ವಿದ್ಯುತ್ ಇಂಜಿನ್ನಿಂದ ನೈಋತ್ಯ ರೈಲ್ವೆಯ ಇನ್ನೂ ನಾಲ್ಕು ರೈಲುಗಳ ಸಂಚಾರ ಪ್ರಾರಂಭ
ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಅಂದರೆ ತಿರುಪತಿಯಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದವರೆಗೆ ಡೀಸೆಲ್ ಲೋಕೋಮೋಟಿವ್ ನೊಂದಿಗೆ ಸಂಚರಿಸುತ್ತಿತ್ತು.
ಹುಬ್ಬಳ್ಳಿ: ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ದಿನಾಂಕ ಮಾರ್ಚ್ 28 ರಿಂದ ನೈಋತ್ಯ ರೈಲ್ವೆಯ ಇನ್ನೂ ನಾಲ್ಕು ರೈಲುಗಳನ್ನು ಎಲೆಕ್ಟ್ರಿಕ್ (Electric) ಲೋಕೋಮೋಟಿವ್ನಿಂದ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಷನ್ನಲ್ಲಿ ಪರಿವರ್ತಿಸಲಾಗಿದೆ. ಅದರಂತೆ ಮಾರ್ಚ್ 28 ರಿಂದ ತಿರುಪತಿಯಿಂದ ಸೇವೆ ಪ್ರಾರಂಭವಾಗುವಂತೆ ಹಾಗೂ ಮಾರ್ಚ್ 29 ರಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದಿಂದ ಸೇವೆ ಪ್ರಾರಂಭವಾಗುವಂತೆ ರೈಲು (Train) ಸಂಖ್ಯೆ 17415/17416 ತಿರುಪತಿ – ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ – ತಿರುಪತಿ ನಿತ್ಯ ಸೇವೆಯ ಹರಿಪ್ರಿಯ ಎಕ್ಸ್ಪ್ರೆಸ್ ಅನ್ನು ಗುಂತಕಲ್ – ಎಸ್ಎಸ್ಎಸ್ ಹುಬ್ಬಳ್ಳಿ ಗುಂತಕಲ್ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ನಿಂದ ಸಂಚರಿಸುತ್ತದೆ.
ಈ ಮೊದಲು, ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಅಂದರೆ ತಿರುಪತಿಯಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದವರೆಗೆ ಡೀಸೆಲ್ ಲೋಕೋಮೋಟಿವ್ ನೊಂದಿಗೆ ಸಂಚರಿಸುತ್ತಿತ್ತು.
ಹಾಗೆಯೇ ಮಾರ್ಚ್ 30 ರಿಂದ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸೇವೆ ಪ್ರಾರಂಭವಾಗುವಂತೆ ಹಾಗೂ ಮಾರ್ಚ್ 31 ರಿಂದ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 17313/17314 ಎಸ್ಎಸ್ಎಸ್ ಹುಬ್ಬಳ್ಳಿ – ಎಂಜಿಆರ್ ಚೆನ್ನೈ ಸೆಂಟ್ರಲ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್, ಎಸ್ಎಸ್ಎಸ್ ಹುಬ್ಬಳ್ಳಿ ಗುಂತಕಲ್ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ನಿಂದ ಸಂಚರಿಸುತ್ತದೆ. ಈ ಮೊದಲು, ಈ ರೈಲು ಗುಂತಕಲ್ ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ನೊಂದಿಗೆ ಸಂಚರಿಸುತ್ತಿತ್ತು.
ಮೈಸೂರು – ಕೆಎಸ್ಆರ್ ಬೆಂಗಳೂರು ಧರ್ಮಾವರಂ ಗುಂತಕಲ್, ರಾಯಚೂರು ವಾಡಿ- ಕಲ್ಬುರ್ಗಿ ಹಾಗೂ ಸೊಲ್ಲಾಪುರಗಳ ಹರಿಪ್ರಿಯ ಎಕ್ಸ್ಪ್ರೆಸ್ ಶೇ.64 ರಷ್ಟು ಮಾರ್ಗದಲ್ಲಿ ಅಂದರೆ ಒಟ್ಟು 900 ಕೀ ಮೀಗಳ ಪ್ರಯಾಣದಲ್ಲಿ ಎಸ್ಎಸ್ಎಸ್ ಹುಬ್ಬಳ್ಳಿ ಗುಂತಕಲ್ಗಳ ನಡುವೆ 574 ಕೀಮೀ ಎಲೆಕ್ಟ್ರಿಕ್ ಎಂಜಿನ್ನೊಂದಿಗೆ ಸಂಚರಿಸುತ್ತದೆ. ಹಾಗೆಯೇ ಎಸ್ಎಸ್ಎಸ್ ಹುಬ್ಬಳ್ಳಿ – ಎಂಜಿಆರ್ ಚೆನ್ನೈ ಸೆಂಟ್ರಲ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ಶೇ.100 ಅಂದರೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಎಂಜಿನ್ನೊಂದಿಗೆ ಸಂಚರಿಸುತ್ತದೆ. ಈ ನಾಲ್ಕು ರೈಲುಗಳನ್ನು ಅವುಗಳ ಸೇವೆಯ ಹೆಚ್ಚಿನ ಮಾರ್ಗದಲ್ಲಿ ಎಲೆಕ್ಟ್ರಿಕಲ್ ಎಂಜಿನ್ನೊಂದಿಗೆ ಸಂಚರಿಸುವುದರಿಂದ ಪ್ರತಿದಿನ ಸುಮಾರು 5,000 ಲೀಟರ್ಗಳಷ್ಟು ಡೀಸೆಲ್ನ ಉಳಿತಾಯವಾಗುವುದು.
ನೈಋತ್ಯ ರೈಲ್ವೆಯಲ್ಲಿ ಕಳೆದ ಎರಡು ಹಣಕಾಸು ವರ್ಷದಲ್ಲಿ ಅಂದರೆ. 2019-20 ಹಾಗೂ 2020-21ರಲ್ಲಿ ಪ್ರತಿ ವರ್ಷ 24 ರೈಲುಗಳಂತೆ ಒಟ್ಟು 48 ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್ನೊಂದಿಗೆ ಸಂಚರಿಸುವಂತೆ ವಿಸ್ತರಿಸಲಾಗಿದೆ ಅಥವಾ ಕಾರ್ಯಗತಗೊಳಿಸಲಾಗಿದೆ.
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ರವರು ಪ್ರಸ್ತುತ ಹಣಕಾಸು ವರ್ಷದಲ್ಲಿ ಈಗಾಗಲೇ, 26 ರೈಲುಗಳನ್ನು ಎಲೆಕ್ಟ್ರಿಕ್ ಲೋಕೋಮೋಟಿಬವ್ನಿಂದ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಷನ್ನಲ್ಲಿ ಪರಿವರ್ತಿಸಲಾಗಿದೆ ಹಾಗೂ ಇನ್ನೂ ನಾಲ್ಕು ರೈಲುಗಳ ಸೇವೆ ಮಾರ್ಚ್ 28 ರಿಂದ ಪ್ರಾರಂಭವಾಗುತ್ತಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ಈಗಾಗಲೇ ವಿದ್ಯುದೀಕರಣ ಕಾರ್ಯ ಪೂರ್ಣವಾಗಿರುವ ಭಾಗಗಳನ್ನೊಳಗೊಂಡಂತೆ, ಕನಿಷ್ಠ ಪಕ್ಷ ಇನ್ನೂ 10 ರೈಲುಗಳನ್ನು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಎಂಜಿನ್ನೊಂದಿಗೆ ಸಂಚರಿಸಲು ನೈಋತ್ಯ ರೈಲ್ವೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಸಾಧಿಸಿದ ದಾಖಲೆಯ ವಿದ್ಯುದೀಕರಣದಿಂದ ಇದು ಸಾಧ್ಯವಾಗಿದೆ. ಏಪ್ರಿಲ್ 2021 ರಿಂದ ಇಲ್ಲಿಯವರೆಗೆ ತನ್ನ ಸಂಪರ್ಕ ಜಾಲದ 511.7 ರೂಟ್ ಕೀ.ಮೀಗಳ ವಿದ್ಯುದೀಕರಣವನ್ನು ನೈಋತ್ಯ ರೈಲ್ವೆ ಪೂರ್ಣಗೊಳಿಸಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ. ವಿಜಯಾ ಹೇಳಿದ್ದಾರೆ.
ಇದನ್ನೂ ಓದಿ: Indian Railways: ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ ರಾಜ್ಯಗಳ 240 ರೈಲುಗಳ ಸಂಚಾರ ರದ್ದು
Indian Railways: ಇ-ಕಾಮರ್ಸ್ ಸಂಸ್ಥೆಗಳ ರೀತಿಯಲ್ಲೇ ಭಾರತೀಯ ರೈಲ್ವೆಯಿಂದ ಶೀಘ್ರದಲ್ಲೇ ಸರಕುಗಳ ಹೋಮ್ ಡೆಲಿವರಿ