AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ ಕೆಆರ್​ಐಡಿಎಲ್ ಎಇಇ ನಾಪತ್ತೆ ಪ್ರಕರಣ: ಭೂಪಾಲ್‌ನಲ್ಲಿ ಪ್ರತ್ಯಕ್ಷರಾದ ಪರ್ವೀಜ್!

ಗದಗ ಕೆಆರ್‌ಐಡಿಎಲ್ (KRIDL) ಎಇಇ ಪರ್ವೀಜ್ ಧಾರವಾಡ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭ್ಯವಾಗಿದೆ. ವಿಜಯವಾಡದಲ್ಲಿ ಮೊಬೈಲ್ ಆಫ್ ಮಾಡಿಕೊಂಡು ಸುಮಾರು 1,200 ಕಿಲೋಮೀಟರ್ ಪ್ರಯಾಣಿಸಿದ್ದ ಪರ್ವೀಜ್, ಇದೀಗ ಮಧ್ಯಪ್ರದೇಶದ ಭೂಪಾಲ್ ರೈಲ್ವೇ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಕಳೆದ 18 ದಿನಗಳಿಂದ ನಾಪತ್ತೆಯಾಗಿರುವ ಇವರ ಪತ್ತೆಗೆ ಗದಗ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತೀವ್ರ ಜಾಲ ಬೀಸಿದ್ದಾರೆ.

ಗದಗ ಕೆಆರ್​ಐಡಿಎಲ್ ಎಇಇ ನಾಪತ್ತೆ ಪ್ರಕರಣ: ಭೂಪಾಲ್‌ನಲ್ಲಿ ಪ್ರತ್ಯಕ್ಷರಾದ ಪರ್ವೀಜ್!
ಭೂಪಾಲ್‌ನಲ್ಲಿ ಪ್ರತ್ಯಕ್ಷರಾದ ಎಇಇ ಪರ್ವೀಜ್!
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Sep 30, 2026 | 11:16 AM

Share

ಮುಖ್ಯಾಂಶಗಳು

  • ಗದಗ ಕೆಆರ್‌ಐಡಿಎಲ್ AEE ಪರ್ವೀಜ್ ನಾಪತ್ತೆಯಾಗಿ 18 ದಿನಗಳು ಕಳೆದಿವೆ.
  • ಆಂಧ್ರಪ್ರದೇಶದ ವಿಜಯವಾಡದ ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.
  • 1,200 ಕಿ.ಮೀ ದೂರದ ಭೂಪಾಲ್ ರೈಲ್ವೇ ನಿಲ್ದಾಣದಲ್ಲಿ ಎಇಇ ಪ್ರತ್ಯಕ್ಷ.

ಗದಗ, ಸೆಪ್ಟೆಂಬರ್ 30: ಸರ್ಕಾರದ ಅನುದಾನ ಬಿಡುಗಡೆಯಾಗದಿದ್ದಕ್ಕೆ ನೊಂದು, ಕಳೆದ 18 ದಿನಗಳಿಂದ ಗೂಢವಾಗಿ ನಾಪತ್ತೆಯಾಗಿರುವ ಗದಗ ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರ್ವೀಜ್ ಧಾರವಾಡ ಅವರ ಸುಳಿವು ಕೊನೆಗೂ ಸಿಕ್ಕಿದ್ದು, ಅವರು ಮಧ್ಯಪ್ರದೇಶದ ಭೂಪಾಲ್ ರೈಲ್ವೇ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಆಂಧ್ರಪ್ರದೇಶದಿಂದ ಭೂಪಾಲ್ ಸೇರಿದ ಎಇಇ

ಪ್ರಕರಣದ ಆರಂಭಿಕ ತನಿಖೆಯಲ್ಲಿ ಎಇಇ ಪರ್ವೀಜ್ ಅವರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೋಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು. ಆದರೆ, ತಮ್ಮ ಜಾಡು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಅವರು ವಿಜಯವಾಡದಿಂದಲೇ ತಮ್ಮ ಮೊಬೈಲ್ ಫೋನ್ ಸಂಪೂರ್ಣ ಆಫ್ ಮಾಡಿಕೊಂಡಿದ್ದರು. ಕಳೆದ 18 ದಿನಗಳಿಂದ ಮೊಬೈಲ್ ಆನ್ ಮಾಡದೇ ಇದ್ದರೂ, ಪಟ್ಟುಬಿಡದ ಗದಗ ಪೊಲೀಸರು ಸುಮಾರು 1,200 ಕಿಲೋಮೀಟರ್ ವ್ಯಾಪ್ತಿಯ ನಿರಂತರ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಅವರ ಪ್ರಯಾಣದ ಹಾದಿಯನ್ನು ಭೇದಿಸಿದ್ದಾರೆ.

ಇದನ್ನೂ ಓದಿ ಗದಗದಲ್ಲಿ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ರಿಯಾಕ್ಷನ್ ಹೀಗಿತ್ತು

ಟಿವಿ9ಗೆ ಲಭ್ಯವಾಯಿತು ಸಿಸಿಟಿವಿ ದೃಶ್ಯಾವಳಿ

ವಿಜಯವಾಡದಿಂದ ಪ್ರಯಾಣ ಬೆಳೆಸಿದ ಪರ್ವೀಜ್ ಧಾರವಾಡ ಭೂಪಾಲ್ ತಲುಪಿದ್ದು, ಅಲ್ಲಿನ ರೈಲ್ವೇ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡ್ಡಾಡುತ್ತಿರುವ ದೃಶ್ಯಗಳು ಟಿವಿ9ಗೆ ಲಭ್ಯವಾಗಿವೆ. ಮೊಬೈಲ್ ಸಂಪರ್ಕ ಸಂಪೂರ್ಣ ಬಂದ್ ಆಗಿರುವುದರಿಂದ ಪತ್ತೆ ಕಾರ್ಯ ಅತ್ಯಂತ ಸವಾಲಿನಿಂದ ಕೂಡಿದೆ. ಆದರೂ ಗದಗ ಪೊಲೀಸ್ ತಂಡವು ಭೂಪಾಲ್‌ನಲ್ಲಿ ನೆಲೆಸಿರುವ ಎಇಇ ಪರ್ವೀಜ್ ಅವರ ಪ್ರತಿ ಹೆಜ್ಜೆಯ ಮೇಲೆಯೂ ಹದ್ದಿನ ಕಣ್ಣಿಟ್ಟಿದ್ದು, ಶೀಘ್ರದಲ್ಲೇ ಅವರನ್ನು ವಶಕ್ಕೆ ಪಡೆಯುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More