ಹಿಂದೂಗಳ ಬೇಡಿಕೆ ಬಿಜೆಪಿ ಸರ್ಕಾರವೇ ಈಡೇರಿಸಬೇಕು; ಮುಸ್ಲಿಂ ರಾಜರ ಹೆಸರು ಬದಲಾಯಿಸಬೇಕೆಂದು ಸಿದ್ದಲಿಂಗ ಸ್ವಾಮೀಜಿ ಒತ್ತಾಯ

ಕಲಬುರಗಿಯಲ್ಲಿ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ಹಿಂದುಗಳು ಬೇಡಿಕೆಯನ್ನು ನೀವೇ ಇಡೇರಿಸಬೇಕು. ನಿಮ್ಮನ್ನು ಬಿಟ್ಟು ಕಾಂಗ್ರೆಸ್, ಜೆಡಿಎಸ್ ನವರು ಮಾಡ್ತಾರಾ? ಹಿಂದುಗಳು ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದಿದ್ದಾರೆ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji)ಒತ್ತಾಯಿಸಿದ್ದಾರೆ.

ಹಿಂದೂಗಳ ಬೇಡಿಕೆ ಬಿಜೆಪಿ ಸರ್ಕಾರವೇ ಈಡೇರಿಸಬೇಕು; ಮುಸ್ಲಿಂ ರಾಜರ ಹೆಸರು ಬದಲಾಯಿಸಬೇಕೆಂದು ಸಿದ್ದಲಿಂಗ ಸ್ವಾಮೀಜಿ ಒತ್ತಾಯ
ಸಿದ್ದಲಿಂಗ ಸ್ವಾಮೀಜಿ
Follow us
TV9 Web
| Updated By: ಆಯೇಷಾ ಬಾನು

Updated on:Apr 13, 2022 | 9:38 AM

ಕಲಬುರಗಿ: ಹಿಂದುಗಳು ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದಿದ್ದಾರೆ. ಕಾನೂನು ಪ್ರಕಾರ ಹಿಂದೂಗಳ ಬೇಡಿಕೆ ಬಿಜೆಪಿ ಸರ್ಕಾರವೇ ಈಡೇರಿಸಬೇಕು ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji)ಒತ್ತಾಯಿಸಿದ್ದಾರೆ. ಅಲ್ಲದೆ ಕಲಬುರಗಿ ಜಿಲ್ಲೆಯಲ್ಲಿ ಅನೇಕ ಮುಸ್ಲಿಂ ರಾಜರ ಹೆಸರುಗಳಿವೆ. ಮುಸ್ಲಿಂ ರಾಜರ ಹೆಸರು ಬದಲಾಯಿಸಿ ಹಿಂದೂ ರಾಜ ಮಹರಾಜರು, ಸಾಹಿತಿಗಳ ಹೆಸರಿಡಬೇಕೆಂದು ಸಿದ್ದಲಿಂಗ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ಹಿಂದುಗಳು ಬೇಡಿಕೆಯನ್ನು ನೀವೇ ಇಡೇರಿಸಬೇಕು. ನಿಮ್ಮನ್ನು ಬಿಟ್ಟು ಕಾಂಗ್ರೆಸ್, ಜೆಡಿಎಸ್ ನವರು ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ರಸ್ತೆ, ಮೈದಾನ, ಪಾರ್ಕ್ಗಳಿಗೆ ಅನೇಕ ಮುಸ್ಲಿಂ ರಾಜರ ಹೆಸರುಗಳಿವೆ. ಗುಲಾಮಿ ಹೆಸರು ಬದಲಾಯಿಸಿ ಹಿಂದೂ ರಾಜ ಮಹರಾಜರು, ಸಾಹಿತಿಗಳ ಹೆಸರನ್ನಿಡಬೇಕು. ಮುಜರಾಯಿ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಎಸ್.ಎಂ. ಕೃಷ್ಣಾ ಸರ್ಕಾರದ ಅವಧಿಯಲ್ಲಿ ಜಾರಿಯಾದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದೂಗಳೇ ವ್ಯಾಪಾರ ಮಾಡುವಂತೆ ಜಾಗೃತಿ ಮೂಡಿಸಲು ಸಿದ್ದಲಿಂಗ ಸ್ವಾಮೀಜಿ ಸಿದ್ಧತೆ ಕಲಬುರಗಿ: ಹಿಂದೂಗಳೇ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಮಾಡುವಂತೆ ಜಾಗೃತಿ ಮೂಡಿಸಲು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ  ಮುಂದಾಗಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎಂದು ಹೇಳುತ್ತೀರಿ. ಆದರೆ ಹಿಂದೂಗಳು ಯಾವುದೇ ವ್ಯಾಪಾರ ವಹಿವಾಟು ಮಾಡಲ್ಲ. ಹಿಂದೂಗಳು ಕೀಳರಿಮೆ ಬಿಟ್ಟು ವ್ಯಾಪಾರ ಮಾಡಲು ಮುಂದಾಗಿ. ಕೆಲವೊಂದು ವ್ಯಾಪಾರಗಳಲ್ಲಿ ಮುಸ್ಲಿಮರು ಹಿಡಿತ ಹೊಂದಿದ್ದಾರೆ. ಆ ಹಿಡಿತ ತಪ್ಪಿಸಲು ಹಿಂದೂಗಳು ಮುಂದಾಗಬೇಕೆಂದು ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ದೇಗುಲದಲ್ಲಿ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡಬೇಡಿ- ಬಜರಂಗದಳ ಮನವಿ ದೇಗುಲದಲ್ಲಿ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡಬೇಡಿ ಅಂತ ರಾಮದುರ್ಗ ತಹಶಿಲ್ದಾರ್‌ಗೆ ವಿಶ್ವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮನವಿ ಮಾಡಿವೆ. ರಾಮದುರ್ಗದ ವೆಂಕಟೇಶ್ವರ ದೇವಾಲಯದಲ್ಲಿ ಜಾತ್ರೆ ಹಿನ್ನೆಲೆ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ. ಏಪ್ರಿಲ್ 11ರಿಂದ 15ರವರೆಗೆ ವೆಂಕಟೇಶ್ವರ ಜಾತ್ರಾ ಮಹೋತ್ಸವ ನಡೆಲಿದೆ. ಇನ್ನು ಮಸೀದಿಗಳ ಮೇಲಿನ ಧ್ವನಿವರ್ಧಕ ನಿಷೇಧಿಸುವಂತೆಯೂ ಆಗ್ರಹಿಸಿವೆ.

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ; ಇಂದು ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ಸಾಧ್ಯತೆ

Crime News: ಐಪಿಎಲ್ ಬೆಟ್ಟಿಂಗ್ ದಾಳಿ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಸಾವು

Published On - 9:38 am, Wed, 13 April 22