ಕರಾವಳಿ ಭಾಗದಲ್ಲಿ ಕುಸಿದ ಹಂದಿ ಮಾಂಸ ಉತ್ಪಾದನೆ; ಇಂದಿನಿಂದ ಭಾರೀ ಬೆಲೆ ಏರಿಕೆ
ಕೆಜಿಗೆ 240 ರೂಪಾಯಿ ಇದ್ದ ಹಂದಿ ಮಾಂಸ ಬೆಲೆಯು 280 ರೂ.ಗೆ ಏರಿಕೆಯಾಗಲಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಗರಿಷ್ಠ ಏರಿಕೆಯಾಗಿದ್ದು, ಇಂದಿನಿಂದ (ನವೆಂಬರ್ 13) ಜಾರಿಗೆ ಬರಲಿದೆ. ಹಂದಿಮಾಂಸ ಮಾರಾಟಗಾರರ ಪ್ರಕಾರ ಪೂರೈಕೆ ಪ್ರಮಾಣದ್ಲಿ ಭಾರೀ ವ್ಯತ್ಯಯ ಕಂಡುಬಂದಿರುವುದೆ ಬೆಲೆ ಏರಿಕೆಗೆ ಕಾರಣವಾಗಿದೆ.
![ಕರಾವಳಿ ಭಾಗದಲ್ಲಿ ಕುಸಿದ ಹಂದಿ ಮಾಂಸ ಉತ್ಪಾದನೆ; ಇಂದಿನಿಂದ ಭಾರೀ ಬೆಲೆ ಏರಿಕೆ](https://images.tv9kannada.com/wp-content/uploads/2023/11/piggery-farming-pig-meat-supply-hit-low-pork-price-hiked-in-coastal-karnataka-mangaluru-1.jpg?w=1280)
ಮಂಗಳೂರು, ನವೆಂಬರ್ 13: ಹಂದಿ ಸಾಕಾಣಿಕೆದಾರರು ಮತ್ತು ಹಂದಿ ಮಾಂಸ ಪೂರೈಕೆದಾರರು ಮಾಂಸದ ಬೆಲೆಯನ್ನು 16.6% ರಷ್ಟು ಏರಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡ ನಂತರ ಕರಾವಳಿ ಕರ್ನಾಟಕದಲ್ಲಿ ಹಂದಿಮಾಂಸ ಸೇವಿಸುವವರ ಮೇಲೆ ಭಾರೀ ಪರಿಣಾಮ ಬೀರಿದೆ.
ಕೆಜಿಗೆ 240 ರೂಪಾಯಿ ಇದ್ದ ಹಂದಿ ಮಾಂಸ ಬೆಲೆಯು 280 ರೂ.ಗೆ ಏರಿಕೆಯಾಗಲಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಗರಿಷ್ಠ ಏರಿಕೆಯಾಗಿದ್ದು, ಇಂದಿನಿಂದ (ನವೆಂಬರ್ 13) ಜಾರಿಗೆ ಬರಲಿದೆ. ಹಂದಿಮಾಂಸ ಮಾರಾಟಗಾರರ ಪ್ರಕಾರ ಪೂರೈಕೆ ಪ್ರಮಾಣದ್ಲಿ ಭಾರೀ ವ್ಯತ್ಯಯ ಕಂಡುಬಂದಿರುವುದೆ ಬೆಲೆ ಏರಿಕೆಗೆ ಕಾರಣವಾಗಿದೆ.
ವ್ಯಾಪಕವಾಗಿ ಸೇವಿಸುವ ಡ್ಯುರೋಕ್ (Duroc) ಎಂಬ ಹಂದಿ ತಳಿ ಕಳೆದ ಕೆಲವು ತಿಂಗಳುಗಳಿಂದ ಬಹಳ ಸೀಮಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಅಲ್ಲದೆ, ಹೆಚ್ಚಿದ ಇಂಧನ, ಫೀಡ್ ಆಹಾರ ಮತ್ತು ಹಂದಿ ಸಾಕಣೆಯ (piggery farming) ಇತರ ಅವಶ್ಯಕತೆಗಳು ಹೆಚ್ಚಳಕ್ಕೆ ಅಂಶಗಳಾಗಿವೆ.
ಈ ಹಿಂದೆ 2019 ರಲ್ಲಿ ಕೊನೆಯ ಬಾರಿಗೆ ಹಂದಿಮಾಂಸದ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಈಗ ಬೆಲೆಯನ್ನು ರೂ 220 ರಿಂದ ರೂ 20 ರಷ್ಟು ಹೆಚ್ಚಿಸಲಾಗಿದೆ. ಹಿಂದಿನ ಬೆಲೆ ಏರಿಕೆಗಳಿಗೆ ಹೋಲಿಸಿದರೆ ಈಗಿನದು ಇದುವರೆಗಿನ ಅತ್ಯಧಿಕವಾಗಿದೆ. ಹಂದಿಮಾಂಸದ ಬೆಲೆಗಳ ಹೆಚ್ಚಳವು ಅಡುಗೆ ಮತ್ತು ಆಹಾರ ಉದ್ಯಮಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಹಂದಿಮಾಂಸ ಆಹಾರದ ದರಗಳನ್ನು ಹೆಚ್ಚಿಸಲು ಹೋಟೆಲ್ ಉದ್ಯಮವೂ ಯೋಜಿಸುತ್ತಿದೆ. ಕಳೆದ ಮೂರು ತಿಂಗಳಿನಿಂದ ಕೊರತೆ ಪ್ರಾರಂಭವಾಗಿದೆ ಎಂದು ಹಂದಿ ಸಾಕಾಣಿಕೆದಾರ ಫಿಲಿಪ್ಸ್ ಡಿಸೋಜಾ ಅವರು ಟೈಮ್ಸ್ ಆಫ್ ಇಂಡಿಯಾ (TOI)ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಹಂದಿ ಕಾಟ: ತಮಿಳುನಾಡು ಮೂಲದ ಭಕ್ತನ ಮೇಲೆ ದಾಳಿ
ಕೆಲವು ಹಂದಿ ಸಾಕಾಣಿಕೆದಾರರು ಹಂದಿ ರೋಗಗಳಿಗೆ ಹೆದರಿ ತಮ್ಮ ಬಳಿಯಿದ್ದ ಹಂದಿಗಳನ್ನು ಸಗಟು ವ್ಯಾಪಾರಿಗಳಿಗೆ ಮಾರಲು ಆರಂಭಿಸಿದರು. ಅವರು ಹಂದಿಮರಿಗಳನ್ನು ಹೊರತುಪಡಿಸಿ ಪೂರ್ಣ ಹಂದಿ ಸ್ಟಾಕ್ ಅನ್ನು ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಿದರು. ಮುಂದೆ ವ್ಯಾಪಾರಿಗಳು ಅವನ್ನು ಈಶಾನ್ಯ ರಾಜ್ಯಗಳಿಗೆ ಸರಬರಾಜು ಮಾಡಿದರು. ಅಲ್ಲಿ ಹಂದಿ ಮಾಂಸದ ಬೆಲೆ 380 ರಿಂದ 400 ರೂ. ನಡುವೆ ಇದೆ. ಈಗ, ರಾಜ್ಯದಲ್ಲಿ ಹಂದಿಗಳ ದಾಸ್ತಾನು ಇಲ್ಲ. ಈಗಿರುವ ಹಂದಿಮರಿಗಳಿಗೆ ಇನ್ನೂ ಆರು ಅಥವಾ 9 ತಿಂಗಳುಗಳು ಬೇಕಾಗುತ್ತದೆ. ಇದರಿಂದ ಕೊರತೆ ಉಂಟಾಗಿದೆ’ ಎಂದು ಅಡುಗೆ ವ್ಯಾಪಾರವನ್ನೂ ನಡೆಸುತ್ತಿರುವ ಡಿಸೋಜಾ ವಿವರಿಸಿದರು. ಸ್ವತಃ ಉಡುಪಿಯಿಂದ ಆಹಾರ ತಯಾರಿಕೆಗೆ ಮಾಂಸವನ್ನು ತರಿಸಿಕೊಳ್ಳುತ್ತೇನೆ ಎಂದರು.
ಎರಡು ದಶಕಗಳಿಂದ ಉದ್ಯಮದಲ್ಲಿರುವ ಮಾಂಸ ಮಾರಾಟಗಾರರೊಬ್ಬರು ಪ್ರಚಲಿತ ಡ್ಯುರೋಕ್ ತಳಿಯ ಕೊರತೆಯ ಬಗ್ಗೆ ಹೀಗೆ ಗಮನಸೆಳೆದಿದ್ದಾರೆ: ಉದ್ಯಮದ ಮೂಲಗಳ ಪ್ರಕಾರ ಮಂಗಳೂರಿನಲ್ಲಿ ಇನ್ನೂ ಒಂದು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲದಲ್ಲಿ ಬೆಲೆಗಳು ಕೆಜಿಗೆ 350 ರೂ.ವರೆಗೆ ಏರುವ ಲಕ್ಷಣಗಳಿವೆ. ಮಂಗಳೂರಿನಲ್ಲಿ ಲಭ್ಯವಿರುವ ಸರಬರಾಜನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿದ್ದು, ಕೊರತೆ ಹಾಚ್ಚಾಗುತ್ತಿದ್ದು, ಬೆಲೆಯೂ ಹೆಚ್ಚಾಗಲಿದೆ ಎಂದು ಮಾಂಸ ಮಾರಾಟಗಾರ ವಿನ್ಸೆಂಟ್ ಫೆರ್ನಾಡೀಸ್ ಹೇಳಿದರು. ಕಳೆದ ವಾರಾಂತ್ಯ ಶನಿವಾರದಂದು ಸರಬರಾಜು ಇಲ್ಲದ ಕಾರಣ ಹಂದಿಮಾಂಸವನ್ನು ಮಾರಾಟ ಮಾಡುವ ಎಂಟು ಅಂಗಡಿಗಳನ್ನು ಮುಚ್ಚಲಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಅವರು ಹೊರಹಾಕಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ