ದೇವರ ತಲೆ ಮೇಲೆ ಕಾಲಿಟ್ಟು ಪೂಜೆ: ಅದೊಂದು ಸಂಪ್ರದಾಯ ಅಂತ ಮಾಡಿದ್ದೆ, ಕ್ಷಮಿಸಿ ಎಂದ ಅರ್ಚಕ
ಬೇಡರ ಕಣ್ಣಪ್ಪನಂತೆ ದೇವರ ಮೇಲೆ ಪಾದವಿಟ್ಟು ಉಗ್ರ ಭಕ್ತ ಪ್ರದರ್ಶನಕ್ಕೆ ಮುಂದಾಗಿದ್ದ ಅರ್ಚಕನಿಗೆ ಜನರಿಗೆ ಛೀಮಾರಿ ಹಾಕಿದ್ದಾರೆ. ಇದರಿಂದ ಪೂಜಾರಪ್ಪ ಎಚ್ಚೆತ್ತುಕೊಂಡಿದ್ದಾನೆ.
ದಾವಣಗೆರೆ: ಬೇಡರ ಕಣ್ಣಪ್ಪನ ರೀತಿಯಲ್ಲಿ ದೇವರ ಮೂರ್ತಿ ಮೇಲೆ ಕಾಲಿಟ್ಟು ತನ್ನ ಭಕ್ತಿಯನ್ನು ಸಮರ್ಪಿಸಿದ ಹಾಗೇ ಪೂಜಾರಿಯೊಬ್ಬ ಆಂಜನೇಯನ ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಅರ್ಚಕ ಎಚ್ಚೆತ್ತುಕೊಂಡು ಕ್ಷಮೆಯಾಚಿಸಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳೂರ ಗ್ರಾಮದ ಆಂಜನೇಯ ಸ್ವಾಮೀ ದೇವಸ್ಥಾನದಲ್ಲಿ ಮಹೇಶ್ವರಯ್ಯ ಸ್ವಾಮಿ ದೇವರ ಮೂರ್ತಿ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದ.ಬಳಿಕ ಅರ್ಚಕನಿಗೆ ಭಕ್ತರು ಛೀಮಾರಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಆಂಜನೇಯ ಸ್ವಾಮೀ ದೇವಸ್ಥಾನದ ಅರ್ಚಕ ಮಹೇಶ್ವರಯ್ಯ ಸ್ವಾಮಿ, ನನ್ನಿಂದ ತಪ್ಪಾಗಿದೆ. ಕ್ಷಮೆಯಾಚಿಸಿ. ಅದೊಂದು ಸಂಪ್ರದಾಯ ಅಂತಾ ಮಾಡಿದ್ದೆ. ನನ್ನಿಂದ ತಪ್ಪಾಗಿದೆ. ಕ್ಷಮಿಸಿ ಎಂದಿದ್ದಾರೆ.
ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ವಿಚಿತ್ರ ಅರ್ಚಕ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್, ಜನರ ಆಕ್ರೋಶ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ನಿವಾಸಿ ಮಹೇಶ್ವರಯ್ಯ ಸ್ವಾಮಿ, ಕಳೆದ ಕೆಲ ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳೂರ ಗ್ರಾಮದ ಆಂಜನೇಯ ಸ್ವಾಮೀ ದೇವಸ್ಥಾನದಲ್ಲಿ ದೇವರ ಮೂರ್ತಿ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದ. ದೇವರ ಮೇಲೆ ಕಾಲಿಟ್ಟು ಅಭಿಷೇಕ ಮಾಡುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಫುಲ್ ವೈರಲ್ ಆಗಿತ್ತು. ಬಳಿಕ ಸಾರ್ವ ಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.