ಕೊಡಗಿನಲ್ಲಿ ಮದುವೆ ಸಮಾರಂಭದಲ್ಲಿ ಎಣ್ಣೆ ಪಾರ್ಟಿಗೆ ಗ್ರೀನ್ ಸಿಗ್ನಲ್

ಕೊಡಗಿನಲ್ಲಿ ಮದುವೆ ಸಮಾರಂಭಗಳಲ್ಲಿ ಮಧ್ಯ ಪೂರೈಕೆಗೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಇದರಿಂದ ಕೊಡವ ಸಮುದಾಯದ ಖುಷಿ ಹೆಚ್ಚಿಸಿದೆ.

ಕೊಡಗಿನಲ್ಲಿ ಮದುವೆ ಸಮಾರಂಭದಲ್ಲಿ ಎಣ್ಣೆ ಪಾರ್ಟಿಗೆ ಗ್ರೀನ್ ಸಿಗ್ನಲ್
ಸಾಂದರ್ಭಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
| Updated By: ರಶ್ಮಿ ಕಲ್ಲಕಟ್ಟ

Updated on:Apr 17, 2023 | 10:25 AM

ಕೊಡಗು: ವಿಧಾನಸಭೆ ಚುನಾವಣೆ ನೀತಿ ಸಂಹಿತೆ (Election code of conduct) ಇದ್ದರೂ ಸಹ ಕೊಡಗಿನ ಖಾಸಗಿ ಸಮಾರಂಭಗಳಲ್ಲಿ ಮದ್ಯ (alcohol)  ಪೂರೈಕೆಗೆ ಅನುಮತಿ ನೀಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಮದ್ಯ ಪೂರೈಕೆಗೆ ಅನುಮತಿ ನೀಡುವಂತೆ ಅಬಕಾರಿ ಇಲಾಖೆಗೆ ರಾಜ್ಯ ಜಂಟಿ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ. ಇದರಿಂದ ಕೊಡವರಿಗೆ ಸಂತೋಷನ್ನುಂಟು ಮಾಡಿದೆ. ಕೊಡವರ ಮದುವೆಗಳಲ್ಲಿ ಮುಕ್ತವಾದ ಬಾರನ್ನೇ ತೆರೆದಿರಲಾಗುತ್ತದೆ. ಮದುವೆ ಸಮಾರಂಭದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಪೆಗ್ಗು ಹಾಕಿಕೊಂಡು ಡಾನ್ಸ್​ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇದಕ್ಕೆಲ್ಲ ಬ್ರೇಕ್ ಹಾಕಿತ್ತು. ಮದುವೆ, ಸಮಾರಂಭಗಳಲ್ಲಿ ಮದ್ಯದ ವ್ಯವಸ್ಥೆ ಮಾಡಬಾರದು ಎಂದು ಚುನಾವಣೆ (Election) ಆಯೋಗ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಮದುವೆ ಇಟ್ಟುಕೊಂಡವರು ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸಂಪ್ರದಾಯಕ್ಕೆ ಅಡ್ಡಿ ಮಾಡಬಾರದು ಎಂದು ಕೊಡವ ಸಮಾಜ , ಗೌಡ ಸಮಾಜ ಮನವಿ ಮಾಡಿದ್ದವು. ಮದ್ವೆಗಳಲ್ಲಿ ಮದ್ಯ ಪೂರೈಕೆ ನಿರ್ಬಂಧ ಆದೇಶ ಹಿಂಪಡೆಯುವಂತೆ ಚುನಾವಣಾ ಆಯೋಗ ಮನವಿ ಮಾಡಿದ್ದರು. ಇದರಿಂದ ಇದೀಗ ನಿರ್ಬಂಧ ಸಡಿಲಿಸಿ ಆದೇಶ ಹೊರಡಿಸಲಾಗಿದೆ.

ಕೊಡಗು ಅಂದ್ರೆ ಅಲ್ಲಿ ಒಂದಲ್ಲೊಂದು ವಿಶೇಷ. ವೈಶಿಷ್ಟ್ಯ ಕಾಣಸಿಗುತ್ತದೆ. ಇಲ್ಲಿಯ ಆಚಾರ-ವಿಚಾರಗಳು ಕೂಡ ವಿಭಿನ್ನ. ಸದ್ಯ ವಿವಾಹವಾಗಲು ಚೈತ್ರ ಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಇದೀಗ ಮದ್ವೆಗಳಲ್ಲಿ ಮದ್ಯ ಪಾರ್ಟಿಗೂ ಅವಕಾಶ ಸಿಕ್ಕಿದ್ದು, ಕೊಡವರ ಖುಷಿ ಮತ್ತಷ್ಟು ಹೆಚ್ಚಿಸಿದೆ.

ಕೊಡಗಿನಲ್ಲಿ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಲ್ಲಿ ಮುಕ್ತ ಬಾರ್ಗಳನ್ನು ತೆರೆಯುವುದಕ್ಕೆ ಅವಕಾಶ ಇಲ್ಲ. ಮುಕ್ತ ಬಾರ್ ತೆರೆಯಲು ಅವಕಾಶ ನೀಡಿದರೆ ಅದನ್ನು ದುರುಪಯೋಗ ಪಡಿಸಿಕೊಂಡು ಮತದಾರರಿಗೆ ಮದ್ಯ ಹಂಚಿಕೆ ಮಾಡುವ ಸಾಧ್ಯತೆ ಇರಬಹುದು ಎಂದು ಚುನಾವಣಾ ಆಯೋಗ ಅದಕ್ಕೆ ಕಡಿವಾಣ ಹಾಕಿತ್ತು.

ಈ ಮೊದಲು ಮದುವೆ ಸೇರಿದಂತೆ ಇತರೆ ಸಮಾರಂಭಗಳಲ್ಲಿ ಮುಕ್ತ ಬಾರ್ ತೆರೆಯುವುದಕ್ಕೆ 11.500 ರೂಪಾಯಿ ಕಟ್ಟಿಸಿಕೊಂಡು ಒಂದು ದಿನದ ಮಟ್ಟಿಗೆ ಬಾರ್ ತೆರೆಯುವುದಕ್ಕೆ ಅವಕಾಶ ನೀಡಲಾಗುತಿತ್ತು. ಆ ಶುಲ್ಕವನ್ನು ಕಟ್ಟಿ ಸಮಾರಂಭಗಳಿಗೆ ಬರುವ ತಮ್ಮ ಎಲ್ಲಾ ಸಂಬಂಧಿಕರಿಗೆ ಪ್ರೀತಿಯಿಂದ ಮದ್ಯದ ವ್ಯವಸ್ಥೆ ಮಾಡುತ್ತಿದ್ದರು. ಇದರಿಂದ ಸಂಬಂಧಿಕರು ಮದುವೆ ಮತ್ತಿತರ ಸಮಾರಂಭಗಳಲ್ಲಿ ತಮಗಿಷ್ಟದ ಮದ್ಯಗಳನ್ನು ಸೇವಿಸಿ ಎಂಜಾಯ್ ಮಾಡುತ್ತಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿಯೂ ಚುನಾವಣಾಧಿಕಾರಿಗಳು ಹಿಂದಿನಂತೆ 11.500 ರೂಪಾಯಿ ಸಂದಾಯ ಮಾಡಿ ತಾತ್ಕಾಲಿಕ ಲೈಸೆನ್ಸ್ ಪಡೆದುಕೊಳ್ಳಬಹುದು ಎಂದು ಹೇಳಿದ್ದರು.

ಇಷ್ಟು ಸಮಯ ಚುನಾವಣೆಗಳಲ್ಲಿ ಈ ರೀತಿಯ ಮಾನದಂಡಗಳು ಹಾಕಿರಲ್ಲಿಲ್ಲ. ಆದರೆ ಈ ಬಾರಿ ಮದುವೆ ಕಾರ್ಯಕ್ರಮಗಳಿಗೆ ಮದ್ಯದ ವ್ಯವಸ್ಥೆಗಳನ್ನು ನಿಬರ್ಂಧ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗುವುದಿಲ್ಲ. ಕೊಡಗಿನಲ್ಲಿ ಮದ್ಯ ಸೇವನೆ ಮಾಡುವುದು ಸಂಸ್ಕøತಿಯ ಒಂದು ಭಾಗವಾಗಿದೆ. ಇದು ನಮ್ಮ ಸಂಸ್ಕøತಿಯನ್ನು ಕಸಿದುಕೊಳ್ಳುವ ಕೆಲಸ ಆಗಿದೆ ಎಂದು ಕೊಡಗಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಕಲ್ಯಾಣ ಮಂಟಪ ಹಾಗೂ ಇತರೆ ಸ್ಥಳದಲ್ಲಿ ಮದುವೆ ನಡೆಯುವ ಸಂದರ್ಭದಲ್ಲಿ ಮದುವೆ ಹಾಲ್‍ಗಳು ಈಗಾಗಲೇ ಬುಕ್ ಆಗಿದೆ. ಕೊಡಗಿನ ಮದುವೆ ಸಮಾರಂಭಗಳಲ್ಲಿ ದೂರ ದೂರಗಳಿಂದ ಇರುವ ಬಂಧು ಮಿತ್ರರು ಒಂದೆಡೆ ಸೇರಿ ಮಾತು ಕಥೆ ಹರಟೆ ಕೊಡವ ನೃತ್ಯಗಳನ್ನು ಮಾಡಿಕೊಂಡು ಸಂಭ್ರಮದಿಂದ ಇರುತ್ತವೆ. ಆದರೆ ಮದ್ಯವೇ ಇಲ್ಲ ಎಂದರೆ ದೂರದ ಊರಿನಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಿಗೆ ಮದುವೆಯಲ್ಲಿ ಅಷ್ಟು ಖುಷಿ ಇರುವುದಿಲ್ಲ. ಹೀಗಾಗಿ ಕೊಡಗು ಜಿಲ್ಲೆಗೆ ಚುನಾವಣಾ ಆಯೋಗದವರು ಹಾಗೂ ಅಬಕಾರಿ ಇಲಾಖೆಯವರು ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಬೇಕು. ಚುನಾವಣಾ ಆಯೋಗದವರು ಈ ಬಗ್ಗೆ ಚಿಂತನೆ ನಡೆಸಿ ಮದುವೆ ಸಮಾರಂಭಗಳಿಗೆ ಮದ್ಯ ಕೊಡಲು ಅವಕಾಶ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದರು.

ಮತ್ತಷ್ಟು ಕೊಡಗು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:11 am, Mon, 17 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ