ಆರೋಗ್ಯ ಇಲಾಖೆ ಸೂಚನೆ ನೀಡಿದರೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಳವಾಗಿದ್ದು, ಕುಡಿಯುವ ನೀರಿಗೆ ಚರಂಡಿ ನೀರು ಸೇರಿ ಕಾಲರಾ ಹೆಚ್ಚುತ್ತಿದೆ. ದಸ್ತಾಪುರ ಗ್ರಾಮದಲ್ಲಿ ಕಾಲರಾಕ್ಕೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಅಲ್ಲದೆ ಆನೂರು ಗ್ರಾಮದಲ್ಲಿ ಚಿಕನ್‌ಗುನ್ಯಾ, ಡೇಂಗ್ಯೂ ರೋಗ ಉಲ್ಬಣವಾಗಿದೆ.
ವಿಜಯನಗರ: ಕಲುಷಿತ ನೀರು ಸೇವಿಸಿ 6 ಜನರ ಸಾವು ಪ್ರಕರಣ; ಆತಂಕಗೊಂಡು ಗ್ರಾಮ ತೊರೆದ ಕೆಲವು ಕುಟುಂಬಗಳು
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಆತಂಕಗೊಂಡ ಗ್ರಾಮದ ಸದಸ್ಯರು, ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಇನ್ನು ಅಸ್ವಸ್ಥಗೊಂಡ ಕೆಲವರಿಗೆ ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಲ್ಲದೆ ಮಕರಬ್ಬಿ ಗ್ರಾಮದಲ್ಲಿ 7-8 ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ.
ಟಿವಿ9ನಲ್ಲಿ ವರದಿ ಪ್ರಸಾರ ಬಳಿಕ ಎಚ್ಚೆತ್ತ ಜಿಲ್ಲಾಡಳಿತ
ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಆರು ಜನರು ಸಾವು ಹಿನ್ನಲೆ, ಟಿವಿ9 ನಿರಂತರ ವರದಿಗೆ ಕೊನೆಗೂ ಜಿಲ್ಲಾಡಳಿತ ಎಚ್ಛೆತ್ತುಕೊಂಡಿದೆ. ಬಳ್ಳಾರಿಯಿಂದ ಮಕರಬ್ಬಿ ಗ್ರಾಮಕ್ಕೆ ಡಿಹೆಚ್ ಒ ಡಾ.ಜನಾರ್ಧನ ನೇತೃತ್ವದ ವೈದ್ಯಾಧಿಕಾರಿಗಳ ತಂಡ ತೆರಳಿದೆ.
ಇದನ್ನೂ ಓದಿ:
ವಿಜಯನಗರ: ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ; ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ
ವಿಜಯನಗರ: ಕಲುಷಿತ ನೀರು ಸೇವಿಸಿ ನೂರಾರು ಮಂದಿ ಅಸ್ವಸ್ಥ; ನಾಲ್ವರ ಸಾವು