AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಕೆಆರ್‌ಎಸ್‌ನಲ್ಲಿ, ತುಂಗಭದ್ರಾ ಡ್ಯಾಂ ವಾಟರ್ ಲೆವೆಲ್ ಇಲ್ಲಿದೆ

ಕರ್ನಾಟಕದ ಜಲಾಶಯಗಳ (ಅಕ್ಟೋಬರ್ 28) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಸಂಪೂರ್ಣ ಮಾಹಿತಿ ಇಲ್ಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟಿನ ಜಲಮಟ್ಟದಲ್ಲಿ ಇಳಿಕೆಯಾಗಿದೆ. ಇತ್ತ ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯಗಳಿಗೆ ಒಳಹರಿವು ಶೂನ್ಯಕ್ಕಿಳಿದಿದ್ದು, ಕಬಿನಿ ಅಣೆಕಟ್ಟಿನಲ್ಲಿ ಮಾತ್ರ ಅಲ್ಪ ಪ್ರಮಾಣದ ಏರಿಕೆ ದಾಖಲಾಗಿದೆ. ಪ್ರಮುಖ ಡ್ಯಾಮ್‌ಗಳ ಒಳಹರಿವು ಹಾಗೂ ಹೊರಹರಿವಿನ ವಿವರ ಇಲ್ಲಿದೆ.

ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಕೆಆರ್‌ಎಸ್‌ನಲ್ಲಿ, ತುಂಗಭದ್ರಾ ಡ್ಯಾಂ ವಾಟರ್ ಲೆವೆಲ್ ಇಲ್ಲಿದೆ
ತುಂಗಭದ್ರಾ ಜಲಾಶಯ
ಭಾವನಾ ಹೆಗಡೆ
|

Updated on: Oct 28, 2026 | 12:37 PM

Share

ಮುಖ್ಯಾಂಶಗಳು

  • ಕಾವೇರಿ ಜಲಾನಯನದಲ್ಲಿ ಮಳೆ ತಗ್ಗಿ ಕೆಆರ್‌ಎಸ್ ನೀರಿನ ಮಟ್ಟ ಕುಸಿದಿದೆ.
  • ಆಲಮಟ್ಟಿ ಹಾಗೂ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
  • ಕಬಿನಿ ಅಣೆಕಟ್ಟಿನ ನೀರಿನ ಮಟ್ಟದಲ್ಲಿ ಮಾತ್ರ ಅಲ್ಪ ಏರಿಕೆ ಕಂಡುಬಂದಿದೆ.

ಬೆಂಗಳೂರು, ಅಕ್ಟೋಬರ್ 28: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಆಲಮಟ್ಟಿ ಹಾಗೂ ತುಂಗಭದ್ರಾ ಜಲಾಶಯಗಳಲ್ಲಿ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಮಾತ್ರ ಅಲ್ಪ ಪ್ರಮಾಣದ ಏರಿಕೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ವಿವರಣೆ ಇಲ್ಲಿದೆ.

1. ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 516.09 ಮೀಟರ್
  • ಒಳಹರಿವು: ಇಲ್ಲ
  • ಹೊರಹರಿವು: 4,931 ಕ್ಯೂಸೆಕ್

2. ತುಂಗಭದ್ರಾ ಜಲಾಶಯ

  • ಗರಿಷ್ಠ ಮಟ್ಟ (F.R.L): 1633.00 ಅಡಿ
  • ಇಂದಿನ ನೀರಿನ ಮಟ್ಟ: 1613.243 ಅಡಿ
  • ಪ್ರಸ್ತುತ ಸಂಗ್ರಹ: 44.377 ಟಿಎಂಸಿ (ಒಟ್ಟು ಸಾಮರ್ಥ್ಯ: 105.788 ಟಿಎಂಸಿ)
  • ಒಳಹರಿವು: ಇಲ್ಲ
  • ಹೊರಹರಿವು: 9,605 ಕ್ಯೂಸೆಕ್ (ಒಟ್ಟು ನಾಲೆ ಮತ್ತು ನದೆಗೆ)

3. ಕೆ.ಆರ್.ಎಸ್ ಜಲಾಶಯ

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 104.28 ಅಡಿ
  • ಪ್ರಸ್ತುತ ಸಂಗ್ರಹ: 26.354 ಟಿಎಂಸಿ
  • ಒಳಹರಿವು: 2,486 ಕ್ಯೂಸೆಕ್
  • ಹೊರಹರಿವು: 3,339 ಕ್ಯೂಸೆಕ್

4. ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 19.52 ಟಿಎಂಸಿ
  • ಇಂದಿನ ನೀರಿನ ಮಟ್ಟ: 73.42 ಅಡಿ
  • ಪ್ರಸ್ತುತ ಸಂಗ್ರಹ: 13.42 ಟಿಎಂಸಿ (ಲಭ್ಯವಿರುವ ನೀರು: 3.61 ಟಿಎಂಸಿ)
  • ಒಳಹರಿವು: 2,128 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More