದರು. ಸಿದ್ದರಾಮಯ್ಯ ಬಗ್ಗೆ ಸೌಹಾರ್ದತೆ ವ್ಯಕ್ತಪಡಿಸಿ, ಕುಮಾರಸ್ವಾಮಿ ಮತ್ತು ವಿರೋಧ ಪಕ್ಷಗಳ ಅಸಮಾಧಾನದ ಕುರಿತು ಮಾತನಾಡಿದರು. ಹಳೆಯ ಆರೋಪಗಳಿಗೆ ಉತ್ತರಿಸಿ, ತಮ್ಮನ್ನು "ಬಂಡೆ" ಎಂದರು.

ನಾನು ಜೈಲಿನಲ್ಲಿ ಇದ್ದಾಗಲೇ ಸಿಎಂ ಆಗಲು ಯೋಚಿಸಿದ್ದೆ: ಅಚ್ಚರಿ ಹೇಳಿಕೆ ನಿಡಿದ ಸಿಎಂ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
ರಾಮ್​, ಮೈಸೂರು
| Edited By: |

Updated on: Nov 11, 2026 | 8:42 PM

Share

ಮೈಸೂರು, ನ.11: “ನನ್ನ ಬದುಕು ತೆರೆದ ಪುಸ್ತಕ. ನಾನು ಜೈಲಿನಲ್ಲಿ ಕೂತಿದ್ದಾಗಲೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇನೆ ಮತ್ತು ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಯೋಚನೆ ಮಾಡಿದ್ದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ಜೀವನದ ಕಠಿಣ ಹಾಗೂ ರೋಚಕ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ತಮ್ಮ ಕುರಿತಾದ ನೂತನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮನಬಿಚ್ಚಿ ಮಾತನಾಡಿದರು.

“ನಾನು ಸುಮ್ಮನೆ ಬಂದು ಈ ಸಿಎಂ ಸೀಟಿನಲ್ಲಿ ಕೂತಿಲ್ಲ. 35 ವರ್ಷಗಳ ಹಿಂದೆಯೇ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಜ್ಯೋತಿಷಿಗಳು ಹೇಳಿದ್ದರು. ಎಷ್ಟೋ ನಾಯಕರನ್ನು ಬೆಳೆಸಿ, ಶ್ರಮಪಟ್ಟು ಇಲ್ಲಿ ಬಂದು ಕುಳಿತಿದ್ದೇನೆ” ಎಂದರು. “ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವಲ್ಲಿ ನನ್ನ ಪಾತ್ರ ಏನಿತ್ತು ಎಂಬ ಬಗ್ಗೆ ಮಾತನಾಡುವುದು ಬಹಳಷ್ಟಿದೆ. ಅದನ್ನು ಮುಂದೆ ಯಾವಾಗಲಾದರೂ ಪುಸ್ತಕದಲ್ಲಿ ದಾಖಲಿಸುತ್ತೇನೆ” ಎಂದು ರಹಸ್ಯ ಬಿಚ್ಚಿಟ್ಟರು. “ನನ್ನ 48ನೇ ವಯಸ್ಸಿನಲ್ಲಿ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದದ್ದು ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು. ಆದರೆ ಅಂದು ಬಿಜೆಪಿಯ ಶಂಕರಮೂರ್ತಿ ಅವರು ನನ್ನನ್ನು ವೇದಿಕೆ ಹತ್ತಿಸದೆ ಅವಮಾನ ಮಾಡಿದ್ದರು” ಎಂದು ನೆನಪಿಸಿಕೊಂಡರು.

“ನಾನು ಸಿದ್ದರಾಮಯ್ಯನವರಿಗೆ ಎಂದಿಗೂ ಕೇಡು ಬಯಸಿಲ್ಲ, ಮುಂದೆಯೂ ಬಯಸುವುದಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಜೊತೆ ಸರ್ಕಾರ ನಡೆಸುವಾಗಲೂ ಅವರಿಗೆ ಕೆಡಕನ್ನು ಬಯಸಲಿಲ್ಲ. ಆದರೆ ಈಗ ಕುಮಾರಸ್ವಾಮಿಗೆ ನನ್ನನ್ನು ನೋಡಿ ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಸಿಎಂ ಆಗಿರುವುದು ವಿಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ದಿನವೂ ನನ್ನ ಬಗ್ಗೆ ನೆಗೆಟಿವ್ ಹುಡುಕುತ್ತಾರೆ. ‘ಅಯ್ಯೋ ಡಿಕೆ ಸಿಎಂ ಆಗಿಬಿಟ್ಟ’ ಎಂದು ಕೆಲವರು ಕೊರಗುತ್ತಿದ್ದಾರೆ. ಆದರೆ ನಾನು ತಾಳ್ಮೆಯಿಂದ ಇದ್ದೇನೆ, ಯಾರಿಗೂ ಮೋಸ ಮಾಡುವ ಮನಸ್ಸು ನನಗಿಲ್ಲ. ನಾನು ಸಿಎಂ ಆದರೂ ತನ್ವೀರ್ ಸೇಠ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಆಗಲಿಲ್ಲ ಎಂಬ ದೊಡ್ಡ ನೋವು ನನಗಿದೆ” ಎಂದು ಹೇಳಿದರು.

ಇದನ್ನೂ ಓದಿ: DC ಕಚೇರಿ ಮುಂದೆ ರೈತನ ಭಾರಿ ಹೈಡ್ರಾಮಾ: 25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ; 4 ಗಂಟೆ ಮರವೇರಿ ಪ್ರತಿಭಟಿಸಿದ ರೈತ

ತಮ್ಮ ವಿರುದ್ಧ ಕೇಳಿಬಂದ ಹಳೆಯ ಆರೋಪಗಳಿಗೆ ಸಿಎಂ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. “ನಾನು ಥಿಯೇಟರ್ ನಡೆಸುತ್ತಿದ್ದಾಗ ಕೆಲವರು ಅದರಲ್ಲಿ ಬ್ಲೂಫಿಲ್ಮ್ ಪ್ರದರ್ಶಿಸುತ್ತಿದ್ದೆ ಎಂದು ಸುಳ್ಳು ಹರಡಿದ್ದರು. ಇಂದಿರಾ ಗಾಂಧಿಯವರ ಹೆಸರಿಟ್ಟಿದ್ದ ಥಿಯೇಟರ್‌ನಲ್ಲಿ ಯಾರಾದರೂ ಆ ರೀತಿ ಮಾಡಲು ಸಾಧ್ಯವೇ? ಎಲ್ಲಾದರೂ ಉಂಟಾ ಹೇಳಿ? ನನ್ನನ್ನು ಬಂಡೆ ಎಂದರು, ರೌಡಿ, ಚಾಕು-ಚೂರಿ ಎಂದೆಲ್ಲಾ ಹೆಸರಿಟ್ಟು ಕರೆದರು. ಆದರೆ ಈಗ ಏನು ಕರೆಯುತ್ತಾರೆ ಹೇಳಿ? ನಾನು ಎಂದಿಗೂ ಡಿ.ಕೆ. ಶಿವಕುಮಾರ್ ಅಷ್ಟೇ” ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಜೆಡಿಎಸ್​​ ಶಾಸಕ ಆಕ್ರೋಶ
ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಜೆಡಿಎಸ್​​ ಶಾಸಕ ಆಕ್ರೋಶ
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಈ ವರ್ಷ ಪಟಾಕಿ ಅವಘಡಗಳಿಂದ ಹೆಚ್ಚು ಮಂದಿಗೆ ಗಾಯ: ವೈದ್ಯರಿಂದ ಮಾಹಿತಿ
ಈ ವರ್ಷ ಪಟಾಕಿ ಅವಘಡಗಳಿಂದ ಹೆಚ್ಚು ಮಂದಿಗೆ ಗಾಯ: ವೈದ್ಯರಿಂದ ಮಾಹಿತಿ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಮ್ಮ ಮೆಟ್ರೋ; ಮುಂದಿನ ವರ್ಷ ಕಾರ್ಯರೂಪಕ್ಕೆ: ಕೃಷ್ಣ ಬೈರೇಗೌಡ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ನಂದಿನಿ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರದಲ್ಲಿಯೂ ಏರಿಕೆ
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!
ಬಸ್​​ ಟಿಕೆಟ್​​ ದರ ಏರಿಕೆ ಬಳಿಕವೂ ಬಿಎಂಟಿಸಿಯಿಂದ 'ಡಕೋಟಾ ಬಸ್'​​ ಸೇವೆ!