AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ – ಐದು ತಿಂಗಳ ಹಿಂದೆ ಕೆರೆ ನೀರನ್ನ ಖಾಲಿ ಮಾಡಿಸಿ ಯಡವಟ್ಟು ಮಾಡಿಕೊಂಡ ಉಮಚಗಿ ಗ್ರಾಮಸ್ಥರು ಈಗ ವ್ಯಥೆ ಪಡುವಂತಾಗಿದೆ, ಏನಾಯಿತು?

ಉಮಚಗಿ ಗ್ರಾಮಸ್ಥರು ಕೆರೆ ನೀರು ಖಾಲಿ ಮಾಡಿಸಿ ಪಶ್ಚಾತ್ತಾಪ ಪಡುವಂತಾಗಿದೆ. ನೀರು ಕಲುಷಿತಗೊಂಡಿಲ್ಲ ಅಂತ ಲ್ಯಾಬ್ ರಿಪೋರ್ಟ್ ಬಂದ್ರೂ ಗ್ರಾಮಸ್ಥರು ಪಟ್ಟು ಬಿಟ್ಟಿರಲಿಲ್ಲ. ಇದೀಗ ಇದ್ದ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಗ್ರಾಮಸ್ಥರು ಬೇಕೆಂದು ಗೋಗರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿ - ಐದು ತಿಂಗಳ ಹಿಂದೆ ಕೆರೆ ನೀರನ್ನ ಖಾಲಿ ಮಾಡಿಸಿ ಯಡವಟ್ಟು ಮಾಡಿಕೊಂಡ ಉಮಚಗಿ ಗ್ರಾಮಸ್ಥರು ಈಗ ವ್ಯಥೆ ಪಡುವಂತಾಗಿದೆ, ಏನಾಯಿತು?
ಕೆರೆ ನೀರನ್ನ ಖಾಲಿ ಮಾಡಿಸಿ ಯಡವಟ್ಟು ಮಾಡಿಕೊಂಡ ಉಮಚಗಿ ಗ್ರಾಮಸ್ಥರು
ಶಿವಕುಮಾರ್ ಪತ್ತಾರ್
| Edited By: |

Updated on:Dec 16, 2023 | 4:43 PM

Share

ಅದು ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ಪುಟ್ಟ ಗ್ರಾಮ. ಆ ಗ್ರಾಮದಲ್ಲಿ ಬೇಡ ಬೇಡವೆಂದ್ರೂ ಗ್ರಾಮಸ್ಥರು ಕೆರೆಯೊಂದನ್ನು ( lake) ಖಾಲಿ ಮಾಡಿಸಿದ್ದರು. ನೀರು ಕಲ್ಮಷವಾಗಿದೆ ಅನ್ನೋ ಕಾರಣಕ್ಕೆ ಕಳೆದ ಐದು ತಿಂಗಳ ಹಿಂದೆ ಗ್ರಾಮಸ್ಥರೇ ( villagers) ನೀರು ಖಾಲಿ ಮಾಡಿಸಿದ್ರು. ಆ ಕೆರೆಯಲ್ಲಿ ಓರ್ವ ಸಾವನ್ನಪ್ಪಿದ ಕಾರಣಕ್ಕೆ ಇಡೀ ಗ್ರಾಮದ ಜನ ಕೆರೆಯ ನೀರನ್ನ ಖಾಲಿ ಮಾಡಿಸಿದ್ರು. ಆದ್ರೆ ಇದೀಗ ಆ ಗ್ರಾಮದಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಗಂಟು ಬಿದ್ದಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ? ಹುಬ್ಬಳ್ಳಿ (Hubballi) ತಾಲೂಕಿನ ಉಮಚಗಿ (Umachagi) ಗ್ರಾಮಸ್ಥರ ವ್ಯಥೆ ಹೇಳ ತೀರದಾಗಿದೆ. ಐದು ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಕೆರೆ ಖಾಲಿ ಮಾಡಿಸಿದ್ದ ಅಧಿಕಾರಿಗಳು, ಈಗ ಲಕ್ಷಾಂತರ ರೂಪಾಯಿ ವ್ಯಯಿಸಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಅನಿವಾರ್ಯತೆ ಎದುರಾಗಿದೆ. ಹೌದು, ಗ್ರಾಮದ ಕೆಲವರು ಮಾಡಿದ ಚಿಕ್ಕ ತಪ್ಪಿನಿಂದಾಗಿ ಇಡೀ ಗ್ರಾಮ ಕಂಗಾಲಾಗಿದೆ.

ಕೆರೆ ನೀರು ಖಾಲಿ ಮಾಡಿಸಿ ಪಶ್ಚಾತ್ತಾಪ ಪಡುವಂತಾಗಿದೆ. ಗ್ರಾಮದ ಕೆರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಹೀಗಾಗಿ ಕೆರೆ ನೀರು ಖಾಲಿ ಮಾಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ನೀರು ಕಲುಷಿತಗೊಂಡಿಲ್ಲ ಅಂತ ಲ್ಯಾಬ್ ರಿಪೋರ್ಟ್ ಬಂದ್ರೂ ಗ್ರಾಮಸ್ಥರು ಪಟ್ಟು ಬಿಟ್ಟಿರಲಿಲ್ಲ. ಈ ನಿಟ್ಟಿನಲ್ಲಿ ಕೆರೆಯನ್ನು ಖಾಲಿ ಮಾಡಿಸಲಾಗಿತ್ತು. ಇದೀಗ ಇದ್ದ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಮತ್ತೊಂದು ಕೆರೆಯಲ್ಲಿದ್ದ ನೀರು ತಳ ಮುಟ್ಟಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡೋ ಸ್ಥಿತಿ ಎದುರಾಗಿದೆ. ಐದಾರು ದಿನಗಳ ಕಾಲ ಕೆರೆಗೆ ಮೋಟಾರ್ ಹಚ್ಚಿ ಕೆರೆಯ ನೀರನ್ನ ಖಾಲಿ ಮಾಡಿಸಿದ್ರು. ಇದೀಗ ಕೆರೆ ಬರಿದಾಗಿದ್ದು ಕೆರೆಯಲ್ಲಿ ನೀರಿಲ್ಲ.ಇದರಿಂದ ಗ್ರಾಮಸ್ಥರು ನೀರು ಬೇಕೆಂದು ಗೋಗರೆದರೂ ನೀರು ಸಿಗದ ಪರಸ್ಥಿತಿ ನಿರ್ಮಾಣವಾಗಿದೆ.

ಅದೇ ಗ್ರಾಮದ ಸಂಕಪ್ಪ ಹುರುಳಿ ಅನ್ನೋರು ಕರೆಯಲ್ಲಿ ಬಿದ್ದು ಸಾವನ್ನಪ್ಪಿದ್ರು. ಮೂರು ದಿನಗಳ ಬಳಿಕ ಕೆರೆಯಲ್ಲಿ ಶವ ಪತ್ತೆಯಾಗಿತ್ತು. ಕೆರೆಯ ನೀರು ವಾಸನೆಯಾಗಿದೆ ಅನ್ನೋ ಕಾರಣಕ್ಕೆ ಗ್ರಾಮದವರು ಕೆರೆ ನೀರನ್ನ ಖಾಲಿ ಮಾಡಿಸಿದ್ರು. ಇದೀಗ ಯಾಕಾದ್ರೂ ಕೆರೆ ಖಾಲಿ ಮಾಡಿಸಿದೆವೋ ಅಂತ ಪರಿತಪ್ಪಿಸುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರಿಂದ ಒತ್ತಡ ಹೆಚ್ಚಾಗಿದೆ. ಎರಡು ಬೋರ್ ವೆಲ್ ಕೊರೆದಿದ್ದರೂ ಪ್ರಯೋಜನವಾಗಿಲ್ಲ. ಉಪ್ಪು ನೀರು ಬಿದ್ದಿರೋದ್ರಿಂದ ಬಳಸೋಕೂ ಬರಲ್ಲ ಅಂತ ವರದಿ ಬಂದಿದೆ. ಇದರಿಂದಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಏನಾದ್ರೂ ಮಾಡಿ ನಮಗೆ ನೀರು ಪೂರೈಕೆ ಮಾಡಿ ಅಂತಿದಾರೆ ಜನತೆ.

Also Read: ರಾತ್ರೋರಾತ್ರಿ ವಿಶಾಲ ಕೆರೆಯಲ್ಲಿ ನೂರಾರು ಮರಗಳ ಮಾರಣಹೋಮ.. ಕಣ್ಮುಚ್ಚಿ ಕುಳಿತ ಅಧಿಕಾರಿಗಳ ಧೋರಣೆ ಏನು?

ಒಟ್ಟಿನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸರ್ಕಾರ ತೀರ್ಮಾನ ಮಾಡಿದೆ. ನಿತ್ಯ ಮೂರು ಟ್ಯಾಂಕರ್ ಮೂಲಕ ನೀರು ಪೂರೈಲು ತೀರ್ಮಾನಕ್ಕೆ ಮುಂದಾಗಿದ್ದು, ಇಷ್ಟಾದ್ರೂ ಗ್ರಾಮದ ಜನರ ದಾಹ ತೀರೋದು ಡೌಟ್ ಎನ್ನುವಂತಾಗಿದೆ. ತಾವೇ ಮಾಡಿದ ಎಡವಟ್ಟಿಗೆ ತಾವೇ ಶಿಕ್ಷೆ ಅನುಭವಿಸ್ತಿದಾರೆ ಉಮಚಗಿ ಜನತೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Sat, 16 December 23