ಹಾವೇರಿ: ಕೋಟ್ಯಂತರ ರೂ ಸಂಗ್ರಹಿಸಿ, ಶತಮಾನದಷ್ಟು ಹಳೆಯದಾದ ಗ್ರಾಮದ ಸರಕಾರಿ ಶಾಲೆಯನ್ನು ನವೀಕರಿಸಿದ ಹಳೆಯ ವಿದ್ಯಾರ್ಥಿಗಳು

ಮಾಜಿ ವಿದ್ಯಾರ್ಥಿಗಳಾದ ದಿವಂಗತ ರವೀಂದ್ರ ಪಟ್ಟಣಶೆಟ್ಟಿ ಮತ್ತು ಆರ್‌ಟಿಒ ಇನ್ಸ್‌ಪೆಕ್ಟರ್ ಪ್ರಕಾಶ್ ಹಳಬುಟ್ಟಿ ಅವರು ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸುವತ್ತ ಮೊದಲ ಹೆಜ್ಜೆಗಳನ್ನು ಇಟ್ಟರು. ನಂತರ ಅದು 2019 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕದರಮುಂಡಲಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಅನೇಕ ಹಳೆಯ ವಿದ್ಯಾರ್ಥಿಗಳು ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆದವರಾಗಿದ್ದಾರೆ. ಉದ್ಯಮಿಗಳಾಗಿಯೂ ಅನೇಕರು ಇದ್ದಾರೆ.

ಹಾವೇರಿ: ಕೋಟ್ಯಂತರ ರೂ ಸಂಗ್ರಹಿಸಿ, ಶತಮಾನದಷ್ಟು ಹಳೆಯದಾದ ಗ್ರಾಮದ ಸರಕಾರಿ ಶಾಲೆಯನ್ನು ನವೀಕರಿಸಿದ ಹಳೆಯ ವಿದ್ಯಾರ್ಥಿಗಳು
ಶತಮಾನದಷ್ಟು ಹಳೆಯದಾದ ಗ್ರಾಮದ ಸರಕಾರಿ ಶಾಲೆಯನ್ನು ನವೀಕರಿಸಿದ ಹಳೆಯ ವಿದ್ಯಾರ್ಥಿಗಳು
Follow us
|

Updated on:Nov 21, 2023 | 10:38 AM

ಹಾವೇರಿ ಜಿಲ್ಲೆ (Haveri) ಬ್ಯಾಡಗಿ (Byadagi) ತಾಲೂಕಿನ ಕದರಮುಂಡಲಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ (Kadaramundalagi government primary school) ಈಗಷ್ಟೇ ನವ ಚೈತನ್ಯ ಸಿಕ್ಕಿದೆ – ನವೀಕರಣಕ್ಕೆ 1 ಕೋಟಿ ರೂ. ಸಂಗ್ರಹಿಸಿದ ಹಳೆಯ ವಿದ್ಯಾರ್ಥಿಗಳ ಸಂಘ ಇದನ್ನು ಸಾಧ್ಯವಾಗಿಸಿದೆ. ಶತಮಾನದಷ್ಟು ಹಳೆಯದಾದ ಶಾಲಾ ಕಟ್ಟಡವು (century-old school building) ಬಹಳ ಕಾಲದಿಂದ ಶಿಥಿಲಾವಸ್ಥೆಯಲ್ಲಿತ್ತು. ಆದರೆ ಈಗ ಹಳೆಯ ವಿದ್ಯಾರ್ಥಿಗಳು ಸಂಗ್ರಹಿಸಿಕೊಟ್ಟ ಅಪಾರ ಮೌಲ್ಯದ ನಿಧಿಯ ಒಳಹರಿವಿನೊಂದಿಗೆ, ನವೀಕರಣಗೊಂಡಿದೆ. ನೂತನ ಭವ್ಯ ಕಟ್ಟಡವು ಈಗ ಅದರ ಹಳೆಯ ವಿದ್ಯಾರ್ಥಿಗಳ ನವಿರಾದ ಪ್ರೀತಿಗೆ ಹೊಳೆಯುವ ಸಾಕ್ಷಿಯಾಗಿ ಎದ್ದು ಕಾಣುತ್ತಿದೆ. ಎಂಟು ತರಗತಿ ಕೊಠಡಿಗಳನ್ನು ಹೊಂದಿರುವ ಎರಡು ಅಂತಸ್ತಿನ ಕಟ್ಟಡವು ನವೆಂಬರ್ 27 ರಂದು ಔಪಚಾರಿಕ ಉದ್ಘಾಟನೆಗೆ ಕಾಯುತ್ತಿದೆ.

ಹಳೆಯ ವಿದ್ಯಾರ್ಥಿ ಸಂಘದ ಧನಸಹಾಯದೊಂದಿಗೆ ಶಾಲಾ ಕಟ್ಟಡವನ್ನು ನವೀಕರಣಗೊಳಿಸಿರುವುದು ಮಾತ್ರವಲ್ಲದೆ, ಸಂಸ್ಥೆಗೆ LKG ಮತ್ತು UKG ಎಂಬ ಎರಡು ಹೊಸ ವಿಭಾಗಗಳನ್ನು ಸೇರಿಸಲಾಗಿದೆ. 500 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ಸಂಘವು ನಿಧಿಯನ್ನು ಸಂಗ್ರಹಿಸಲು ಮತ್ತು ಶಾಲಾ ಕಟ್ಟಡವನ್ನು ಪುನರ್​ ನಿರ್ಮಿಸಲು ಸುಮಾರು ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು. ಹಳೆಯ ವಿದ್ಯಾರ್ಥಿ ಈ ಘನಕಾರ್ಯದ ಬಗ್ಗೆ ಹಾವೇರಿ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು timesofindia.indiatimes.com ವರದಿ ಮಾಡಿದೆ.

ಗ್ರಾಮಸ್ಥರ ಪ್ರಕಾರ ಈ ಹಿಂದೆ ಶಾಲೆಯ ಎಲ್ಲಾ ತರಗತಿ ಕೊಠಡಿಗಳು ಬಳಕೆಗೆ ಯೋಗ್ಯವಾಗಿರಲಿಲ್ಲ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಟ್ಟಡವನ್ನು ದುರಸ್ತಿ ಮಾಡದೆ ವಿದ್ಯಾರ್ಥಿಗಳ ಸಂಕಟವನ್ನು ಹೆಚ್ಚಿಸಿತ್ತು. ಇದು ವಿದ್ಯಾರ್ಥಿಗಳ ವ್ಯಾಸಂಗ ಮತ್ತು ವ್ಯಾಸಂಗವನ್ನು ಇಲ್ಲಿಯೇ ಮುಂದುವರಿಸುವುದರ ಮೇಲೆ ನೇರ ಪರಿಣಾಮವನ್ನು ಬೀರಿತ್ತು. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ತೀವ್ರ ಕುಸಿತವನ್ನು ಕಂಡಿತ್ತು.

ಮಾಜಿ ವಿದ್ಯಾರ್ಥಿಗಳಾದ ದಿವಂಗತ ರವೀಂದ್ರ ಪಟ್ಟಣಶೆಟ್ಟಿ ಮತ್ತು ಆರ್‌ಟಿಒ ಇನ್ಸ್‌ಪೆಕ್ಟರ್ ಪ್ರಕಾಶ್ ಹಳಬುಟ್ಟಿ ಅವರು ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸುವತ್ತ ಮೊದಲ ಹೆಜ್ಜೆಗಳನ್ನು ಇಟ್ಟರು. ನಂತರ ಅದು 2019 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕದರಮುಂಡಲಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಅನೇಕ ಹಳೆಯ ವಿದ್ಯಾರ್ಥಿಗಳು ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆದವರಾಗಿದ್ದಾರೆ. ಉದ್ಯಮಿಗಳಾಗಿಯೂ ಅನೇಕರು ಇದ್ದಾರೆ.

ನನ್ನ ಜೊತೆಗೆ ನನ್ನ ಸಹೋದರ ಸಹೋದರಿಯರು ಸಹ ಈ ಶಾಲೆಯಲ್ಲಿ ಓದಿದ್ದಾರೆ, ಆದರೆ ನಾವು ಯಾವಾಗಲೂ ಶಾಲೆಯ ಕಟ್ಟಡದ ದುಸ್ಥಿತಿ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದೆವು. ಆದ್ದರಿಂದ ನಾವು ನಮ್ಮ ಶಾಲೆಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದೆವು. ಮತ್ತು ದಿವಂಗತ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ನಿಧಿ ಸಂಗ್ರಹವನ್ನು ಪ್ರಾರಂಭಿಸಿದೆವು ಎಂದು ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ ಉತ್ಸಾಹದಿಂದ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ಮೈಸೂರು: ವರುಣ ಅಸೆಂಬ್ಲಿ ಕ್ಷೇತ್ರದ 5 ಸರ್ಕಾರಿ ಶಾಲೆಗಳ ವಸ್ತುಸ್ಥಿತಿ ಟಿವಿ 9 ರಿಯಾಲಿಟಿ ಚೆಕ್ ನಲ್ಲಿ ಅನಾವರಣಗೊಂಡಿರುವುದು ಹೀಗೆ

ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಕಣ್ಣಪ್ಪ ಚತ್ರದ್ ಮಾತನಾಡಿ, ಎಲ್‌ಕೆಜಿ ಮತ್ತು ಯುಕೆಜಿ ಹಂತದ ಬೋಧಕ ಸಿಬ್ಬಂದಿಯ ವೇತನವನ್ನೂ ಸಂಘದ ವತಿಯಿಂದ ನೀಡಲಾಗುವುದು. ಮುಂದೆಯೂ ಶಾಲೆಯ ಅಭಿವೃದ್ಧಿಯನ್ನು ಮುಂದುವರಿಸಲಿದ್ದೇವೆ ಎಂದು ಅವರು ಹೇಳಿದರು.

ಕದರಮುಂಡಲಗಿ ಸರಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಮಾಡಿರುವ ಮಹತ್ಕಾರ್ಯ ಇದಾಗಿದ್ದು, ಈ ಹಳೆ ವಿದ್ಯಾರ್ಥಿಗಳು ಸುಸಜ್ಜಿತ ಎಂಟು ತರಗತಿಯ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಶಾಲೆಯ ಅಭಿವೃದ್ಧಿಗೆ ಮುಂದಾಗಿರುವ ಹಳೆ ವಿದ್ಯಾರ್ಥಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸುರೇಶ ಎನ್ ಹುಗ್ಗಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಹಾವೇರಿ ಅವರು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:37 am, Tue, 21 November 23