ಮರ ಕಳ್ಳತನವನ್ನು ಭೇದಿಸಿದ ಮಹಿಳಾ ಅಧಿಕಾರಿ ವರ್ಗಾವಣೆ: ಶಾಸಕ ಹರೀಶ್ ಪೂಂಜಾ ಪತ್ರಕ್ಕೆ ಸ್ಪಂದಿಸಿದ ಕರ್ನಾಟಕ ಸರ್ಕಾರ
ಶಾಸಕ ಹರೀಶ್ ಪೂಂಜಾ ಅಪ್ತರಾದ ಬಾಲಕೃಷ್ಣ ಶೆಟ್ಟಿ ಮೇಲೆ ದಾಳಿಯಾಗಿತ್ತು. ಅನುಮತಿಯಿಲ್ಲದೆ 12 ಲಕ್ಷ ಮೌಲ್ಯದ ಮರ ಕೊಂಡೊಯ್ದಿದ್ದರು. ಈ ವೇಳೆ ದಾಳಿ ಮಾಡಿದ್ದ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿರಲಿಲ್ಲ.
ಮಂಗಳೂರು: ಮರ ಕಳ್ಳತನವನ್ನು ಭೇದಿಸಿದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಅವರನ್ನು ವರ್ಗಾವಣೆ (Transfer) ಮಾಡಿ ಕರ್ನಾಟಲ ಸರ್ಕಾರ (Karnataka Government) ಆದೇಶ ಹೊರಡಿಸಿದೆ. ಬೀದರ್ನ ಅರಣ್ಯ ತರಬೇತಿ ಕೇಂದ್ರಕ್ಕೆ ಸಂಧ್ಯಾರನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಆರ್ಎಫ್ಓರನ್ನು (RFO) ವರ್ಗಾವಣೆ ಮಾಡಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಶಾಸಕ ಹರೀಶ್ ಪೂಂಜಾ ಯಶಸ್ವಿಯಾಗಿದ್ದಾರೆ. ಆರ್ಎಫ್ಓ ಸಂಧ್ಯಾರನ್ನ ವರ್ಗಾವಣೆ ಮಾಡುವಂತೆ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿಗೆ ಪತ್ರೆ ಬರೆದಿದ್ದರು.
ಶಾಸಕ ಹರೀಶ್ ಪೂಂಜಾ ಅಪ್ತರಾದ ಬಾಲಕೃಷ್ಣ ಶೆಟ್ಟಿ ಮೇಲೆ ದಾಳಿಯಾಗಿತ್ತು. ಅನುಮತಿಯಿಲ್ಲದೆ 12 ಲಕ್ಷ ಮೌಲ್ಯದ ಮರ ಕೊಂಡೊಯ್ದಿದ್ದರು. ಈ ವೇಳೆ ದಾಳಿ ಮಾಡಿದ್ದ ಅರಣ್ಯಾಧಿಕಾರಿಗಳು ಎಫ್ಐಆರ್ ದಾಖಲಿಸಿರಲಿಲ್ಲ. ಶಾಸಕರ ಪ್ರಭಾವದಿಂದ ಅಧಿಕಾರಿಗಳು ಎಫ್ಐಆರ್ ದಾಖಲಿಸಿರಲಿಲ್ಲ. ಪ್ರಕರಣ ಮೇಲಾಧಿಕಾರಿಗೆ ತಲುಪಿ ಸಂಧ್ಯಾ ತನಿಖೆ ನಡೆಸುತ್ತಿದ್ದರು. ತನಿಖೆಯಲ್ಲಿ ಮೂವರು ಅರಣ್ಯ ಅಧಿಕಾರಿಗಳು ಅಮಾನತುಗೊಂಡಿದ್ದರು. ತನಿಖೆ ನಂತರ ಶಾಸಕನ ಆಪ್ತನ ಮೇಲೆ ಎಫ್ಐಆರ್ ದಾಖಲಾಗಿತ್ತು. ಮರಗಳು, ಪಂಚಮುಖಿ ಹೆಸರಿನ ಲಾರಿಯನ್ನು ವಶ ಪಡಯಲಾಗಿತ್ತು.
ತನಿಖೆ ನಂತರ ಆರಎಫ್ಒ ಸಂಧ್ಯಾ ಕ್ರಮ ಕೈಗೊಂಡಿದ್ದಕ್ಕೆ ಪತ್ರ ವರ್ಗಾವಣೆ ಮಾಡುವಂತೆ ಶಾಸಕ ಹರೀಶ್ ಪೂಂಜಾ ಸಿಎಂಗೆ ಪತ್ರ ಬರೆದಿದ್ದರು.
ಹರೀಶ್ ಪೂಂಜಾ ವಿರುದ್ಧ ವ್ಯಾಪಕ ಆಕ್ರೋಶ: ಶಾಸಕ ಹರೀಶ್ ಪೂಂಜಾ ಮಹಿಳಾ ಅಧಿಕಾರಿ ಮೇಲೆ ದ್ವೇಷದಿಂದ ದೂರದ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲು ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರ ಹಾಗೂ ಮುಖ್ಯಮಂತ್ರಿಗಳ ಆದೇಶ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.
ನರಗುಂದ ಡಿವೈಎಸ್ಪಿ ಎತ್ತಗಂಡಿ: ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಕೊಲೆ ಪ್ರಕರಣ ಹಿನ್ನೆಲೆ ನರಗುಂದ ಡಿವೈಎಸ್ಪಿ ಶಂಕರ್ ಎಂ.ರಾಗಿ ಅವರನ್ನು ವರ್ಗಾವಣೆ ಮಾಡಿ ಡಿಜಿ ಆ್ಯಂಡ್ ಐಜಿಪಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ನರಗುಂದ ಡಿವೈಎಸ್ಪಿಯಾಗಿ ಈಗನಗೌಡರ್ ನೇಮಕ ಮಾಡಲಾಗಿದೆ.
ಇದನ್ನೂ ಓದಿ
ಪುನೀತ್ ನಿವಾಸಕ್ಕೆ ಭೇಟಿ ನೀಡಲಿರುವ ಅಲ್ಲು ಅರ್ಜುನ್; ಹೇಗಿರಲಿದೆ ಇಂದಿನ ಅವರ ವೇಳಾಪಟ್ಟಿ?
ತವರುಮನೆ ಆಸ್ತಿಗಾಗಿ ಸಹೋದರಿಯರ ಕಾದಾಟ; ತಂಗಿಗೆ ಬೆಂಕಿ ಹಚ್ಚಿ ಕೊಂದು, ತಾನೂ ಆಸ್ಪತ್ರೆ ಸೇರಿರುವ ಅಕ್ಕ
Published On - 11:34 am, Thu, 3 February 22