AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನಭಾಗ್ಯ ಗ್ಯಾರಂಟಿಗೂ ಸರ್ವರ್ ಕಾಟ: ಪಡಿತರ ಪಡೆಯಲು ದಿನವಿಡೀ ಕಾದು ನಿಲ್ಲುವ ಸ್ಥಿತಿ

ಅನ್ನಭಾಗ್ಯ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಕಾಟ ನೀಡುತ್ತಿದ್ದು, ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ಫಲಾನುಭವಿಗಳು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ಕಾಯುವಂತಾಗಿದೆ. ಹೆಬ್ಬೆರಳಿನ ದೃಢೀಕರಣ ವಿಳಂಬದಿಂದ ಕೂಲಿ ಕೆಲಸ ಬಿಟ್ಟು ಪಡಿತರ ಪಡೆಯಲು ಜನರು ಪರದಾಡುತ್ತಿದ್ದಾರೆ. ಒಬ್ಬೊಬ್ಬ ಫಲಾನುಭವಿಯ ದೃಢೀಕರಣಕ್ಕೂ 20 ನಿಮಿಷಕ್ಕೂ ಅಧಿಕ ಸಮಯ ಬೇಕಾಗುತ್ತಿದೆ.

ಅನ್ನಭಾಗ್ಯ ಗ್ಯಾರಂಟಿಗೂ ಸರ್ವರ್ ಕಾಟ: ಪಡಿತರ ಪಡೆಯಲು ದಿನವಿಡೀ ಕಾದು ನಿಲ್ಲುವ ಸ್ಥಿತಿ
ಪಡಿತರ ಅಂಗಡಿ ಮುಂದೆ ಜನರ ಸಾಲುImage Credit source: tv9
ಸಂಜಯ್ಯಾ ಚಿಕ್ಕಮಠ
| Edited By: |

Updated on: Sep 18, 2026 | 11:23 AM

Share

ಮುಖ್ಯಾಂಶಗಳು

  • ಅನ್ನಭಾಗ್ಯ ಪಡಿತರಕ್ಕೂ ಸರ್ವರ್ ಸಮಸ್ಯೆ
  • ಪಡಿತರ ಪಡೆಯಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ
  • ನಾಲ್ಕೈದು ತಿಂಗಳಿಂದ ಸಮಸ್ಯೆ ಮುಂದುವರಿಕೆ

ಧಾರವಾಡ, ಸೆಪ್ಟೆಂಬರ್ 18: ಆಹಾರ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ರಾಜ್ಯದ ಪಡಿತರದಾರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇ-ಕೆವೈಸಿ ಮಾಡಿಸಲು ಪರದಾಡಿದ್ದ ಜನರು, ಇದೀಗ ಅನ್ನಭಾಗ್ಯ ಯೋಜನೆಯಡಿ ಪಡಿತರ ಧಾನ್ಯ ಪಡೆಯಲು ಕೂಡ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯವೂ ಒಂದಾಗಿದ್ದು, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಮಾಸಿಕ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಪಡಿತರ ಪಡೆಯಲು ಜನರು ತಮ್ಮ ದೈನಂದಿನ ಕೂಲಿ ಕೆಲಸವನ್ನೂ ಬಿಟ್ಟು ರೇಷನ್ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವಂತಾಗಿದೆ.

ಹುಬ್ಬಳ್ಳಿ ನಗರದ ಮಂಜುನಾಥನಗರದಲ್ಲಿರುವ ಪಡಿತರ ಅಂಗಡಿ ಮುಂದೆ ಬೆಳಗ್ಗೆ 6 ಗಂಟೆಯಿಂದಲೇ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ಕೆಲವರಿಗೆ ಒಂದು ಗಂಟೆಯೊಳಗೆ ಪಡಿತರ ಸಿಕ್ಕರೆ, ಇನ್ನು ಕೆಲವರು ಎರಡು-ಮೂರು ಗಂಟೆ ಕಾಯಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವುದರಿಂದ ಕೆಲವರು ನಾಲ್ಕೈದು ಗಂಟೆಗಳವರೆಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಒಬ್ಬ ಫಲಾನುಭವಿಯ ನೋಂದಣಿ ಹಾಗೂ ದೃಢೀಕರಣಕ್ಕೆ 15ರಿಂದ 20 ನಿಮಿಷ!

ಪಡಿತರ ವಿತರಿಸುವ ಮುನ್ನ ಫಲಾನುಭವಿಗಳ ಹೆಬ್ಬೆರಳಿನ ದೃಢೀಕರಣ ಪಡೆದು, ಸಿಸ್ಟಂನಲ್ಲಿ ಅನುಮೋದನೆ ನೀಡಬೇಕಿದೆ. ಆದರೆ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಒಬ್ಬೊಬ್ಬ ಫಲಾನುಭವಿಯ ನೋಂದಣಿ ಹಾಗೂ ದೃಢೀಕರಣಕ್ಕೆ 15ರಿಂದ 20 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಹೀಗಾಗಿ ನಿನ್ನೆ ಪಡಿತರಕ್ಕಾಗಿ ಕಾದು ವಾಪಸ್ ತೆರಳಿದ್ದವರೂ ಇಂದು ಮತ್ತೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ಇದು ಕೇವಲ ಒಂದು ಪಡಿತರ ಅಂಗಡಿಗೆ ಸೀಮಿತವಾಗಿಲ್ಲ. ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ಪಡಿತರ ಅಂಗಡಿಗಳ ಮುಂದೆ ಜನರು ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ವರದಿಯಾಗಿದೆ.

ಇ-ಕೆವೈಸಿ ಬಳಿಕ ಪಡಿತರಕ್ಕೂ ಸರ್ವರ್ ಸಮಸ್ಯೆ

ಆಹಾರ ಇಲಾಖೆ ಪಡಿತರದಾರರಿಗೆ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದ ಸಂದರ್ಭದಲ್ಲಿ ಕೂಡ ಸರ್ವರ್ ಸಮಸ್ಯೆ ಜನರನ್ನು ಕಾಡಿತ್ತು. ಇ-ಕೆವೈಸಿ ಮಾಡಿಸಿಕೊಳ್ಳಲು ಹಲವು ದಿನಗಳ ಕಾಲ ರೇಷನ್ ಅಂಗಡಿಗಳ ಮುಂದೆ ಕಾದಿದ್ದ ಜನರು, ಇದೀಗ ಪಡಿತರ ಪಡೆಯುವಾಗಲೂ ಇದೇ ಸಮಸ್ಯೆ ಎದುರಿಸುವಂತಾಗಿದೆ.

ಈ ಹಿಂದೆ ಒಟಿಪಿ ಮೂಲಕ ನೋಂದಣಿ ಮಾಡಲಾಗುತ್ತಿತ್ತು. ಆದರೆ ಇದರಲ್ಲಿ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಹೆಬ್ಬೆರಳಿನ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಪಡಿತರ ಪಡೆಯುವವರು ಕಡ್ಡಾಯವಾಗಿ ಬಯೋಮೆಟ್ರಿಕ್ ದೃಢೀಕರಣ ನೀಡಬೇಕಾಗಿದೆ.

ಹೆಬ್ಬೆರಳಿನ ದೃಢೀಕರಣದ ಬಳಿಕ ಅನುಮೋದನೆ ದೊರೆಯಲು 15 ನಿಮಿಷದಿಂದ ಅರ್ಧ ಗಂಟೆಯವರೆಗೆ ಸಮಯ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂದು ಪಡಿತರದಾರರು ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಅವರ ಆರೋಪ.

ಸ್ಥಳೀಯ ಆಹಾರ ಇಲಾಖೆ ಅಧಿಕಾರಿಗಳೂ ಈ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಆದರೂ ಸರ್ವರ್ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಕೂಲಿ ಕೆಲಸ ಬಿಟ್ಟು ಪಡಿತರ ಪಡೆಯಲು ಅಂಗಡಿಗಳ ಮುಂದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LIVE TV

ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರು ಹಾಗೂ ಫಲಾನುಭವಿಗಳಿಬ್ಬರೂ ತೊಂದರೆ ಅನುಭವಿಸುತ್ತಿದ್ದು, ಆಹಾರ ಇಲಾಖೆ ಕೂಡಲೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆ ಸುಗಮಗೊಳಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ