ಮಡಿಕೇರಿಯಲ್ಲಿ ಮಣ್ಣಿನ ದಿಬ್ಬ ಕುಸಿತ; ಮೂವರು ಕಾರ್ಮಿಕರ ಸಾವು
ಪ್ರಜ್ಞಾಹೀನ ಸ್ಥಿತಿಯಲ್ಲಿಯಲ್ಲಿದ್ದ ಕಾರ್ಮಿಕರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇದೀಗ ಕಾರ್ಮಿಕರ ಸಾವನ್ನು ಜಿಲ್ಲಾಸ್ಪತ್ರೆ ವೈದ್ಯರು ದೃಢೀಕರಿಸಿದ್ದಾರೆ. ಇನ್ನು ಐವರ ಪೈಕಿ ಇಬ್ಬರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಎಸ್ಪಿ ಕೆ.ರಾಮರಾಜನ್ ಭೇಟಿ ನೀಡಿದ್ದಾರೆ.
ಕೊಡಗು, ಅ.31: ಜಿಲ್ಲೆಯ ಮಡಿಕೇರಿ(Madikeri)ಯ ರೆಡ್ಕ್ರಾಸ್ ಸಭಾಂಗಣದ ಬಳಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ಹುಬ್ಬಳ್ಳಿ ಮೂಲದ ಬಸವ, ಲಿಂಗಪ್ಪ ಹಾಗೂ ಆನಂದ ಮೃತ ರ್ದುದೈವಿಗಳು. ಇನ್ನು ಇವರು ಮಡಿಕೇರಿಯ ರೆಡ್ಕ್ರಾಸ್ ಸಭಾಂಗಣ ಬಳಿ ಮಣ್ಣು ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಏಕಾಎಕಿ ಗುಡ್ಡ ಕುಸಿದು ಈ ದುರ್ಘಟನೆ ನಡೆದಿದೆ. ಕೂಡಲೇ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ, ಮಣ್ಣಿನಡಿಯಲ್ಲಿ ಸಿಲುಕಿದ್ದ ಐದು ಕಾರ್ಮಿಕರ ಪೈಕಿ ಮೂವರು ಮಣ್ಣಿನಡಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ಕಾರ್ಮಿಕರ ಸಾವನ್ನು ದೃಢೀಕರಿಸಿದ ಜಿಲ್ಲಾಸ್ಪತ್ರೆ ವೈದ್ಯರು
ಇನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿಯಲ್ಲಿದ್ದ ಕಾರ್ಮಿಕರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇದೀಗ ಕಾರ್ಮಿಕರ ಸಾವನ್ನು ಜಿಲ್ಲಾಸ್ಪತ್ರೆ ವೈದ್ಯರು ದೃಢೀಕರಿಸಿದ್ದಾರೆ. ಇನ್ನು ಐವರ ಪೈಕಿ ಇಬ್ಬರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಎಸ್ಪಿ ಕೆ.ರಾಮರಾಜನ್ ಮತ್ತು ಶಾಸಕ ಡಾ.ಮಂತರ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಡಿಕೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.
ಇದನ್ನೂ ಓದಿ:ಚಾಮರಾಜನಗರ: ಮಡಹಳ್ಳಿ ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣ; ಒಂದು ವರ್ಷದ ಬಳಿಕ ಆರೋಪಿಗಳ ಬಂಧನ
ದೇವಸ್ಥಾನದ ಹುಂಡಿಯಲ್ಲಿದ್ದ ಹಣ ದೋಚಿ ಪರಾರಿ
ಯಾದಗಿರಿ: ವಡಗೇರ ತಾಲೂಕಿನ ಹಾಲಗೇರಾ ಗ್ರಾಮದ ಎಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾದ ಘಟನೆ ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಸುಕಿನ ಜಾವ ದೇವಸ್ಥಾನಕ್ಕೆ ಎಂಟ್ರಿಕೊಟ್ಟ ಖದೀಮರು ಹುಂಡಿ ಬೀಗ ಮುರಿದು ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Tue, 31 October 23