ದಾವಣಗೆರೆ: ಕೆಳಗೆ ನಿಂತು ಸ್ಟಾರ್ಟ್ ಮಾಡಿದ ರೈತನ ಮೇಲೆಯೇ ಹರಿದ ಟ್ರ್ಯಾಕ್ಟರ್
ಟ್ರ್ಯಾಕ್ಟರ್ ಹರಿದು ರೈತ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆಯಲ್ಲಿ ನಡೆದಿದೆ. ಅಡಿಕೆ ಸುಲಿಯುವ ಯಂತ್ರಕ್ಕೆ ಅಡಿಕೆ ಹಾಕಲೆಂದು ಕೆಳಗೆ ನಿಂತು ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದಾಗ ಈ ಅವಘಡ ಉಂಟಾಗಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದಾವಣಗೆರೆ, ನ.29: ಟ್ರ್ಯಾಕ್ಟರ್ ಹರಿದು ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ (Davanagere) ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ. ನವೀನ್ ಎಚ್.ಟಿ. (41) ಮೃತಪಟ್ಟ ರೈತ. ನವೀನ್ ಮೇಲೆ ಟ್ರಾಕ್ಟರ್ ಹಾರಿದ ದೃಶ್ಯ ಮನೆ ಮುಂದಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೊಡ್ಡೇರಿಕಟ್ಟೆ ಗ್ರಾಮ ರೈತ ನವೀನ್ ಅಡಿಕೆಯನ್ನು ಸುಲಿಯುವ ಯಂತ್ರಕ್ಕೆ ಹಾಕಲು ಟ್ರಾಕ್ಟರ್ ನಿಲ್ಲಿಸಿದ್ದ ತುಂಬಿಸಿದ್ದರು. ಅಲ್ಲದೆ, ಯಂತ್ರಕ್ಕೆ ಹಾಕಲೆಂದು ಟ್ರ್ಯಾಕ್ಟರ್ ಅನ್ನು ಕೆಳಗೆ ನಿಂತುಕೊಂಡೇ ಸ್ಟಾರ್ಟ್ ಮಾಡಿದ್ದಾರೆ. ಈ ವೇಳೆ ಕೊಂಚ ಮುಂದಕ್ಕೆ ಹೋಗಿ ರಿಟರ್ನ್ ತಿರುಗಿದ ಟ್ರ್ಯಾಕ್ಟರ್ ನವೀನ್ ಮೈಮೇಲೆ ಹರಿದಿದೆ.
ಇದನ್ನೂ ಓದಿ: ದಾವಣಗೆರೆ: ವಸತಿ ಶಾಲೆಯಲ್ಲಿ ಊಟ ಮಾಡಿದ ಬಳಿಕ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅರ್ಧ ಸುತ್ತು ಬಂದು ನವೀನ್ ಮೈಮೇಲೆ ಟ್ರ್ಯಾಕ್ಟರ್ ಹರಿಯುವುದನ್ನು ಕಾಣಬಹುದು. ಸದ್ಯ ನವೀನ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ