ಗಣೇಶ ಹಬ್ಬಕ್ಕೆ ಊರಿನತ್ತ ಜನ: ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್, ಎಲ್ಲೆಲ್ಲಿ ?

ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇರುವ ಕಾರಣ ಸಾಕಷ್ಟು ಜನರು ಇಂದು ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಹೀಗಾಗಿ ನಗರದ ಮೆಜೆಸ್ಟಿಕ್, ಕೆ.ಆರ್.ಪುರಂ, ಆನಂದ್ ರಾವ್ ಸರ್ಕಲ್​ ಸೇರಿದಂತೆ ಹಲವೆಡೆ ಸಾಕಷ್ಟು ಸಂಚಾರ ದಟ್ಟಣೆ ಉಂಟಾಗಿದೆ. ವಾಹನ ಸವಾರರು ಪರದಾಡಿದ್ದಾರೆ.

ಗಣೇಶ ಹಬ್ಬಕ್ಕೆ ಊರಿನತ್ತ ಜನ: ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್, ಎಲ್ಲೆಲ್ಲಿ ?
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Sep 06, 2024 | 9:50 PM

ಬೆಂಗಳೂರು, ಸೆಪ್ಟೆಂಬರ್​ 06: ಶನಿವಾರದಂದು ಕರ್ನಾಟಕದಾದ್ಯಂತ ಗಣೇಶ ಹಬ್ಬವನ್ನು (Ganesh Chaturthi) ಆಚರಿಸಲಾಗುತ್ತಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರದ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ. ಕೆ.ಆರ್.ಪುರಂನ ಐಟಿಐ ಗೇಟ್, ಆನಂದ್ ರಾವ್ ಸರ್ಕಲ್​ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು, ಸವಾರರು ಪರದಾಡಿದ್ದಾರೆ.

ಎಲ್ಲೆಲ್ಲಿ ಟ್ರಾಫಿಕ್​ ಜಾಮ್

ಹೂಡಿ ಸರ್ಕಲ್ ಹತ್ತಿರ ಅಯ್ಯಪ್ಪ ನಗರ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ಅಯ್ಯಪ್ಪ ನಗರದ ಕಡೆಗೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವಾಹನಗಳ ದಟ್ಟಣೆಯನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದು ಹಾಗೂ KSRTC ವತಿಯಿಂದ ಹೆಚ್ಚುವರಿಯಾಗಿ ಬಸ್ ಬಿಟ್ಟಿರುವ ಹಿನ್ನೆಲೆ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆಯಾಗುವ ಕಾರಣ ಸಾರ್ವಜನಿಕರು ಬದಲಿ ರಸ್ತೆ ಮೂಲಕ ಸಂಚರಿಸುವಂತೆ ಉಪ್ಪಾರಪೇಟೆ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಅದೇ ರೀತಿಯಾಗಿ ವರ್ತೂರು ಗುಂಜೂರು ರಸ್ತೆಯಲ್ಲಿ ಹಬ್ಬ ಹಿನ್ನಲೆ ಶಾಪಿಂಗ್‌ನಿಂದಾಗಿ ನಿಧಾನಗತಿಯ ಸಂಚಾರವಿದ್ದು, ದಯಮಾಡಿ ಸಹಕರಿಸುವಂತೆ ತಿಳಿಸಲಾಗಿದೆ.

ಇದನ್ನೂ ಓದಿ: ಗಣೇಶ ಹಬ್ಬ: ಬಸ್​​​ ಟಿಕೆಟ್​ ದರ ಸುಲಿಗೆ ಕಡಿವಾಣಕ್ಕೆ ಮುಂದಾದ ಆರ್​ಟಿಓ, ರಾಜ್ಯಾದ್ಯಂತ ಇಂದು, ನಾಳೆ ಕಾರ್ಯಾಚರಣೆ

ರಾತ್ರಿಯಾಗುತ್ತಿದ್ದಂತೆ​ ಕೆಎಸ್ಆರ್​ಟಿಸಿಯತ್ತ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ತಮ್ಮ ತಮ್ಮ ಊರುಗಳಿಗೆ ಹೋಗಲು ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಟರ್ಮಿನಲ್-1ರಲ್ಲಿ ಜನಜಂಗುಳಿ ಉಂಟಾಗಿದೆ.

ಹುಬ್ಬಳ್ಳಿ, ಬಳ್ಳಾರಿ, ಧಾರವಾಡ, ಗದಗ, ಬೆಳಗಾವಿ, ಹೊಸಪೇಟೆ, ಯಲಬುರ್ಗಾ, ಗಂಗಾವತಿ, ಜಮಖಂಡಿ, ರಾಯಚೂರು, ಬಾಗಲಕೋಟೆ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ವಿವಿಧೆಡೆ ಭಾಗಕ್ಕೆ ಬಸ್​​ಗಳು ತೆರಳುತ್ತಿವೆ.

ಹಬ್ಬಕ್ಕೆ ಊರಿನ ಕಡೆ ಮುಖ ಮಾಡಿದ ಜನರಿಗೆ ಟಿಕೆಟ್ ದುಬಾರಿಯಿಂದ ಜೇಬಿಗೆ ಕತ್ತರಿ ಬಿದ್ದಿದೆ. ಟಿಕೆಟ್ ದರ ಹೆಚ್ಚಾದರೂ ದೇವರ ಪೂಜೆಗೆಂದು ಜನರು ತೆರಳುತ್ತಿದ್ದಾರೆ. ಆನಂದ್ ರಾವ್ ಸರ್ಕಲ್ ಬಳಿ ದುಬಾರಿ ಟಿಕೆಟ್ ದರದ ಬಗ್ಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ನಾರ್ಮಲ್ ದಿನಗಳಲ್ಲಿ ಒಂದು ರೀತಿಯ ಟಿಕೆಟ್ ದರ ಇರುತ್ತೆ, ಹಬ್ಬಗಳ ದಿನದ ವೇಳೆ ದರ ಏರಿಕೆ ಆಗತ್ತೆ.‌ ಮಧ್ಯಮ ವರ್ಗದವರು ಏನು ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಗಣೇಶ ಹಬ್ಬ ಪ್ರಯುಕ್ತ NWKRTCಯಿಂದ ಪ್ರಯಾಣಿಕರಿಗೆ ಗಿಫ್ಟ್​​: ಸೀಟ್​ ಬುಕ್ಕಿಂಗ್​ನಲ್ಲಿ ರಿಯಾತಿ

ಸರ್ಕಾರ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಬಿಟ್ಟಿದೆ. ಅಲ್ಲಿ ರಶ್ ಅಂತ ಖಾಸಗಿ ಬಸ್​ಗೆ ಬರುತ್ತೇವೆ. ಆದರೆ ಇವರು ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಇರುವ ಹಣಕ್ಕೆ ಡಬಲ್ ಟಿಕೆಟ್ ಮಾಡಿದ್ದಾರೆ. ಟಿಕೆಟ್ ದರ ನೋಡಿ ಬೇಸರವಾಗತ್ತೆ. ಆದರೆ ಊರಿಗೆ ಹೋಗಲೇಬೇಕು. ದೇವರ ಪೂಜೆ ಮಾಡಲೇಬೇಕು ಎನ್ನುತ್ತಿದ್ದಾರೆ ಜನರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:27 pm, Fri, 6 September 24

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್