AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್‌ನಿಂದ ಬಂದಿದ್ದ ದಂಪತಿ ಕೊಡಗಿನಲ್ಲೇ ಲಾಕ್‌: ಅಲ್ಲಿ ಮಕ್ಕಳು, ಇಲ್ಲಿ ಪೋಷಕರು!

ದೀರ್ಘ ರಜೆಯ ಮೇಲೆ ತಮ್ಮ ಮಕ್ಕಳನ್ನ ಬಿಟ್ಟು ಇರಾನ್‌ನಿಂದ (Iran) ಬಂದಿದ್ದ ದಂಪತಿ ಕೊಡಗಿನಲ್ಲೇ ಲಾಕ್‌ ಆಗಿದ್ದಾರೆ. ವಿಮಾನ ಸೇವೆ ರದ್ದಾದ ಕಾರಣ ಇರಾನ್‌ಗೆ ಮರಳಲಾಗದೇ ಕೊಡಗಿನಲ್ಲೇ ಉಳಿಯುವಂತಾಗಿದೆ. ಮೂಲತಃ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಸಮೀಪ ಕಾಂತೂರು ಗ್ರಾಮದ ನಿವಾಸಿಯಾಗಿದ್ದರೂ ಸಹ ನೆಲೆಸಿರುವುದು ಮಾತ್ರ ದೂರದ ಯುದ್ಧಪೀಡಿ ಇರಾನ್ ದೇಶದಲ್ಲಿ. ಮತ್ತೊಂದು ಕಡೆ ದಂಪತಿಯ ಪಾಸ್‌ಪೋರ್ಟ್‌ ಅವಧಿ ಮುಕ್ತಾಗೊಳ್ಳುವ ಹಂತದಲ್ಲಿದ್ದು, ಮತ್ತೆ ಇರಾನ್‌ಗೆ ಹೋಗಲು ಸಾಧ್ಯವಾಗುತ್ತೋ ಇಲ್ವೋ ಎನ್ನುವ ಆತಂಕದಲ್ಲಿದ್ದಾರೆ.

ಇರಾನ್‌ನಿಂದ ಬಂದಿದ್ದ ದಂಪತಿ ಕೊಡಗಿನಲ್ಲೇ ಲಾಕ್‌: ಅಲ್ಲಿ ಮಕ್ಕಳು, ಇಲ್ಲಿ ಪೋಷಕರು!
ನವೀನಾ-ನಾದರ್‌
Gopal AS
| Edited By: |

Updated on: Apr 06, 2026 | 7:18 PM

Share

ಮಡಿಕೇರಿ, (ಏಪ್ರಿಲ್ 06):  ಯುದ್ಧ ಪರಿಸ್ಥಿತಿಯಿಂದಾಗಿ ದಂಪತಿ ಇರಾನ್‌ಗೆ (Iran) ಮರಳಲಾಗದೆ ಕೊಡಗು (Kodagu) ಜಿಲ್ಲೆಯ ಮೂರ್ನಾಡು ಸಮೀಪದ ಕಾಂತೂರಿನಲ್ಲಿ ಪರಿತಪಿಸುವಂತಾಗಿದೆ. ಕಾಂತೂರು ನಿವಾಸಿ ಪತ್ನಿ ನವೀನಾ ಹಾಗೂ ಇರಾನ್ ಮೂಲದ ಪತಿ ನಾದರ್ ಕೊಡಗಿನಲ್ಲಿಯೇ ಸಿಲುಕಿರುವ ದಂಪತಿ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಹಲವು ದೇಶಗಳ ವಾಯು ಪ್ರದೇಶ ಬಂದ್ ಆಗಿದ್ದು, ವಿಮಾನ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ದಂಪತಿ ಕೊಡಗಿನಲ್ಲಿಯೇ ಉಳಿಯುವಂತಾಗಿದೆ.

ಕೊಡಗು ಮೂಲದ ನವೀನಾ, 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಆ ವೇಳೆ ಇರಾನ್‌ನ ನಾದರ್‌ ಅವರೊಂದಿಗೆ ಪರಿಚಯವಾಗಿದ್ದು, ಬಳಿಕ ಪ್ರೀತಿಸಿ ವಿವಾಹವಾದ್ದರು. ನಂತರ ದಂಪತಿ ಇರಾನ್‌ನ ಬೋಜ್‌ನೂರ್‌ ಪ್ರದೇಶದಲ್ಲಿ ನೆಲೆಸಿತ್ತು. ಆದ್ರೆ, ಇದೀಗ ದೀರ್ಘ ರಜೆಗೆಂದು ಇರಾನ್​ ನಿಂದ ತವರುಮನೆ ಕೊಡಗಿಗೆ ಆಗಮಿಸಿದ್ದು, ಇಲ್ಲೇ ಸಿಲುಕಿ ಪರದಾಡುವಂತಾಗಿದೆ.

ಇದನ್ನೂ ನೋಡಿ: ಬಾವಿಗೆ ಬಿದ್ದು 3 ದಿನ ಬಳಿಕ ಬದುಕಿ ಬಂದ ವೃದ್ಧ: ಗ್ಯಾಸ್ ಸಿಲಿಂಡರ್ OTP ವ್ಯಕ್ತಿಯ ಜೀವ ಉಳಿಸಿದ್ಹೇಗೆ ಗೊತ್ತಾ?

ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಸಿವಿಲ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ (ವಾಸ್ತುಶಿಲ್ಪಿ) ಆಗಿದ್ದಾರೆ. ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್‌ಗಳನ್ನ ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ದಂಪತಿ, ಮಾರ್ಚ್‌ನಲ್ಲಿ ಮರಳಿ ಇರಾನ್‌ಗೆ ತೆರಳುತ್ತಿದ್ದರು. ಈ ಬಾರಿಯೂ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದು, ಮಾರ್ಚ್ 16 ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ನ ಬೋಜ್‌ನೂರ್‌ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕ–ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದಾಯಿತು. ನಂತರ ಏಪ್ರಿಲ್ 15 ರಂದು ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರು, ಆ ವಿಮಾನವೂ ರದ್ದಾಗಿದೆ. ಇದರಿಂದ ದಂಪತಿ ಇದೀಗ ಕೊಡಗಿನಲೇ ಉಳಿಯುವಂತಾಗಿದೆ.

ಇನ್ನೂ ನವೀನಾ ಪತಿ ನಾದೀರ್ ಪಾಸ್‌ಪೋರ್ಟ್‌ ಅವಧಿ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಅದರೊಳಗೆ ಇವರು ಇರಾನ್ ತೆರಳಬೇಕಿದೆ. ಇವರಿಬ್ಬರ ಇಬ್ಬರು ಮಕ್ಕಳು ಇರಾನ್ ನಲ್ಲೇ ಉಳಿದುಕೊಂಡಿದ್ದು, ಸಂಪರ್ಕ ಸಾಧ್ಯವಾಗುತ್ತಿಲ್ಲ. ಇಂಟರ್ನೆಟ್ ಸ್ಥಗಿತವಾಗಿರುವುದಿರಂದ ಅವರಾಗಿಯೇ ಇವರಿಗೆ ಮೆಸೇಜ್ ಮಾಡುವವರೆಗೂ ಸಂಪರ್ಕ ಸಾಧ್ಯವಾಗುವುದಿಲ್ಲ. ಇನ್ನು ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿದ ನಾದೀರ್ ಅಜೀಜಿ, ನನ್ನ ಪ್ರೀತಿಯ ದೇಶ ಮತ್ತು ಜನರ ಬಗ್ಗೆ ಬಹಳ ಚಿಂತೆಯಾಗಿದೆ. ಇಂತಹ ಸಂದರ್ಭದಲ್ಲಿ ನಾವು ಅಲ್ಲಿರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
100 ರೂ ಕೇಳಿದ ವೈಭವ್, 200 ರೂ ನೀಡಿದ ಫ್ಯಾನ್
100 ರೂ ಕೇಳಿದ ವೈಭವ್, 200 ರೂ ನೀಡಿದ ಫ್ಯಾನ್
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ