AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ವಂಚಕರಿಗೆ ಹುಬ್ಬಳ್ಳಿಯೇ ಅಡ್ಡಾ? 5 ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಹಣ ಡ್ರಾ!

ದೇಶದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಜನರು ಕೋಟಿಗಟ್ಟಲೆ ಹಣ ಕಳೆದುಕೊಳ್ಳುತ್ತಿದ್ದಾರೆ. ವಂಚಕರು ಹುಬ್ಬಳ್ಳಿಯ ಬ್ಯಾಂಕ್‌ಗಳನ್ನು ಹಣ ಡ್ರಾ ಮಾಡಲು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಇದು ವಾಣಿಜ್ಯ ನಗರಿ ಹುಬ್ಬಳ್ಳಿ ಸೈಬರ್ ವಂಚಕರ ನೆಲೆಯಾಗುತ್ತಿದೆಯೇ ಎಂಬ ಆತಂಕ ಮೂಡಿಸಿದೆ. ಬೆಂಗಳೂರು ಪೊಲೀಸರ ಮಾಹಿತಿ ಮೇರೆಗೆ ಹುಬ್ಬಳ್ಳಿ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೈಬರ್ ವಂಚಕರಿಗೆ ಹುಬ್ಬಳ್ಳಿಯೇ ಅಡ್ಡಾ? 5 ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಹಣ ಡ್ರಾ!
ಸೈಬರ್ ವಂಚಕರು
ಸಂಜಯ್ಯಾ ಚಿಕ್ಕಮಠ
| Edited By: |

Updated on: Nov 06, 2026 | 4:56 PM

Share

ಮುಖ್ಯಾಂಶಗಳು

  • ಸೈಬರ್ ವಂಚನೆಯಿಂದ ಕೋಟ್ಯಂತರ ರೂ ಹಣ ಕಳೆದುಕೊಳ್ಳುತ್ತಿರುವ ಜನ
  • ಹುಬ್ಬಳ್ಳಿಯ ಐದು ಬ್ಯಾಂಕ್​​ಗಳಿಂದ ಕೋಟಿ ಕೋಟಿ ಹಣ ಡ್ರಾ 
  • ಬೆಂಗಳೂರು ಸೈಬರ್ ಅಪರಾಧಗಳ ಪತ್ತೆ ಘಟಕದಿಂದ ಮಾಹಿತಿ

ಹುಬ್ಬಳ್ಳಿ, ನವೆಂಬರ್​​ 06: ದೇಶದಲ್ಲಿ ಸೈಬರ್ ಅಪರಾಧಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಕೂಡ ವಂಚಕರು ಹತ್ತಾರು ರೀತಿಯಲ್ಲಿ ಜನರಿಗೆ ವಂಚನೆ ಮಾಡುತ್ತಲೇ ಇದ್ದಾರೆ. ಪ್ರತಿನಿತ್ಯ ದೇಶದಲ್ಲಿ ಜನರು ಕೋಟ್ಯಂತರ ರೂ ಹಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಸೈಬರ್ ವಂಚಕರು ಜನರಿಗೆ ವಂಚಿಸಿ ಪಡೆದಿರುವ ಹಣವನ್ನು ಹುಬ್ಬಳ್ಳಿಯ ವಿವಿಧ ಬ್ಯಾಂಕ್​ಗಳಲ್ಲಿ ಡ್ರಾ ಮಾಡಿಕೊಂಡಿರುವುದು ಇದೀಗ ಪತ್ತೆಯಾಗಿದೆ. ಹೀಗಾಗಿ ಸೈಬರ್ ಅಪರಾಧಗಳಿಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ ನಂಟು ಹೆಚ್ಚಾಗುತ್ತಿರವುದು ಜನರ ಆತಂಕಕ್ಕೆ ಕಾರಣವಾಗಿದೆ.

ಸೈಬರ್ ವಂಚನೆಯಿಂದ ಕೋಟ್ಯಂತರ ರೂ ಕಳೆದುಕೊಳ್ಳುತ್ತಿರುವ ಜನ

ಪೊಲೀಸರು ಪ್ರತಿನಿತ್ಯ ಸೈಬರ್ ವಂಚನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಹೇಗೆಲ್ಲಾ ವಂಚನೆ ಮಾಡುತ್ತಾರೆ, ಜನರು ಹೇಗೆ ಜಾಗೃತಿ ವಹಿಸಬೇಕು ಅನ್ನೋದರ ಬಗ್ಗೆ ಸರ್ಕಾರ ಕೂಡ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಆದರೂ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿಂತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲಿದ್ದು, ದೇಶದಲ್ಲಿ ಪ್ರತಿನಿತ್ಯ ಜನರು ಕೋಟಿ ಕೋಟಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಹುಬ್ಬಳ್ಳಿಯ ಐದು ಬ್ಯಾಂಕ್​​ಗಳಿಂದ ಕೋಟಿ ಕೋಟಿ ಹಣ ಡ್ರಾ 

ಇನ್ನು ಸೈಬರ್ ವಂಚಕರು ಜನರಿಗೆ ವಂಚನೆ ಮಾಡಿ ಪಡೆದ ಹಣವನ್ನು ಡ್ರಾ ಮಾಡಿಕೊಳ್ಳಲು ಹುಬ್ಬಳ್ಳಿಯನ್ನು ಬಳಸಿಕೊಂಡಿದ್ದಾರೆ. ಬೆಂಗಳೂರು ಸೈಬರ್ ಅಪರಾಧಗಳ ಪತ್ತೆ ಘಟಕ, ಇಂತಹದೊಂದು ಮಾಹಿತಿಯನ್ನು ಸಂಗ್ರಹಿಸಿ, ಹುಬ್ಬಳ್ಳಿ ಸಿಇಎನ್​ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಹುಬ್ಬಳ್ಳಿ ಸಿಇಎನ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಹುಬ್ಬಳ್ಳಿಯ ಐದು ಬ್ಯಾಂಕ್​​ಗಳಲ್ಲಿ ಚೆಕ್ ನೀಡಿ ವಂಚಕರು ಕೋಟಿ ಕೋಟಿ ಹಣ ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿದೆ. ಕಳೆದ ಕೆಲ ತಿಂಗಳಿಂದ ಸೈಬರ್ ವಂಚಕರು ಹಣ ಡ್ರಾ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಬೆಂಗಳೂರು ಸೈಬರ್ ಘಟಕದ ಪೊಲೀಸರು, ಈ ಬಗ್ಗೆ ಕೂಲಂಕುಷ ಪರಿಶೀಲನೆಗೆ ಹುಬ್ಬಳ್ಳಿ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೇಶದ 270 ವಿವಿಧ ಬ್ಯಾಂಕ್​ಗಳಲ್ಲಿ ನಕಲಿ‌ ಖಾತೆ ಸೃಷ್ಟಿಸಿ ಅವ್ಯವಹಾರ; ಮೂವರ ಬಂಧನ

ಕಳೆದ ಕೆಲ ತಿಂಗಳ ಹಿಂದಷ್ಟೇ ಸೈಬರ್ ವಂಚಕರು, ತಮ್ಮ ವಂಚನೆಗೆ ಹುಬ್ಬಳ್ಳಿಯ ಕೆಲವರನ್ನು ಬಳಸಿಕೊಂಡು ಅಕೌಂಟ್ ಓಪನ್ ಮಾಡಿಸಿ, ನಂತರ ಹಣ ಕೊಟ್ಟು ಅಕೌಂಟ್​ಗಳನ್ನು ಖರೀದಿ ಮಾಡಿದ್ದು, ಪತ್ತೆಯಾಗಿತ್ತು. ವಂಚಕರ ಮಾತು ಕೇಳಿ ಕೆಲವರು ಹುಬ್ಬಳ್ಳಿಯ ಬ್ಯಾಂಕ್ ಆಫ್ ಬರೋಡಾದಲ್ಲಿ ಅಕೌಂಟ್ ಓಪನ್ ಮಾಡಿ, ನಂತರ ಸಿಮ್ ಕಾರ್ಡ್, ಎಟಿಎಂ ಕಾರ್ಡ್, ಪಾಸ್ ಬುಕ್​ಗಳನ್ನು ವಂಚಕರಿಗೆ ನೀಡಿದ್ದರು. ಈ ಪ್ರಕರಣದಲ್ಲಿ ಹುಬ್ಬಳ್ಳಿ ಸಿಇಎನ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಆದರೆ ಇದೀಗ ವಂಚನೆಯ ಹಣವನ್ನು ಬ್ಯಾಂಕ್​ಗಳಿಗೆ ಚೆಕ್​ ನೀಡಿ ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿದೆ.

LIVE TV

ಪೊಲೀಸರಿಂದ ಶೋಧ

ಇಲ್ಲಿ ಕೂಡ ವಂಚಕರು ಯಾರನ್ನಾದರೂ ಸ್ಪೈ ಗಳನ್ನಾಗಿ ಬಳಿಸಿಕೊಂಡಿದ್ದಾರಾ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಿಜವಾಗಿಯೂ ವಂಚಕರೇ ಖಾತೆಯನ್ನು ಹೊಂದಿದ್ದು, ಚೆಕ್ ನೀಡಿ ಹಣ ಡ್ರಾ ಮಾಡಿಸಿದರಾ ಅಥವಾ ಯಾರಿಗಾದರೂ ಒಂದಿಷ್ಟು ಹಣವನ್ನು ನೀಡಿ, ಅವರ ಖಾತೆಗೆ ಹಣ ಹಾಕಿಸಿ, ಅದನ್ನು ತಾವು ಡ್ರಾ ಮಾಡಿಸಿಕೊಂಡಿದ್ದಾರಾ ಎಂಬ ಬಗ್ಗೆ ಕಳೆದ ಕೆಲ ದಿನಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು

ಸೈಬರ್ ಅಪರಾಧಗಳ ಹಣ ಹುಬ್ಬಳ್ಳಿಯಲ್ಲಿ ಡ್ರಾ ಮಾಡಿಕೊಳ್ಳುತ್ತಿರುವುದು, ಹುಬ್ಬಳ್ಳಿಯ ಕೆಲವರು ಅಕೌಂಟ್ ಓಪನ್ ಮಾಡಿ ಸೈಬರ್ ವಂಚಕರಿಗೆ ಮಾರಾಟ ಮಾಡಿರುವ ಅನೇಕ ಪ್ರಕಣಗಳು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿರುವುದು ಆತಂಕ ಮೂಡಿಸುತ್ತಿದೆ. ಸೈಬರ್ ವಂಚಕರು ಹುಬ್ಬಳ್ಳಿಯಲ್ಲಿ ನೆಲೆಕಂಡುಕೊಂಡಿದ್ದಾರಾ ಎನ್ನುವ ಪ್ರಶ್ನೆಯೂ ಹುಟ್ಟುಹಾಕಿದೆ. ಈ ಬಗ್ಗೆ ಪೊಲೀಸರು ವಂಚಕರ ಮೂಲವನ್ನು ಪತ್ತೆ ಮಾಡಿ, ಅವರನ್ನು ಕಂಬಿ ಹಿಂದೆ ಕಳುಹಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಸಂಜಯ್ಯಾ ಚಿಕ್ಕಮಠ
ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More