ಫಕೀರೇಶ್ವರಮಠದ ಫಕೀರ್ ದಿಂಗಾಲೇಶ್ವರ ಶ್ರೀಗಳಿಗೆ ಜೀವಭಯ! ಭಕ್ತರಿಂದ ದೂರು
ಗದಗ ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರದಿಂಗಾಲೇಶ್ವರ ಶ್ರೀಗಳಿಗೆ ಜೀವಭಯ ಎದುರಾಗಿದೆ. ಈ ಹಿನ್ನೆಲೆ ಮಠದ ಭಕ್ತರಿಂದ ಪೊಲೀಸರಿಗೆ ದೂರು ನೀಡಲಾಗಿದೆ.
ಗದಗ, ಜುಲೈ 19: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯಲ್ಲಿ ಜೈನ ಮುನಿ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಗದಗ ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರದಿಂಗಾಲೇಶ್ವರ ಶ್ರೀಗಳಿಗೆ (Fakir Dingaleshwara Swamiji) ಜೀವಭಯ ಎದುರಾಗಿದೆ. ಈ ಹಿನ್ನೆಲೆ ಮಠದ ಭಕ್ತರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಮಠದಲ್ಲಿನ ಶ್ರೀಗಳ ಕೊಠಡಿಯ ಬಳಿ ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಬಂದಿದ್ದರು ಎನ್ನಲಾಗಿದೆ.
ಮಠದ ಅಂಗಳದಲ್ಲಿನ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಲೈಟ್ ಆಫ್ ಮಾಡಿ ಶ್ರೀಗಳ ಕೊಣೆ ಸುತ್ತಮುತ್ತ ಓಡಾಡಿದ್ದಾರೆ. ಮೂವರು ವ್ಯಕ್ತಿಗಳು ಹಿಂದಿ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ. ಈಗ ಸದ್ಯ ಈ ಘಟನೆ ಗಮನಿಸಿರುವ ಪೊಲೀಸರು ತಾತ್ಕಾಲಿಕ ಗನ್ ಮ್ಯಾನ್ ನಿಯೋಜನೆ ಮಾಡುವ ಮೂಲಕ ರಕ್ಷಣೆ ನೀಡಿದ್ದಾರೆ.
ಇದನ್ನೂ ಓದಿ: Tomato: ಕೋಲಾರದಲ್ಲಿ ಹೆಚ್ಚಿನ ಬೆಲೆ ತೆತ್ತು ಟೊಮೆಟೋ ಸಾಗಿಸುತ್ತಿರುವ ಉತ್ತರಭಾರತೀಯ ವರ್ತಕರು; ಬೆಂಗಳೂರಿಗೆ ಕಡಿಮೆ ಪೂರೈಕೆ
ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಶಿರಹಟ್ಟಿ ಫಕೀರೇಶ್ವರ ಮಠ ಕೂಡ ಒಂದು. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿಯನ್ನಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸರು ಮಠದ ಶ್ರೀಗಳಾದ ದಿಂಗಾಲೇಶ್ವರ ಸ್ವಾಮೀಜಿಗಳನ್ನು ನೇಮಕ ಮಾಡಲಾಗಿದೆ.
ಶಾಲಾ ಮಕ್ಕಳಿಂದ ದಿಢೀರ್ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಕಚೇರಿ ಮುಂದೆ ಲಕ್ಷ್ಮೇಶ್ವರದ ತಾಯಿ ಪಾರ್ವತಿ ಮಕ್ಕಳ ಬಳಗ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಿಂದ ದಿಢೀರ್ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಜೈನಮುನಿ ಹತ್ಯೆ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ: ಸದನಕ್ಕೆ ತಿಳಿಸಿದ ಸಿದ್ದರಾಮಯ್ಯ
ಈ ಸಂಸ್ಥೆಯಲ್ಲಿ 16 ನೂರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಹದಗೆಟ್ಟ ರಸ್ತೆಯಿಂದ ಶಾಲೆ ಬರಲು ಹಾಗೂ ವಾಪಾಸ್ಸ್ ಹೋಗಲು ಸಂಕಷ್ಟ ಎದುರಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆ ಆಗಿಲ್ಲ. ರಸ್ತೆ ದುರಸ್ತಿ ಮಾಡುವಂತೆ ಪುರಸಭೆಗೆ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:04 pm, Wed, 19 July 23