ಕೋಲಾರ: ಹೊಲದಲ್ಲಿ ವಾಮಾಚಾರ; ಮೂವರು ಗ್ರಾಮಸ್ಥರು ಪೊಲೀಸ್ ವಶಕ್ಕೆ
ಕೋಲಾರ ತಾಲ್ಲೂಕು ಅಣ್ಣೇನಹಳ್ಳಿ ಗ್ರಾಮದ ಗಂಗಪ್ಪ ಎಂಬುವವರಿಗೆ ಸೇರಿದ ಭೂಮಿಯಲ್ಲಿ ವಾಮಾಚಾರ ಮಾಡುವಾಗ ಗ್ರಾಮಸ್ಥರಿಗೆ ಮೂವರು ಸಿಕ್ಕಿಬಿದ್ದಿದ್ದು, ಚಿಕ್ಕಣ್ಣ, ಶ್ರೀನಿವಾಸ್, ಮೃತ್ಯುಂಜಯ ಎಂಬುವವರನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲಾರ: ಹೊಲದಲ್ಲಿ ವಾಮಾಚಾರ ಮಾಡುತ್ತಿದ್ದ ಮೂವರು ಗ್ರಾಮಸ್ಥರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ತಾಲ್ಲೂಕು ಅಣ್ಣೇನಹಳ್ಳಿ ಗ್ರಾಮದ ಗಂಗಪ್ಪ ಎಂಬುವವರಿಗೆ ಸೇರಿದ ಭೂಮಿಯಲ್ಲಿ ವಾಮಾಚಾರ ಮಾಡುವಾಗ ಗ್ರಾಮಸ್ಥರಿಗೆ ಮೂವರು ಸಿಕ್ಕಿಬಿದ್ದಿದ್ದು, ಚಿಕ್ಕಣ್ಣ, ಶ್ರೀನಿವಾಸ್, ಮೃತ್ಯುಂಜಯ ಎಂಬುವವರನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಹಿಂದೆ ರಾಮನಗದ ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ ಮಾಡಿ ವಾಮಾಚಾರಕ್ಕೆ ಯತ್ನಿದ್ದರು ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ ಮಾಡುತ್ತಿದ್ದು ವಾಮಾಚಾರ ನಡೆಸಲಾಗುತ್ತಿದೆ ಎಂಬ ಶಂಕೆ ಮೇಲೆ 13 ಮಂದಿಯನ್ನು ಸಾತನೂರು ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪದ ಭೂಹಳ್ಳಿಯಲ್ಲಿ ನಡೆದಿತ್ತು. ಪೂಜಾರಿ, ಮನೆ ಮಾಲೀಕ ಸೇರಿದಂತೆ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ 6 ವರ್ಷದ ಮಗು ಕೂಡ ಇದೆ.
ಭೂಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತನ ಮನೆಯೊಂದರಲ್ಲಿ ಕಳೆದ ಕೆಲವು ವರ್ಷಗಳಿಂದ ಪೂಜೆ ನಡೆಯುತ್ತಿತ್ತಂತೆ. ಅದೇ ರೀತಿ ಪೂಜೆ ನಡೆದಿದೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಆ ಮನೆಯಲ್ಲಿ ನಿಧಿ ಆಸೆಗಾಗಿ ವಾಮಾಚಾರ ಮಾಡಲಾಗುತ್ತಿದೆ ಎಂಬ ಶಂಕೆಯೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ರಾತ್ರೋರಾತ್ರಿ ದಾಳಿ ನಡೆಸಿದ ಪೊಲೀಸರು 13 ಮಂದಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಇನ್ನು ವಶಕ್ಕೆ ಪಡೆದವರಲ್ಲಿ 8 ಮಂದಿ ಹೊರ ಜಿಲ್ಲೆಯವರು ಎನ್ನಲಾಗುತ್ತಿದೆ. ವಿಚಾರಣೆ ವೇಳೆ ನಾವು ತಮಿಳುನಾಡಿನಿಂದ ಬಂದಿದ್ದು, ನಮಗೆ ಜಮೀನು ವಿಚಾರದಲ್ಲಿ ಸಮಸ್ಯೆ ಇತ್ತು ಹಾಗಾಗಿ ಪೂಜೆ ಮಾಡಿಸುತ್ತಿದ್ದೇವೆ ಎಂದು ಪೊಲೀಸರ ಬಳಿ ತಿಳಿಸಿದ್ದಾರೆ. ಆದರೆ ವಶಕ್ಕೆ ಪಡೆದವರಲ್ಲಿ ಮಗುವೂ ಇರುವ ಕಾರಣ ಮಗುವನ್ನು ಬಲಿ ನೀಡಲು ಕರೆತರಲಾಗಿದೆ ಎಂಬ ಅನುಮಾನ ಹುಟ್ಟುಕೊಂಡಿದೆ. ಅಲ್ಲದೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಗುಂಡಿಗಳು ಪತ್ತೆಯಾಗಿವೆ. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮನೆಯೊಂದರಲ್ಲಿ ಗುಂಡಿ ತೋಡಿ ಪೂಜೆ; ವಾಮಾಚಾರದ ಶಂಕೆ, 6 ವರ್ಷದ ಮಗು ಸೇರಿ 13 ಮಂದಿ ವಶಕ್ಕೆ
ನಿಧಿ ಆಸೆಗಾಗಿ ಹೊಲದಲ್ಲಿ ವಾಮಾಚಾರ; ಮೇಕೆ ಮತ್ತು ನಾಗರ ಹಾವು ಬಲಿ ಕೊಟ್ಟ ಕಿಡಿಗೇಡಿಗಳು, ಜನರಲ್ಲಿ ಆತಂಕ