ಕಾರು ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು; ಕಾರು ಬಿಟ್ಟು ಚಾಲಕ ಪರಾರಿ

ಕಾರು ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಂ. 4ರಲ್ಲಿ ನಡೆದಿದೆ.

ಕಾರು ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು; ಕಾರು ಬಿಟ್ಟು ಚಾಲಕ ಪರಾರಿ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Vivek Biradar

Jun 26, 2022 | 11:30 PM

ಧಾರವಾಡ: ಕಾರು ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಂ. 4ರಲ್ಲಿ ನಡೆದಿದೆ. ಭೋಗೂರ ಗ್ರಾಮದ ಸುಶೀಲವ್ವ ಹರಿಜನ(40), ಕಲ್ಲವ್ವ(42) ತಿಗಡೊಳ್ಳಿ ಗ್ರಾಮದ ನಿವಾಸಿ ರಾಜು(36) ಮೃತ ದುರ್ದೈವಿಗಳು. ಮೂವರು ಧಾರವಾಡಕ್ಕೆ ನೇರಳೆ ಹಣ್ಣು ಮಾರಲು ಬಂದಿದ್ದ‌ರು. ಅಪಘಾತದ ಬಳಿಕ ಸ್ಥಳದಲ್ಲೇ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಗರಗ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ಯಾಂಟರ್ ಲಾರಿ ಹಾಗೂ ಒಮ್ನಿ ಕಾರ್ ನಡುವೆ ಮುಖಾಮುಖಿ ಡಿಕ್ಕಿ

ಬೆಂಗಳೂರು: ಕ್ಯಾಂಟರ್ ಲಾರಿ ಹಾಗೂ ಒಮ್ನಿ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಕ್ರಾಸ್ ಬಳಿಯ ಗೋಪಾಲಪುರದಲ್ಲಿ ಮಧ್ಯಾಹ್ನ 3:50ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೂದಿಗೆರೆ ಕ್ರಾಸ್ ಕಡೆಯಿಂದ ಬರುತ್ತಿದ್ದ ಒಮ್ನಿ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿದ್ದು ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಓಮ್ನಿ ಕಾರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ದೇವನಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ: ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ: ರಾಜ್ಯದ ವಿವಿಧೆಡೆ ಪೊಲೀಸರಿಂದ ಗಾಂಜಾ ನಾಶ

ಮನೆಯಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ: ಜಿಲ್ಲೆಯ ದಾಂಡೇಲಿ ತಾಲೂಕಿನ ಟೌನ್​ಶಿಪ್​​ ವಸತಿ ಪ್ರದೇಶದಲ್ಲಿ ಶ್ರೀನಾಥ ಬಾಬು ಎಂಬುವರ ಮನೆಯಲ್ಲಿದ್ದ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಮನೆಯಲ್ಲಿದ್ದ ರೆಫ್ರಿಜರೇಟರ್, ಸೋಫಾ ಸೆಟ್​ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಖಾಲಿಯಾದ ಸಿಲೆಂಡರ್ ಬದಲಾಯಿಸಿ ಹೊಸ ಸಿಲೆಂಡರ ಜೋಡಿಸುವಾಗ ಸಿಲೆಂಡರ್ ಸೋರಿದೆ. ಸ್ವಲ್ಪ ಸಮಯದಲ್ಲಿ ಹೊತ್ತಿಕೊಂಡ ಬೆಂಕಿ ಪೂರ್ತಿ ಹೊತ್ತಿಕೊಂಡಿದೆ. ನೋಡು ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಮನೆಯೊಳಗಡೆಯಿದ್ದ ಪ್ರಿಜ್, ಸೋಪಾ ಸೆಟ್ ಸೇರಿದಂತೆ ಹಲವು ಸಾಮಗ್ರಿ ಭಸ್ಮವಾಗಿವೆ. ದಾಂಡೇಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ: ಶಿವಮೊಗ್ಗ ಬಳಿ ಕಾರು ಡಿಕ್ಕಿಯಾಗಿ ಓಮ್ನಿ ವ್ಯಾನ್ನಲ್ಲಿದ್ದ 8 ತಿಂಗಳ ಗರ್ಭಿಣಿ ಮತ್ತು ಆಕೆಯ ಪತಿ ಸಾವು

ತೋಟನಹಳ್ಳಿ ಬಳಿ ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಸಾವು

ರಾಮನಗರ:  ಜಿಲ್ಲೆಯ ಮಾಗಡಿ ತಾಲೂಕಿನ ತೋಟನಹಳ್ಳಿ ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಿನ HSR ಲೇಔಟ್ ನಿವಾಸಿ ಸುಶೀಕುಮಾ ರ್‌(30) ಬೆಂಗಳೂರಿನ ರಾಘವೇಂದ್ರ ನಗರ ನಿವಾಸಿ ಹರೀಶ್‌(20) ಮೃತ ದುರ್ದೈವಿಗಳು. ಬೆಂಗಳೂರಿನಿಂದ ಸುಶೀಕುಮಾರ್ ಅಜ್ಜಿ ಮನೆಗೆ ಹೋಗಿದ್ದನು. ಈ ವೇಳೆ  ಐವರು ಸ್ನೇಹಿತರು ತೋಟನಹಳ್ಳಿ ಬಳಿಯ ಹೊಂಡಕ್ಕೆ ಈಜಲು ಹೋಗಿದ್ದರು. ಕೃಷಿ ಹೊಂಡದಲ್ಲಿ ಮೊದಲು  ಸುಶೀಕುಮಾರ್ ಮುಳುಗುತ್ತಿದ್ದನು. ಸುಶೀಕುಮಾರ್ ರಕ್ಷಣೆಗೆ ಹೋದ ಹರೀಶ್ ಸಹ ನೀರುಪಾಲಾಗಿದ್ದಾನೆ. ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada