AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ನಂಬಿ ಜೋಳ ಬೆಳೆದ ರೈತರು ಕಂಗಾಲು; ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರ ಮನವಿ

ಕಳೆದ ವರ್ಷದ ಮಳೆ ಮತ್ತು ಜೋಳದ ಬೆಲೆಯನ್ನು ನಂಬಿ ಈ ವರ್ಷವೂ ಜೋಳ ಬೆಳೆದ ಕೊಡಗಿನ ರೈತರು ಇದೀಗ ಕೈ ಸುಟ್ಟು ಕೊಂಡಿದ್ದಾರೆ. ಸಹಸ್ರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ, ಫಸಲು ಬಿಡದೆ ನಿಷ್ಪ್ರಯೋಜಕವಾಗಿದೆ. ಹಾಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ರೈತ ಇದೀಗ ಆಕಾಶ ನೋಡುವಂತಾಗಿದೆ.

ಮಳೆ ನಂಬಿ ಜೋಳ ಬೆಳೆದ ರೈತರು ಕಂಗಾಲು; ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರ ಮನವಿ
ಕೊಡಗಿನಲ್ಲಿ ಬೆಳೆ ನಾಶ
Gopal AS
| Edited By: ಕಿರಣ್ ಹನುಮಂತ್​ ಮಾದಾರ್|

Updated on: Oct 04, 2023 | 5:08 PM

Share

ಕೊಡಗು, ಅ.04: ಜಿಲ್ಲೆಯ ಸೋಮವಾರಪೇಟೆ(Somwarpet) ಮತ್ತು ಕುಶಾಲನಗರ (Kushalnagar) ಪ್ರದೇಶದಲ್ಲಿ ಜೋಳ ಬೆಳೆದ ರೈತರ ಪರಿಸ್ಥಿತಿ ಹೇಳತೀರದಂತಾಗಿದೆ. ಹೌದು, ಈ ಭಾಗದಲ್ಲಿ ಸುಮಾರು 4000 ಹೆಕ್ಟೇರ್ ಪ್ರದೇಶದಲ್ಲಿ ಜೋಳ(Maize) ಬೆಳೆಯಲಾಗಿದೆ. ಒಂದಷ್ಟು ಮಂದಿಗೆ ನೀರಿನ ಸೌಲಭ್ಯವಿದ್ದರೆ, ಬಹುತೇಕ ಮಂದಿ ಮಳೆಯನ್ನೇ ಆಶ್ರಯಿಸಿದ್ದಾರೆ. ಆದ್ರೆ, ಈ ಬಾರಿ ಆಗಸ್ಟ್​​ನಲ್ಲಿ ಮಳೆ ಇಲ್ಲದ್ದರಿಂದ ಇದೀಗ ಜೋಳ, ಫಸಲು ಬಿಟ್ಟಿಲ್ಲ. ಇದರಿಂದ ಈ ಭಾಗದಲ್ಲಿ ಶೇಕಡಾ 50 ರಷ್ಟು ಬೆಳೆ ನಾಶವಾಗಿದೆ ಎಂದು ರೈತರು ಅಳಲನ್ನು ತೋಡಿಕೊಂಡಿದ್ದಾರೆ.

ಸಾಮಾನ್ಯವಾಗಿ ಕೊಡಗಿನಲ್ಲಿ ಆಗಸ್ಟ್​ ತಿಂಗಳಲ್ಲಿ ಉತ್ತಮ ಮಳೆಯಾಗುತ್ತದೆ. ಇದೇ ಮಳೆಯಿಂದ ಕೃಷಿ ಚಟುವಟಿಕೆಗಳು ನಡೆಯುವುದಲ್ಲದೆ, ಅಂತರ್ಜಲವೂ ವೃದ್ಧಿಸುತ್ತದೆ. ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಉತ್ತಮ ಮಳೆಯಾಗಿತ್ತಲ್ಲದೆ, ಬೆಲೆಯೂ ಉತ್ತಮವಾಗಿ ರೈತರಿಗೆ ಸಾಕಷ್ಟು ಲಾಭ ಬಂದಿತ್ತು. ಆದ್ರೆ, ಈ ವರ್ಷ ಆಗಸ್ಟ್ ​ತಿಂಗಳಲ್ಲಿ ಮಳೆಯ ಸುಳಿವೇ ಇಲ್ಲ. ಹಾಗಾಗಿ ಜೋಳದ ಗಿಡಗಳಲ್ಲಿ ಫಸಲು ಬಿಟ್ಟಿಲ್ಲ. ಬಿಟ್ಟ ಫಸಲು ಕೂಡ ಬಲಿಯದೆ ಅಲ್ಲಲ್ಲಿ ಸುರುಟಿ ಹೋಗುತ್ತಿವೆ. ಇನ್ನೇನು ಇನ್ನು 20 ದಿನಗಳಲ್ಲಿ ಕಟಾವು ಮಾಡಬೇಕಿದೆ. ಆದ್ರೆ, ಕಾಯಿ ಬಲಿಯದೇ ಇರುವುದರಿಂದ ರೈತರಿಗೆ ಬಹಳಷ್ಟು ನಷ್ಟವಾಗಿದೆ.

ಇದನ್ನೂ ಓದಿ:Chamarajanagar News: ಹಳೆ ದ್ವೇಷಕ್ಕೆ ಟೊಮೆಟೊ ಬೆಳೆ ನಾಶ, ಮುಗಿಲು ಮುಟ್ಟಿದ ಅನ್ನದಾತನ ಆಕ್ರಂದನ

ಲಕ್ಷಾಂತರ ರೂ ಸಾಲ ಮಾಡಿ ಜೋಳ ಬೆಳೆದ ರೈತರೀಗ ಕಂಗಾಲು

ಹೌದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ ಪರಿಸ್ಥಿತಿ ಎದುರಾಗಿದೆ. ಕಷ್ಟಪಟ್ಟು ಬೆಳೆದ ಬೆಲೆ ಕೈಗೆ ಬಂದಿಲ್ಲ. ಅದರಂತೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಬೆಳೆಯೇನೋ ಬಂದಿದೆ. ಆದರೆ, ಒಳಗಡೆ ಜೋಳವೇ ಬಂದಿಲ್ಲ. ಸರ್ಕಾರವೇನೋ ಕುಶಾಲನಗರ, ಸೋಮವಾರಪೇಟೆ ತಾಲ್ಲೂಕನ್ನ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಅದರಂತೆ ಲಕ್ಷಾಂತರ ರೂ ಸಾಲ ಮಾಡಿ ಜೋಳ ಬೆಳೆದ ರೈತರು ಇದೀಗ ಆಕಾಶ ನೋಡುವಂತಾಗಿದೆ. ಇಲ್ಲಿ ಫಸಲು ನಾಶದ ಸೂಕ್ತ ಅಧ್ಯಯಯನ ನಡೆಸಿ ರೈತರಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Gopal AS
Gopal AS
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​