ಗದಗ: ಸಚಿವ ಎಚ್​ಕೆ ಪಾಟೀಲ ನೇತೃತ್ವದಲ್ಲಿ ಜನತಾ ದರ್ಶನ: ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ

ಮುಂಡರಗಿ ನಗರದ ಅನ್ನಧಾನಿಶ್ವರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಜರುಗಿದೆ. ಈ ವೇಳೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಕೆಲವು ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಜೊತೆಗೆ ಡಬಲ್ ಡಕ್ಕರ್ ಅಂಬಾರಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ.

ಗದಗ: ಸಚಿವ ಎಚ್​ಕೆ ಪಾಟೀಲ ನೇತೃತ್ವದಲ್ಲಿ ಜನತಾ ದರ್ಶನ: ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ
ಜನತಾ ದರ್ಶನ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 30, 2024 | 8:09 PM

ಗದಗ, ಜನವರಿ 30: ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ (HK Patil) ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮುಂಡರಗಿ ನಗರದ ಅನ್ನಧಾನಿಶ್ವರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಜರುಗಿದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಸಾರ್ವಜನಿಕರ ಅಹವಾಲಿಗೆ ಸಂಬಂಧಿಸಿದಂತೆ, ಮುಂಡರಗಿ ನಗರದಲ್ಲಿ ಸರ್ಕಾರಿ ಸಭಾಭವನ ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಎಪ್ರಿಲ್ 14 ರಂದು ಡಾ.ಅಂಬೇಡ್ಕರ್ ಜಯಂತಿಯಂದು ಶಂಕುಸ್ಥಾಪನೆ ನೆರವೇರಿಸುವ ಭರವಸೆ ನೀಡಿದರು. ಇದರಿಂದ ಈ ಭಾಗದ ಸಾರ್ವಜನಿಕರಿಗೆ ಕಲ್ಯಾಣ ಕಾರ್ಯಗಳನ್ನು ಮಾಡಲು ಸಹಕಾರಿ ಆಗಲಿದೆ ಎಂದು ಸಚಿವರು ಹೇಳಿದರು.

ಎಸ್. ಎಸ್. ಬೇವುರ ಅವರು ಅನುದಾನದಲ್ಲಿ ವಿಕಲಚೇತನರ ಕಲ್ಯಾಣಕ್ಕೆ ಶೇ.5 ರಷ್ಟು ಮೀಸಲಿಟ್ಟು ಅವರಿಗಾಗಿ ಬಳಕೆ ಮಾಡಬೇಕು ಎಂದು ಕೋರಿದರು. ಇದಕ್ಕೆ ಸಚಿವರು ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅರ್ಜಿದಾರರಿಗೆ ಸೂಕ್ತ ಮಾಹಿತಿ ಒದಗಿಸಲು ಸೂಚನೆ‌ ನೀಡಿದರು. ಮುಂಡವಾಡದ ಈರವ್ವ ಅವರು ತಮ್ಮ ಗಂಡನಿಗೆ ಕೊವಿಡ್ ಉಂಟಾಗಿ ನಂತರ ಬ್ಲಾಕ್ ಫಂಗಸ್​ನಿಂದಾಗಿ ಅವರು ತಂಬಾ ಕಷ್ಟದಲ್ಲಿದ್ದು, ಸರ್ಕಾರದ ಸಹಾಯದನ‌ ಕೊಡಿಸುವಂತೆ ಕೋರಿದರು.

ಪ್ರತಿಯಾಗಿ ಸಚಿವರು, ಆಶ್ರಯ ಮನೆ ನೀಡಬೇಕು, ಅವರ ಆರೋಗ್ಯ ಚಿಕಿತ್ಸೆಯನ್ನು ಜಿಮ್ಸ್ ಆಸ್ಪತ್ರೆಯಲ್ಲಿ ಉತ್ತಮವಾಗಿ ನೀಡಬೇಕು. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ರಮ ವಹಿಸಲು ತಿಳಿಸಿದರು. ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದೆ, ಇವುಗಳಿಂದ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಮನವಿ ಸಲ್ಲಿಸಿದರು. ಇದಕ್ಕೆ ಸಚಿವರು ಇನ್ನು ಒಂದು ತಿಂಗಳಲ್ಲಿ ಬಿಡಾಡಿ ಬೀದಿನಾಯಿಗಳ ನಿಯಂತ್ರಣ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ‌ ನೀಡಿದರು.

ಇದನ್ನೂ ಓದಿ: ಚಿಕ್ಕಮಗಳೂರಿಗೆ ಎಂಟ್ರಿಕೊಟ್ಟ 30 ಕಾಡಾನೆಗಳ ಹಿಂಡು; ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು

ನಗರದ ವಿಶ್ಚನಾಥ ಅವರು, ಬ್ಯಾಂಕ್ ಅಧಿಕಾರಿಗಳು ರೈತರಿಗೆ ಬರಗಾಲದಲ್ಲೂ ಸಾಲ ವಸೂಲಿ ಮಾಡಲು ಕಿರುಕುಳ ಮಾಡುತ್ತಿದ್ದಾರೆ ಎಂದರು. ಪ್ರತಿಯಾಗಿ ಸಚಿವ ಎಚ್. ಕೆ. ಪಾಟೀಲ ಮಾತನಾಡಿ, ಒತ್ತಾಯದ ಸಾಲ ವಸೂಲಾಯಿ ತಕ್ಷಣ ನಿಲ್ಲಿಸಬೇಕು. ಸರ್ಕಾರದ ಬರ ಪರಿಹಾರ ಸಹಾಯಧನವನ್ನು ರೈತರ ಸಾಲಕ್ಕೆ ಹೊಂದಾಣಿಕೆ‌ ಮಾಡಿಕೊಳ್ಳಬಾರದು. ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮ ವಹಿಸಲು ತಿಳಿಸಿದರು.

ಕಿಸಾನ ಜಾಗೃತಿ ಸಂಘದ ಅಧ್ಯಕ್ಷ ಡಿ.ಎಫ್.ಹುಗಾರ ಅವರು, ವಾರ್ಡ ನಂಬರ್ 17 ರ ಗಂಡು ಮಕ್ಕಳ ಶಾಸಕರ ಮಾದರಿ ಶಾಲೆಯ ಕಂಪೌಂಡ ವವ್ಯಸ್ಥೆಯಿಲ್ಲವೆಂದು ಸಚಿವರ ಗಮನಕ್ಕೆ ತಂದರು, ಅಹವಾಲು ಸ್ವೀಕರಿಸಿದ ಸಚಿವ ಎಚ್.ಕೆ.ಪಾಟೀಲ್ ರವರು 2 ತಿಂಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ.ರೆಡ್ಡೇರ ರವರಿಗೆ ತಿಳಿಸಿದರು.

ತಮ್ಮ ಉತಾರದಲ್ಲಿ 4 ಗುಂಟೆಯನ್ನು ಖರಾಬ್ ಎಂದು ನಮೂದಿಸಿದ್ದು ಅದನ್ನು ತೆಗೆಯಲು ಶಿವನಗೌಡ ವೀರನಗೌಡ ಪಾಟೀಲ್ ಅಹವಾಲನ್ನು ನೀಡಿದಾಗ ಅದನ್ನು ಒಂದು ವಾರದೊಳಗೆ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವರು, ಬಗೆಹರಿಸದಿದ್ದರೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ತಿಳಿಸಿದರು. ಸ್ವಾಮಿ ವಿವೇಕಾನಂದ ಉದ್ಯಾವನವನ್ನು ಒಬ್ಬ ವೈದ್ಯರು ಪಂಚವಟಿ ಔಷದಿ ವನಕ್ಕಾಗಿ ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹನಮಪ್ಪ ಚನ್ನದಾಸರ ಅಹವಾಲನ್ನು ಸ್ವೀಕರಿಸಿ ಫೆಬ್ರವರಿ 5 ರೊಳಗೆ ತೆರವು ಗೊಳಿಸಿ ಸಾರ್ವಜಿಕರಿಗೆ ಅವಕಾಶ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಪಂಪ್ ಸೆಟ್​ಗಳಿಗೆ ವಿದ್ಯುತ್ ಸಂರ್ಪಕ ಕಲ್ಪಿಸಲು ಮುಂಡವಾಡದ ಸಂಗನಗೌಡ ಶೇಖರಗೌಡ ಪಾಟೀಲರ ಅಹವಾಲನ್ನು ಸ್ವೀಕರಿಸಿ 15 ದಿನದೊಳಗೆ ಸಮಸ್ಯೆಯನ್ನು ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: ಕೋಡಿಮಠದ ಸ್ವಾಮೀಜಿ ನುಡಿದರು ಹೊಸ ಭವಿಷ್ಯ! ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣವಿದೆಯಂತೆ

ದುರಗವ್ವ ಬಾಗೇವಾಡಿ ರವರಿಗೆ ಭೂ ಒಡೆತನದ ಕಾಯ್ದೆ ಪ್ರಕಾರ ಅಂಬೇಡ್ಕರ್ ನಿಗಮದಿಂದ ನೀಡಿದ ಭೂಮಿಯನ್ನು ಪುಸಲಾಯಿಸಿ ಸ್ಥಳೀಯರು ತೆಗೆದುಕೊಂಡಿದ್ದು ಅದನ್ನು ಮರಳಿ ಒದಗಿಸಿಕೊಡುವಂತೆ ಮನವಿ ಮಾಡಿದಾಗ ಸ್ಪಂದಿಸಿದ ಸಚಿವರು ಈ ಪ್ರಕರಣದಲ್ಲಿರುವ ತಪ್ಪಿಸ್ಥರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅಂಬೇಡ್ಕರ ನಿಗಮದ ವ್ಯವಸ್ಥಾಪಕರಾದ ರಾಯ್ಕರ ಅವರಿಗೆ ತಿಳಿಸಿದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ರಾಜ್ಯ ಖನಿಜ ಮತ್ತು ಖನಿಜ ಸಂಪತ್ತು ನಿಗಮದ ಅಧ್ಯಕ್ಷರು ಹಾಗೂ ರೋಣ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕರಾದ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್, ತಹಶಿಲ್ದಾರರ ದನಂಜಯ ಸೇರಿದಂತೆ ಜಿಲ್ಲಾ ಮಟ್ಟದ, ತಾಲ್ಲೂಕು‌ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಇತರರು ಇದ್ದರು.

ಡಬಲ್ ಡಕ್ಕರ್ ಅಂಬಾರಿ ಬಸ್ ಸೇವೆಗೆ ಚಾಲನೆ

ಗದಗ ನಗರದಲ್ಲಿ ಸಂಚಾರ ಮಾಡಲು ಡಬಲ್ ಡೆಕ್ಕರ್ ಅಂಬಾರಿ ಬಸ್ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಮಂಗಳವಾರದಂದು ಚಾಲನೆ ನೀಡಿದರು. ಸದರಿ ಬಸ್‍ನ ಟಿಕೆಟ್ ದರ ವಿದ್ಯಾರ್ಥಿಗಳಿಗೆ ರೂ.100 ಹಾಗೂ ಸಾರ್ವಜನಿಕರಿಗೆ ರೂ.120 ಇರುತ್ತದೆ. ಅಂಬಾರಿ ಬಸ್‍ನ ಸಮಯ ಬೆಳಿಗ್ಗೆ 9.30 ರಂದ ಸಂಜೆ 6 ಗಂಟೆಯವರೆಗೆ ಇರುತ್ತದೆ. ಅಂಬಾರಿ ವಾಹನ ಚಲಿಸುವ ಮಾರ್ಗ ಹೊಸ ಬಸ್ ನಿಲ್ದಾಣದಿಂದ – ಬಸವೇಶ್ವರ ಮೂರ್ತಿ ಪುತ್ಥಳಿ ಮ್ಯೂಸಿಯಂ – ಭೀಷ್ಮ ಕೆರೆಯ ಬೋಟಿಂಗ್ – ಹೊಸ ಜಿಲ್ಲಾಧಿಕಾರಗಳ ಕಚೇರಿ- ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಅಥವಾ ಸಾಲುಮರದ ತಿಮ್ಮಕ್ಕ ಪಾರ್ಕ- ಮರಳಿ ಅದೇ ಮಾರ್ಗವಾಗಿ ಹೊಸ ಬಸ್ ನಿಲ್ದಾಣಕ್ಕೆ ಬಂದು ಸೇರುತ್ತದೆ.

ಈ ಸಂದರ್ಭದಲ್ಲಿ ರಾಜ್ಯ ಖನಿಜ, ಖನಿಜ ಸಂಪತ್ತು ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಯುವಜನ ಸಬಲೀಕರಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಶರಣು ಗೋಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಜಿ.ಪಂ. ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಗಣ್ಯರುಗಳಾದ ಬಿ.ಬಿ.ಅಸೂಟಿ, ಎಸ್.ಎನ್. ಬಳ್ಳಾರಿ, ಪ್ರಭು ಬುರಬುರೆ, ಅಶೋಕ ಮಂದಾಲಿ, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್