AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲ ಬೇಗೆಯ ನಡುವೆ ಮಳೆಯ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಎಚ್ಚರಿಕೆ; ಎಲ್ಲೆಲ್ಲಿ ಮಳೆಯಾಗಲಿದೆ?

ಕರ್ನಾಟಕದಲ್ಲಿ ಬೇಸಿಗೆಯ ತಾಪಮಾನ ದಾಖಲೆ ಮಟ್ಟಕ್ಕೆ ಏರಿದ್ದು, ಹಲವು ಜಿಲ್ಲೆಗಳಲ್ಲಿ ತೀವ್ರ ಬಿಸಿಲು ಮುಂದುವರಿದಿದೆ. ರಾಜಧಾನಿ ಬೆಂಗಳೂರಿನಲ್ಲಿ 35-37°C ತಾಪಮಾನ ನಿರೀಕ್ಷಿಸಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ. 40°C ಗಿಂತ ಹೆಚ್ಚಿನ ತಾಪಮಾನ ಇರುವ ಜಿಲ್ಲೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಬಿಸಿಲ ಬೇಗೆಯ ನಡುವೆ ಮಳೆಯ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಲ್ಲಿ 'ಹೀಟ್ ವೇವ್' ಎಚ್ಚರಿಕೆ; ಎಲ್ಲೆಲ್ಲಿ ಮಳೆಯಾಗಲಿದೆ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Apr 16, 2026 | 6:16 AM

Share

ಬೆಂಗಳೂರು,  ಏ.16: ಕರ್ನಾಟಕದಾದ್ಯಂತ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ತಾಪಮಾನವು ದಾಖಲೆ ಮಟ್ಟವನ್ನು ತಲುಪುತ್ತಿದೆ. ಇದರ ನಡುವೆಯೇ, ರಾಜ್ಯದ ಕೆಲವು ಭಾಗಗಳಲ್ಲಿ ವರುಣನ ಆಗಮನವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇಂದಿನ ಹವಾಮಾನ ವರದಿ ಹೇಗಿದೆ, ಯಾವೆಲ್ಲ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮಳೆ ಇದೆ ಎಂಬುದನ್ನು ಇಲ್ಲಿ ನೋಡುವ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುಡುವ ಬಿಸಲು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನವು 35°C ನಿಂದ 37°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ನಗರದಲ್ಲಿ ಮೋಡಕವಿದ ವಾತಾವರಣ ಕಂಡುಬಂದರೂ, ಸೆಖೆಯ ಪ್ರಮಾಣ ಹೆಚ್ಚಿರಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲೂ ಹಗುರ ಮಳೆಯ ಮುನ್ಸೂಚನೆ ಇದೆ.

ಇದನ್ನೂ ಓದಿ: ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು

ಪ್ರಮುಖ ಜಿಲ್ಲೆಗಳ ಅಂದಾಜು ತಾಪಮಾನ (ಗರಿಷ್ಠ/ಕನಿಷ್ಠ):

ಜಿಲ್ಲೆ ಗರಿಷ್ಠ ತಾಪಮಾನ ಕನಿಷ್ಠ ತಾಪಮಾನ
ಬೆಂಗಳೂರು 36°C 22°C
ಕಲಬುರಗಿ 42°C 26°C
ಮಂಗಳೂರು 34°C 25°C
ಶಿವಮೊಗ್ಗ 37°C 23°C
ಹುಬ್ಬಳ್ಳಿ-ಧಾರವಾಡ 39°C 24°C

ಲಬುರಗಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನವು 40°C ದಾಟುವ ಸಾಧ್ಯತೆಯಿದ್ದು, ಜನರಿಗೆ ಬಿಸಿಲಿನಿಂದ ಜಾಗರೂಕರಾಗಿರಲು ಸೂಚಿಸಲಾಗಿದೆ.ಮಂಗಳೂರು, ಉಡುಪಿ ಮತ್ತು ಕಾರವಾರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದ ಜೊತೆಗೆ ತೇವಾಂಶ ಭರಿತ ಹವಾಮಾನ ಇರಲಿದ್ದು, ಉಷ್ಣಾಂಶದ ಅನುಭವ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ 2026 ಮಂಡನೆ
ಲೋಕಸಭೆಯಲ್ಲಿ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ 2026 ಮಂಡನೆ
ಭವ್ಯಾ ಗೌಡಗೆ ತಂಗಿ ಎಂದು ಕರೆದು ಕಾಲೆಳೆದ ಹುಲಿ ಕಾರ್ತಿಕ್
ಭವ್ಯಾ ಗೌಡಗೆ ತಂಗಿ ಎಂದು ಕರೆದು ಕಾಲೆಳೆದ ಹುಲಿ ಕಾರ್ತಿಕ್
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ
ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ!
ಶಿವಗಂಗೆ ಬೆಟ್ಟದಲ್ಲಿ ಮಂಗನ ಚೇಷ್ಟೆ: ಪ್ರವಾಸಿಗರ ಮೊಬೈಲ್ ಕಸಿದು ಪುಂಡಾಟ!
ಬನ್ನೇರುಘಟ್ಟ ರಸ್ತೆಯಲ್ಲಿ ಹೈಡ್ರಾಮಾ: ಕಾರು ಚಾಲಕರ ನಡುವೆ ಇಲಿ-ಬೆಕ್ಕಿನಾಟ!
ಬನ್ನೇರುಘಟ್ಟ ರಸ್ತೆಯಲ್ಲಿ ಹೈಡ್ರಾಮಾ: ಕಾರು ಚಾಲಕರ ನಡುವೆ ಇಲಿ-ಬೆಕ್ಕಿನಾಟ!
ಶುಭ ಫಲಗಳ ನೀಡುವ ಮಂಗಳ ತ್ರಯೋದಶಿ ಇಂದು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಶುಭ ಫಲಗಳ ನೀಡುವ ಮಂಗಳ ತ್ರಯೋದಶಿ ಇಂದು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
‘ದೇವಿ’ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ವಿವರಿಸಿದ ನಟಿ ಭವ್ಯಾ
‘ದೇವಿ’ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ವಿವರಿಸಿದ ನಟಿ ಭವ್ಯಾ
NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು: ಸಿಟಿ ರವಿ ಏನಂದ್ರು ನೋಡಿ
NEET ಹೋರಾಟದ ವಿಡಿಯೋ ಅಲ್ಲ, ಬಿಹಾರ ಅಪಘಾತದ್ದು: ಸಿಟಿ ರವಿ ಏನಂದ್ರು ನೋಡಿ
ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ
ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ
ಬಾಗಲಕೋಟೆಯಲ್ಲಿ ಏಕಾಏಕಿ ಕಾರು ಸ್ಫೋಟ: ಬಾಂಬ್ ಶಂಕೆ, ಖಾಕಿ ತನಿಖೆ