ದಾವಣಗೆರೆಯ ಈ ದೇಗುಲದಲ್ಲಿ ದೇವಿಗೆ ನೋಟುಗಳದ್ದೇ ಅಲಂಕಾರ! ಕಾರಣ ಇಲ್ಲಿದೆ
Davangere old city kannika parameshwari temple: ದೇವಿಯ ಅಲಂಕಾರಕ್ಕೆ ಒಂದು ಸಾವಿರ ಮುಖ ಬೆಲೆಯಲ್ಲಿ ಒಂದು ಸಾವಿರ ನೋಟ್ ಗಳನ್ನ ಬಳಸಲಾಗಿದೆ. ಕನಕಾಂಬರ ಬಣ್ಣದ ಸಾವಿರದ ನೋಟನ್ನ ವಿಭಿನ್ನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಅಂದರೆ ಎರಡು ಲಕ್ಷ ರೂಪಾಯಿ ಹಣ ಎರಡು ಸಾವಿರ ನೋಟ್ನಲ್ಲಿದೆ. ಇದನ್ನ ಬಿಟ್ಟರೆ 500 ಮುಖ ಬೆಲೆಯ ಒಂದು ಸಾವಿರ ನೋಟುಗಳಿವೆ.
ದಾವಣಗೆರೆ, ಅಕ್ಟೋಬರ್ 24: ಕಳೆದ ಒಂದು ಶತಮಾನಗಳಿಂದ ದಾವಣಗೆರೆಯಲ್ಲಿ (Davanagere) ವಿಶೇಷ ಪೂಜೆಯೊಂದು ನಡೆಯುತ್ತಿದೆ. ದೇವರ ಪೂಜೆ ಅಂದ್ರೆ ಮಾಮೂಲಾಗಿ ಹಣ್ಣು ಕಾಯಿ, ಅರಿಶಿನ ಕುಂಕುಮ ಹೀಗೆ ಹತ್ತು ಹಲವಾರು ಪೂಜಾ ಸಾಮಗ್ರಿಗಳಿರುವುದನ್ನ ನೋಡಿದ್ದೇವೆ. ಆದ್ರೆ ಈ ದೇವಿಯ ವಿಶೇಷತೆಯೇ ಬೇರೆ. ಕಾಂಚನ ಅಂದ್ರೆ ದೇವಿಗೆ ಬಲು ಇಷ್ಟವಂತೆ. ಹೀಗಾಗಿ ಬರೀ ಬಣ್ಣದ ನೋಟುಗಳಲ್ಲಿಯೇ ದೇವಿಗೆ ಭಕ್ತಿ ಸಮರ್ಪಿಸುವ ಪದ್ಧತಿ ಇಲ್ಲಿ ನಡೆದು ಬಂದಿದೆ. ದಾವಣಗೆರೆ ಹಳೇ ನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನಕ್ಕೆ (Kannika Parameshwari Temple) ಬಹುತೇಕ ಜನರು ಭೇಟಿ ನೀಡುತ್ತಾರೆ. ಕಾರಣ ಇಲ್ಲಿ ವಿಶೇಷ ಪೂಜೆಗಳು ನಿರಂತರವಾಗಿ ನಡೆಯುತ್ತವೆ.
ಇನ್ನು ದಸರಾ ಬಂದ್ರೆ ಮುಗಿಯಿತು. ಒಂಬತ್ತು ದಿನಗಳ ಕಾಲ ನಿರಂತರವಾಗಿ ಅರಿಶಿನ ಕುಂಕುಮ ಪೂಜೆ, ಮಂತ್ರಾಕ್ಷತೆ, ಮುತ್ತಿನ ಅಲಂಕಾರ, ಅನ್ನಪೂರ್ಣೆಶ್ವರಿ ಪೂಜೆ, ಸರಸ್ವತಿ ಪೂಜೆ, ವಿಳ್ಯದೆಲೆ ಪೂಜೆ, ರಾಜರಾಜೇಶ್ವರಿ ಪೂಜೆ, ದುರ್ಗಾ ಪೂಜೆ ಕೊನೆಯ ದಾಗಿ ಧನ ಲಕ್ಷ್ಮಿ ಪೂಜೆ ಅಂತಾ ಮಾಡುತ್ತಾರೆ. ಇಲ್ಲಿನ ವಿಶೇಷವೆಂದರೆ ಹೆಸರೇ ಹೇಳುವಂತೆ ಧನ ಲಕ್ಷ್ಮಿ ಪೂಜೆಯಂದರೆ ಕಾಂಚನ ಕಡ್ಡಾಯ. ಮೇಲಾಗಿ ಶ್ರೀಮಂತರು ವ್ಯಾಪಾರಿಗಳೇ ಜಾಸ್ತಿ ಭಕ್ತರಿರುವ ದೇವರು ಕನ್ನಿಕಾಪರಮೇಶ್ವರಿ. ಹೀಗಾಗಿ ಬರೀ ನೋಟಿನಲ್ಲಿಯೇ ದೇವಿಯ ಶೃಂಗಾ ಮಾಡಲಾಗುತ್ತದೆ. 10, 20, 50,100, 200 ಹಾಗೂ 500 ಮುಖಬೆಲೆಯ ತಲಾ ಒಂದು ಸಾವಿರ ನೋಟುಗಳಿಂದ ದೇವಿಗೆ ಶೃಂಗಾರ ಮಾಡಲಾಗಿದೆ. ಇದು ಬರೋಬರಿ 3.50 ಲಕ್ಷ ರೂಪಾಯಿ ಆಗುತ್ತೆ.
ದೇವಿಯ ಅಲಂಕಾರಕ್ಕೆ ಒಂದು ಸಾವಿರ ಮುಖ ಬೆಲೆಯಲ್ಲಿ ಒಂದು ಸಾವಿರ ನೋಟ್ ಗಳನ್ನ ಬಳಸಲಾಗಿದೆ. ಕನಕಾಂಬರ ಬಣ್ಣದ ಸಾವಿರದ ನೋಟನ್ನ ವಿಭಿನ್ನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಅಂದರೆ ಎರಡು ಲಕ್ಷ ರೂಪಾಯಿ ಹಣ ಎರಡು ಸಾವಿರ ನೋಟ್ನಲ್ಲಿದೆ. ಇದನ್ನ ಬಿಟ್ಟರೆ 500 ಮುಖ ಬೆಲೆಯ ಒಂದು ಸಾವಿರ ನೋಟುಗಳಿವೆ. ದೇವಿಗೆ ಧನ ಅಂದ್ರೆ ಬಲು ಇಷ್ಟ. ಮೇಲಾಗಿ ಕೊರೊನಾ ಸಂಕಷ್ಟದಿಂದ ಜನರ ಹೊರಗೆ ಬರುತ್ತಿದ್ದಾರೆ. ಇನ್ನೂ ಕೊರೊನಾ ಮುಕ್ತವಾಗಲಿ ಜೊತೆಗೆ ವ್ಯಾಪಾರದಲ್ಲಿ ವೃದ್ಧಿ ಕಾಣಲಿ ಎಂಬ ಉದ್ದೇಶದಿಂದ ಇಂತಹ ಪೂಜೆ ಮಾಡಲಾಗಿದೆ ಎಂಬುದು ದೇವಸ್ಥಾನ ಸಮಿತಿಯ ಉದ್ದೇಶ.
ಇದನ್ನೂ ಓದಿ: ದಾವಣಗೆರೆ: ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ; ಗ್ರಾಮಸ್ಥರಲ್ಲಿ ಪುರಸಭೆ ಮುಖ್ಯಾಧಿಕಾರಿ ಮನವಿ
ಇದಕ್ಕಾಗಿ ಮೂರು ದಿನಗಳ ಕಾಲ ಇಲ್ಲಿನ ಕೆಲ ಕಲಾವಿದರು ಸೇರಿದ ವಿಭಿನ್ನ ರೀತಿಯಲ್ಲಿ ಧನ ಲಕ್ಷ್ಮಿಯನ್ನ ಸಿಂಗರಿಸುತ್ತಾರೆ. ಮೇಲಾಗಿ ಇದು ಭಕ್ತರಿಂದ ಸಂಗ್ರಹಿಸಿದ ಹಣ. ಪೂಜೆಗೆ ಬಳಸಿದ ಹಣವೆಲ್ಲಾ ದೇವಸ್ಥಾನದ ಸಮಿತಿಗೆ ಸೇರುತ್ತದೆ. ಹೀಗೆ ಕಳೆದ ಒಂದು ಶತಮಾನಗಳಿಂದ ಇಲ್ಲಿ ಧನ ಲಕ್ಷ್ಮಿ ಪೂಜೆ ನಡೆಯುತ್ತದೆ. ಹೀಗೆ ವಿಭಿನ್ನ ರೀತಿಯಲ್ಲಿ ಪೂಜೆ ಸುರುವಾಗಿ ಒಂದು ನೂರು ವರ್ಷ ಮುಕ್ತಾಯವಾಗಿದೆ. ಮೊದಲು ನಾಣ್ಯಗಳಲ್ಲಿ ದೇವಿಯನ್ನ ಪೂಜೆಸುತ್ತಿದ್ದರು. ಕಾಲ ಬದಲಾದಂತೆ ನೋಟುಗಳಲ್ಲಿ ಈ ರೀತಿ ಪೂಜೆ ಸುರುವಾಗಿದೆ. ಹೀಗಾಗಿ ಧನ ಲಕ್ಷ್ಮಿಗೆ ಇಷ್ಟವಾದನ್ನೆ ಇಟ್ಟು ನಿರಂತರವಾಗಿ ಇಲ್ಲಿ ಭಕ್ತರು ಪೂಜೆ ಮಾಡುತ್ತಿದ್ದಾರೆ. ಇದನ್ನ ನೋಡಲು ಜನ ಸಾಗರವೇ ಬರುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ