ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು‌ ಉದುರ್ಯಾವೋ; ಮುಳ್ಳುಗದ್ದಿಗೆ ಉತ್ಸವದಲ್ಲಿ ಆಪತ್ತಿನ ಸೂಚನೆ ನೀಡಿದ ಕಾರ್ಣಿಕ ಭವಿಷ್ಯ ನುಡಿ

ಈ ಸಲ ಮುಳ್ಳುಗದ್ದಿಗೆ ಕಾರ್ಣಿಕ ಸ್ವಲ್ಪ ಆತಂಕ ಹುಟ್ಟಿಸುವಂತಹದ್ದೆ ಆಗಿದೆ. ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು ಉಪರ್ಯಾವೋ ಅಂತರಂಗದ ಹಕ್ಕಿ ಹಾರಿ ಹೋದಿತೋ ಎಂಬ ವಾಣಿ ಆಗಿತ್ತು.

Follow us
TV9 Web
| Updated By: ಆಯೇಷಾ ಬಾನು

Updated on: Feb 19, 2023 | 1:10 PM

ದಾವಣಗೆರೆ: ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು‌ ಉದುರ್ಯಾವೋ. ಅಂತರಂಗದ ಹಕ್ಕಿ ಹಾರಿತೋ ಎಂದು ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳುಗದ್ದಿಗೆ ಉತ್ಸವದಲ್ಲಿ ಕಾರ್ಣಿಕ ನುಡಿ ನುಡಿದಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಏಕೆಂದರೆ ಈ ಕಾರ್ಣಿಕ ನುಡಿಯ ವಿಶ್ಲೇಷಣೆ ಪ್ರಕಾರ ಬರುವ ಕಾಲದಲ್ಲಿ ಇನ್ನಷ್ಟು ಆಪತ್ತುಗಳು ಬರಲಿವೆ ಎಂದು ಹೇಳಲಾಗಿದ್ದು ಇದುವರೆಗೂ ಹರನಹಳ್ಳಿ-ಕೆಂಗಾಪುರ ರಾಮಲಿಂಗೇಶ್ವರದ ಮುಳ್ಳುಗದ್ದಿಗೆ ಉತ್ಸವದಲ್ಲಿ ಹೇಳಲಾದ ಕಾರ್ಣಿಕ ಸುಳ್ಳಾಗಿಲ್ಲ ಎಂಬುವುದು ಭಕ್ತರ ನಂಬಿಕೆಯಾಗಿದೆ.

ಈಗ ಎಲ್ಲಿ ನೋಡಿದರಲ್ಲಿ ಜಾತಿ ಜಾತಿ ಎಂದು ಕಿತ್ತಾಡುವುದೇ ಜಾಸ್ತಿ. ಕಾರಣ ಜಾತಿ ಅಷ್ಟೊಂದು ಬಲಿಷ್ಠವಾಗಿದೆ. ಆದ್ರೆ ಇದಕ್ಕೊಂದು ಅಪವಾದ ಎನ್ನುವ ಸ್ಥಳವೊಂದಿದೆ. ಇವರನ್ನ ಎಲ್ಲ ಜನಾಂಗ ಜನರು ಹೆಗಲ ಮೇಲೆ ಹೊತ್ತುಕೊಂಡು ಉತ್ಸವ ನಡೆಸುತ್ತಾರೆ. ಅದೇ ರೀತಿ ಸ್ವಾಮೀಜಿಯೂ ಸಹ ಆ ಭಾಗದ ಜನರ ಜೀವನ ಮಟ್ಟ ಸುಧಾರಣೆಗೆ ನಾನಾ ಕೆಲಸಗಳನ್ನೂ ಮಾಡುತ್ತಿದ್ದಾರೆ. ಈ ಸ್ವಾಮೀಜಿ ಪ್ರಸಿದ್ಧಿ ಆಗಿದ್ದೇ ಮುಳ್ಳು ಗದ್ದಿಗೆಯಿಂದ. ಇನ್ನು ಮುಳ್ಳು ಗದ್ದಿಗೆ ಉತ್ಸವದಲ್ಲಿ ರಾಮಲಿಂಗೇಶ್ವರಶ್ರೀ ಕಾರ್ಣಿಕ ನುಡಿ ನುಡಿದಿದ್ದಾರೆ.

ಮುಳ್ಳುಗದ್ದಿಗೆ ಉತ್ಸವದಲ್ಲಿ ಆತಂಕಕಾರಿ ಕಾರ್ಣಿಕ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ- ಕೆಂಗಾಪುರ ರಾಮಲಿಂಗೇಶ್ವರ ಕ್ಷೇತ್ರ. ಇದೊಂದು ಸರ್ವ ಜನಾಂಗದ ಸಮನ್ವಯ ಕೇಂದ್ರ ಅಂತಲೇ ಪ್ರಸಿದ್ಧಿ. ಪ್ರತಿ ವರ್ಷ ಇಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಉತ್ಸವ ನಡೆಯುತ್ತದೆ. ಇದರ ಆಕರ್ಷಣೆ ಅಂದ್ರೆ ರಾಮಲಿಂಗೇಶ್ವರ ಸ್ವಾಮೀಜಿ ಮೆರವಣಿಗೆ. ಶತಮಾನಗಳಿಂದ ನಡೆದುಕೊಂಡು ಬಂದ ಉತ್ಸವ ಸಮಾನತೆಗೆ ಇನ್ನೊಂದು ಹೆಸರು. ಸ್ವಾಮೀಜಿ ಶೋಷಿತ ಸಮಾಜದಿಂದ ಬಂದವರು. ಇಂತಹ ಸ್ವಾಮೀಜಿಯನ್ನೆ ತಮ್ಮ ಗುರು ಎಂದು ಒಪ್ಪಿಕೊಂಡಿದ್ದಾರೆ ಪ್ರತಿಯೊಂದು ಜಾತಿ ಜನಾಂಗದ ಜನ.

ಇದನ್ನೂ ಓದಿ: ಪುಣ್ಯ ಸ್ತ್ರೀಯಳ ಒಲುಮೆ ಬಣ್ಣ ಭಜನೆ ಅಲ್ಲ: ಶಿವರಾತ್ರಿಯಂದು ಕೊಡೇಕಲ್ ಕಾಲಜ್ಞಾನ ಬಸವಣ್ಣ ನುಡಿದ ರಾಜಕೀಯ ಭವಿಷ್ಯದ ಮರ್ಮವೇನು?

ಉತ್ಸವದಲ್ಲಿ ವೇದಿಕೆ ಮಾಡಿ ಬಹುತೇಕ ಮೇಲ್ಜಾತಿಯ ಜನರೆ ಸ್ವಾಮೀಜಿಯ ಉತ್ಸವ ಮಂಟಪವನ್ನ ಹೆಗಲ ಮೇಲೆ ಹೊತ್ತು ಕೊಂಡು ಹೋಗುತ್ತಾರೆ. ಇದರ ಜೊತೆಗೆ ಮುಳ್ಳು ಗದ್ದೆಗೆ ಉತ್ಸವ ಸಹ ನಡೆಯುತ್ತದೆ. ಈ ಸಲ ಮುಳ್ಳುಗದ್ದಿಗೆ ಕಾರ್ಣಿಕ ಸ್ವಲ್ಪ ಆತಂಕ ಹುಟ್ಟಿಸುವಂತಹದ್ದೆ ಆಗಿದೆ. ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು ಉಪರ್ಯಾವೋ ಅಂತರಂಗದ ಹಕ್ಕಿ ಹಾರಿ ಹೋದಿತೋ ಎಂಬ ವಾಣಿ ಆಗಿತ್ತು. ಇದರಲ್ಲಿ ಗಗನದಿಂದ ಮುತ್ತು ಉದುರುವುದು ಶುಭವಾದ್ರೆ ಉಳಿದಿದ್ದು ಮಾತ್ರ ಆಪತ್ತು ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಇಂತಹ ಸಂಪ್ರದಾಯದ ಜೊತೆಗೆ ಸ್ವಾಮೀಜಿ ಶಿಕ್ಷಣ ಸಂಸ್ಥೆ, ಗ್ರಾಮೀಣ ಜನತೆ ಅಕ್ಷರದ ಅರಿವು ಕಾರ್ಯಕ್ರಮ ನಡೆಸುತ್ತಲೇ ಬಂದಿದ್ದಾರೆ.

ಬೆಳಿಗ್ಗೆ ಐದು ಗಂಟೆಗ ದೇವರು ಹೊಳೆ ಪೂಜೆ ಮುಗಿಸಿಕೊಂಡು, ನಂತರ ಆರು ಗಂಟೆಯಿಂದ ಮುಳ್ಳು ಗದ್ದಿಗೆ ಸುರುವಾಗುತ್ತದೆ. ಪುಣ್ಯ ಕ್ಷೇತ್ರದಿಂದ ಮುಳ್ಳುಗದ್ದಿಗೆ ಕೆಂಗಾಪುರ ಗ್ರಾಮದ ವರೆಗೆ ಹೋಗುತ್ತದೆ. ಹೀಗೆ ಹೋಗುವಾಗ ಹತ್ತಾರು ಸಲ ಸ್ವಾಮೀಜಿ ಹಸಿ ಜಾಲಿ ಮುಳ್ಳಿನಿಂದ ಮಾಡಿದ ಗದ್ದೆಗೆ ಮೇಲೆ ಜೋರಾಗಿ ಜಿಗಿಯುವುದು ವಿಶೇಷ. ಬಹುತೇಕ ಕಡೆ ಮೇಲ್ವರ್ಗಕ್ಕೆ ಸೇರಿದ ಸ್ವಾಮೀಜಿಗಳು ಇರುತ್ತಾರೆ. ಎಲ್ಲ ವರ್ಗದ ಜನರು ಭಕ್ತರಿರುತ್ತಾರೆ. ಆದ್ರೆ ಇಲ್ಲಿ ಸ್ವಾಮೀಜಿ ಶೋಷಿತ ಸಮಾಜದಿಂದ ಬಂದಿದ್ದು, ಭಕ್ತರು ಬೇರೆ ಬೇರೆ ಸಮಾಜದಿಂದ ಬಂದವರಾಗಿದ್ದಾರೆ. ಹೀಗಾಗಿ ಜಾತಿಗಿಂತ ನೀತಿ ದೊಡ್ಡದು ಎಂಬ ಸಂಕಲ್ಪ ಇಲ್ಲಿನ ಜನರದ್ದು. ಸುಮಾರು ಮೂರು ಸಾವಿರ ಬಡ ಮಕ್ಕಳಿಗೆ ಅಕ್ಷರ ದಾಸೋಹ ಸ್ವಾಮೀಜಿ ನಡೆಸುತ್ತಾರೆ. ಜೊತೆಗೆ ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ ನಡೆಸುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಜಾತಿ ಜಾತಿಗಳ ನಡುವೆ ಸಹ ಬಾಳ್ವೆ ಇನ್ನು ಜೀವಂತ ಇದೆ ಎನ್ನುವುದಕ್ಕೆ ಕೆಂಗಾಪುರ ರಾಮಲಿಂಗೇಶ್ವರ ಕ್ಷೇತ್ರ ಸಾಕ್ಷಿ ಅಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರು ಇಲ್ಲಿ ಬಂದು ಮೂರು ದಿನಗಳ ಕಾಲ ಠಿಕಾಣಿ ಹಾಕುತ್ತಾರೆ. ಹೀಗೆ ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಸಂಭ್ರಮಿಸುತ್ತಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಮೇಲಾಗಿ ಈ ಸ್ವಾಮೀಜಿಗಳು ಸಂಸಾರಿಗಳಾಗಿದ್ದಾರೆ. ಅವರ ನುಡಿದ ಕಾರ್ಣೀಕ ಸುಳ್ಳಾದ ಇತಿಹಾಸವೇ ಇಲ್ಲಾ ಎಂದು ಇಲ್ಲಿನ ಭಕ್ತರ ನಂಬಿಕೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ