AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ: ಒಂದೇ ವಾರದಲ್ಲಿ ಬಯಲಾಯ್ತು ಅಸಲಿ ಗುಣಮಟ್ಟ!

ಧಾರವಾಡದ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿತರಿಸಲಾದ ಉಚಿತ ಶೂಗಳು ಒಂದೇ ವಾರದಲ್ಲಿ ಹರಿದು ಹೋಗಿದ್ದು, ಕಳಪೆ ಗುಣಮಟ್ಟದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದ ಶೂಗಳನ್ನು ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರು ಸ್ಥಳೀಯಮಟ್ಟದ ವ್ಯಾಪಾರಿಗಳಿಂದ ಖರೀದಿಸುತ್ತಿದ್ದರು. ಆದರೆ ಈ ಬಾರಿ ಸರ್ಕಾರವೇ ರಾಜ್ಯಮಟ್ಟದಲ್ಲಿ ಗುತ್ತಿಗೆ ನೀಡಿತ್ತು ಎನ್ನಲಾಗಿದೆ.

ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ: ಒಂದೇ ವಾರದಲ್ಲಿ ಬಯಲಾಯ್ತು ಅಸಲಿ ಗುಣಮಟ್ಟ!
ಕಿತ್ತು ಹೋದ ಶೂImage Credit source: Tv9 Kannada
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:Sep 06, 2026 | 12:56 PM

Share

ಧಾರವಾಡ, ಸೆಪ್ಟೆಂಬರ್​​ 06: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್​​ ವಿತರಣೆಗಾಗಿ ಸರ್ಕಾರ ಪ್ರತಿವರ್ಷ್ ಕೋಟ್ಯಾಂತರ ರೂಪಾಯಿ ಹಣ ವ್ಯಯಮಾಡುತ್ತೆ. ಹೀಗಿದ್ದರೂ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವ ಶೂಗಳು ಕೇವಲ ವಾರ ಕಳೆಯುವುದರ ಒಳಗಾಗಿಯೇ ಕಿತ್ತು ಹೋಗಿರುವ ಘಟನೆಗಳು ಧಾರವಾಡದಲ್ಲಿ ವರದಿಯಾಗಿವೆ. ಶಾಲಾರಂಭವಾಗಿ ಬರೋಬ್ಬರಿ 3 ತಿಂಗಳ ಬಳಿಕ ಮಕ್ಕಳಿಗೆ ಶೂ ಮತ್ತು ಸಾಕ್ಸ್​​ ನೀಡಲಾಗಿತ್ತಾದರೂ ಅವುಗಳ ಗುಣಮಟ್ಟದ ಬಗ್ಗೆಯೇ ಈಗ ಪ್ರಶ್ನೆಗಳು ಹುಟ್ಟಿಕೊಂಡಿವೆ. ಹೀಗಾಗಿ ದುರ್ದೈವ ಎಂಬಂತೆ ಹರಿದ ಶೂಗಳನ್ನೇ ಧರಿಸಿ ಮಕ್ಕಳು ಶಾಲೆಗೆಳಿಗೆ ಬರಬೇಕಾದ ಸ್ಥಿತಿ ಉದ್ಭವಿಸಿದೆ.

ಈ ಬಾರಿ ಶೂ ವಿತರಣೆ ವ್ಯವಸ್ಥೆಯನ್ನೇ ಬದಲಿಸಿದ್ದ ಸರ್ಕಾರ

ಕೆಲ ವರ್ಷಗಳ ಹಿಂದೆ ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ಉಚಿತವಾಗಿ ವಿತರಿಸೋ ಯೋಜನೆಯನ್ನು ಆರಂಭಿಸಿತ್ತು. ಕಳೆದ ವರ್ಷದವರೆಗೆ ಇವುಗಳನ್ನು ವಿತರಿಸುವ ಜವಾಬ್ದಾರಿಯನ್ನು ಆಯಾ ಶಾಲಾ ಸುಧಾರಣಾ ಸಮಿತಿ ಹಾಗೂ ಮುಖ್ಯೋಪಾಧ್ಯಾಯರಿಗೆ ನೀಡಲಾಗಿತ್ತು. ಆಯಾ ಶಾಲೆಗಳ ಮಕ್ಕಳ ಲೆಕ್ಕದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವ್ಯವಸ್ಥೆಯನ್ನೇ ಬದಲಿಸಿದ್ದ ಸರ್ಕಾರ, ರಾಜ್ಯಮಟ್ಟದಲ್ಲಿಯೇ ಗುತ್ತಿಗೆಗೆ ಆಹ್ವಾನಿಸಿ ಶೂ ವಿತರಣೆಯ ಜವಾಬ್ದಾರಿ ವಹಿಸಿತ್ತು. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಇಂತಹ ಹರಿದ ಶೂ ಧರಿಸಬೇಕಾದ ಸನ್ನಿವೇಶ ಎದುರಾಗಿದೆ ಎಂಬುದು ಪೋಷಕರ ಆರೋಪವಾಗಿದೆ.

ಇದನ್ನೂ ಓದಿ: ಮೊಬೈಲ್​​ ಟಾರ್ಚ್​​ ಬೆಳಕಲ್ಲಿ ಬಸ್​​ ಚಾಲನೆ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಅಶೋಕ್​​ ವಾಗ್ದಾಳಿ

ಕಳೆದ ವರ್ಷದವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದ ಶೂಗಳನ್ನು ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರು ಸ್ಥಳೀಯಮಟ್ಟದ ವ್ಯಾಪಾರಿಗಳಿಂದ ಖರೀದಿಸುತ್ತಿದ್ದರು. ಜೊತೆಗೆ ವ್ಯಾಪಾರಿಗಳಿಗೆ ವೃತ್ತಿಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು ಮತ್ತು ಜಿಎಸ್​ಟಿ ಇರಲೇಬೇಕು ಅನ್ನೋ ನಿಯಮವಿತ್ತು. ಅದರೊಂದಿಗೆ ಸ್ಥಳೀಯಮಟ್ಟದಲ್ಲಿಯೇ ವ್ಯಕ್ತಿ ನಿತ್ಯವೂ ಕಣ್ಣೆದುರಿಗೆ ಕಾಣುವ ಕಾರಣ ಅವರು ಉತ್ತಮ ಗುಣಮಟ್ಟದ ಶೂಗಳನ್ನು ನೀಡಬೇಕಿತ್ತು. ಆದರೆ ಈ ಬಾರಿ ರಾಜ್ಯಮಟ್ಟದಲ್ಲಿಯೇ ಇವುಗಳ ಖರೀದಿಯಾಗಿದ್ದರಿಂದ ದೂರದ ಹಳ್ಳಿಗಳ ಶಾಲೆಗೆ ಬರೋ ಶೂ ಹಾಗೂ ಸಾಕ್ಸ್ ಗಳ ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದಾದರೂ ಎಂಬ ಪ್ರಶ್ನೆ ಉದ್ಭವಿಸಿದೆ. ಇನ್ನು ಈ ಬಗ್ಗೆ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಕೇಳಿದರೆ, ಕೆಲವು ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಅಂತವರ ಶೂಗಳನ್ನು ಬದಲಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:55 pm, Sun, 6 September 26

Follow Us