5 ವರ್ಷದ ಪುತ್ರನ ಜತೆ 90 ಕಿಲೋಮೀಟರ್​ ನಡೆದ ತಾಯಿ; ಕೌಟುಂಬಿಕ ಕಲಹ ಹಿನ್ನೆಲೆ ಮನೆ ತೊರೆದು ಬಂದ ಮಹಿಳೆ

ಶಿವಮೊಗ್ಗದ ಗಾಡಿಕೊಪ್ಪದ ಗಂಡನ ‌ಮನೆಯಲ್ಲಿ ಜಗಳವಾಡಿಕೊಂಡು ಬೆಳಗಿನ ಜಾವ ಮನೆ ಬಿಟ್ಟು ನಡೆದುಕೊಂಡು ಬಂದ ಮಹಿಳೆ ನಾಗರತ್ನ, ದಾವಣಗೆರೆಯನ್ನು ತಲುಪಿದ್ದಾರೆ. ತಲೆ ಮೇಲೆ ಗಂಟು ಹೊತ್ತುಕೊಂಡು ಬರುತ್ತಿದ್ದ ಮಹಿಳೆಯನ್ನು ಕಂಡ ಪೊಲೀಸರು, ದಾವಣಗೆರೆಯ ಎಸ್.​ಎಸ್​ ಆಸ್ಪತ್ರೆ ಬಳಿ ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

5 ವರ್ಷದ ಪುತ್ರನ ಜತೆ 90 ಕಿಲೋಮೀಟರ್​ ನಡೆದ ತಾಯಿ; ಕೌಟುಂಬಿಕ ಕಲಹ ಹಿನ್ನೆಲೆ ಮನೆ ತೊರೆದು ಬಂದ ಮಹಿಳೆ
5 ವರ್ಷದ ಪುತ್ರನ ಜತೆ 90 ಕಿಲೋಮೀಟರ್​ ನಡೆದ ಮಹಿಳೆ

ದಾವಣಗೆರೆ: ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲೇ 5 ವರ್ಷದ ಪುತ್ರನ ಜತೆ 90 ಕಿಲೋಮೀಟರ್​ ಕ್ರಮಿಸಿರುವ ಘಟನೆಯೊಂದು ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗದ ಗಾಡಿಕೊಪ್ಪದ ಗಂಡನ ‌ಮನೆಯಲ್ಲಿ ಜಗಳವಾಡಿಕೊಂಡು ಬೆಳಗಿನ ಜಾವ ಮನೆ ಬಿಟ್ಟು ನಡೆದುಕೊಂಡು ಬಂದ ಮಹಿಳೆ ನಾಗರತ್ನ, ದಾವಣಗೆರೆಯನ್ನು ತಲುಪಿದ್ದಾರೆ. ತಲೆ ಮೇಲೆ ಗಂಟು ಹೊತ್ತುಕೊಂಡು ಬರುತ್ತಿದ್ದ ಮಹಿಳೆಯನ್ನು ಕಂಡ ಪೊಲೀಸರು, ದಾವಣಗೆರೆಯ ಎಸ್.​ಎಸ್​ ಆಸ್ಪತ್ರೆ ಬಳಿ ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಕೌಟುಂಬಿಕ ಕಲಹದಿಂದ ಮನನೊಂದ ನಾಗರತ್ನ, ಶಿವಮೊಗ್ಗ ತಾಲೂಕಿನ ಗಾಡಿಕೊಪ್ಪದಿಂದ ಬ್ಯಾಗ್ ಮತ್ತು ಮಗು ಹಿಡಿದು,ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತುಂಬಿಗೆರೆ ಗ್ರಾಮದ ತನ್ನ ಅಕ್ಕನ ಮನೆಗೆ ತೆರಳುತ್ತಿದ್ದರು. ಲಾಕ್ಡೌನ್ನಿಂದ ಬಸ್​ ಇಲ್ಲದೆ ನಡೆದು ಬಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ನಾಗರತ್ನ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ತಮ್ಮ ವಾಹನದಲ್ಲೇ ತಾಯಿ ಮತ್ತು ಮಗವನ್ನು ದಾವಣಗೆರೆಯಿಂದ ತುಂಬಿಗೆರೆಗೆ ಕರೆದೊಯ್ದಿದ್ದಾರೆ.

ಮಗನ ಔಷಧಿಗೆ 280 ಕಿಲೋಮೀಟರ್ ಸೈಕಲ್ ತುಳಿದ ಅಪ್ಪ
ಕೊರೊನಾ ನಿಯಂತ್ರಿಸಲು ಅನಿವಾರ್ಯವಾಗಿ ಸರ್ಕಾರ ಲಾಕ್​ಡೌನ್​ ವಿಧಿಸಿದೆ. ಈ ಲಾಕ್​ಡೌನ್​ ಜಾರಿಯಾದ ಕಾರಣ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಜನರು ಹಲವು ಕಾರಣಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪರದಾಡುತ್ತಿದ್ದಾರೆ. ಬಸ್​ಗಳಿಲ್ಲದೆ ಅಗತ್ಯವಿರುವ ವಸ್ತುಗಳನ್ನು ತರಲು ಹರಸಾಹಸ ಪಡಬೇಕಾಗಿದೆ. ತನ್ನ ಮಗನಿಗೆ ಔಷಧಿ ತರಲು ಸುಮಾರು 280 ಕಿಲೋಮೀಟರ್ ವರೆಗೆ ಅಪ್ಪ ಸೈಕಲ್ ತುಳಿದಿದ್ದಾರೆ. ಈ ಮನ ಕಲಕುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಗಾರೆ ಕೆಲಸ ಮಾಡುತ್ತಿರುವ ಜಿಲ್ಲೆಯ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ನಿವಾಸಿ ಆನಂದ್ ಎಂಬುವವರು ತನ್ನ ಮಗನಿಗೆ ಔಷಧಿ ತರಲು ಸೈಕಲ್​ನಲ್ಲಿ ಸುಮಾರು 280 ಕಿಲೋಮೀಟರ್ ಹೋಗಿದ್ದಾರೆ. ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ. ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಮ್ಮೆ ಮಾತ್ರೆ ತಪ್ಪಿದರೆ 18 ವರ್ಷ ಮತ್ತೆ ಮಾತ್ರೆ ನೀಡಬೇಕಾಗುತ್ತದೆ ಎಂಬ ಆತಂಕದಲ್ಲಿ ಸೈಕಲ್​ನಲ್ಲಿ ನೂರಾರು ಕಿಲೋಮೀಟರ್ ಹೋಗಿ ಔಷಧಿ ತಂದಿದ್ದಾರೆ.

ಬೈಕ್, ಆಟೋ ಹಾಗೂ ವಾಹನ ಸೌಲಭ್ಯ ಸಿಗದ ಹಿನ್ನೆಲೆ ತಂದೆ ತನ್ನ ಸೈಕಲ್ ತುಳಿದು ಮಗನಿಗೆ ಮಾತ್ರೆ ತಂದುಕೊಟ್ಟಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ತಂದಿದ್ದಾರೆ. ಯಾರೂ ಬೈಕ್ ಕೊಡಲಿಲ್ಲ. ಒಂದು ದಿನ ಮಗನಿಗೆ ಮಾತ್ರೆ ತಪ್ಪಿಸಿದರೆ ತೊಂದರೆ ಆಗುತ್ತಿತ್ತು. ಮಗನಿಗೆ ಬೇಕಾದ ಮಾತ್ರೆ ಬೇರೆಲ್ಲೂ ಸಿಗುತ್ತಿರಲಿಲ್ಲ. ಹೀಗಾಗಿ ಸೈಕಲ್​ನಲ್ಲಿಯೇ ಹೋಗಿ ಬಂದೆ ಎಂದು ಆನಂದ್ ಹೇಳಿದರು.

ಇದನ್ನೂ ಓದಿ:

ಲಾಕ್​ಡೌನ್​ ಕಾರಣ ಸೈಕಲ್​ ಏರಿ ಮಗಳೊಂದಿಗೆ 1,200 ಕಿ.ಮೀ ಪ್ರಯಾಣಿಸಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

ಮೈಸೂರು: ಮಗನ ಔಷಧಿಗೆ 280 ಕಿಲೋಮೀಟರ್ ಸೈಕಲ್ ತುಳಿದ ಅಪ್ಪ