ರಾಜಕಾರಣಿಗಳ ಅಚ್ಚುಮೆಚ್ಚಿನ ದೈವ, ಕೋಲಾರದ ಕುರುಡುಮಲೆ ಗಣಪತಿಯ ಶಕ್ತಿ ಸಾಮಾನ್ಯದ್ದಲ್ಲ
ಕುರುಡುಮಲೆ ಗಣೇಶ ದೇವಾಲಯವು ಕರ್ನಾಟಕದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ, ಇದು ಭವ್ಯವಾದ ಏಕಶಿಲೆಯ ವಿಗ್ರಹ, ಐತಿಹಾಸಿಕ ಕಲ್ಲಿನ ವಾಸ್ತುಶಿಲ್ಪ ಮತ್ತು ಹಿಂದೂ ಪುರಾಣಗಳೊಂದಿಗೆ ಆಳವಾದ ಸಂಬಂಧಕ್ಕೆ ಹೆಸರುವಾಸಿಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ಬಳಿಯ ಕುರುಡುಮಲೆಯಲ್ಲಿರುವ ಈ ದೇವಾಲಯವು ಜೀವನದ ಪ್ರಮುಖ ಹಂತಗಳನ್ನು ಪ್ರಾರಂಭಿಸುವ ಮೊದಲು ಗಣೇಶನ ಆಶೀರ್ವಾದವನ್ನು ಬಯಸುವ ಭಕ್ತರನ್ನು ಆಕರ್ಷಿಸುತ್ತದೆ. ಹಾಗಾದ್ರೆ, ಕುರುಡುಮಲೆ ಗಣೇಶ ದೇವಸ್ಥಾನದ ಇತಿಹಾಸ, ಮಹತ್ವವೇನು? ರಾಜಕಾರಣಿಗಳ ಅಚ್ಚುಮಿಚ್ಚಿನ ವಿನಾಯಕ ಅನ್ನಿಸಿಕೊಂಡಿದ್ಯಾಕೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಕೋಲಾರ, (ಸೆಪ್ಟೆಂಬರ್ 13): ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕುರುಡುಮಲೆ ಗ್ರಾಮದ ಕೂಟಾದ್ರಿ ಪರ್ವತದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ದವಾದ ಗಣಪತಿ ದೇವಾಲಯವಿದು. ಕೋಲಾರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಕುರುಡುಮಲೆ ಗ್ರಾಮದಲ್ಲಿ ಗಣೇಶನಿಗೆ ಐತಿಹಾಸಿಕ ಹಿನ್ನೆಲೆ ಇದೆ. ಹೀಗಾಗಿ ಇಂದಿಗೂ ಕೂಡಾ ಚುನಾವಣೆಗಳು ಬಂದ್ರೆ ರಾಜಕೀಯ ನಾಯಕರುಗಳು ಇಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿ ಒಂದೆಜ್ಜೆ ಮುಂದಿಡ್ತಾರೆ. ಈ ಮಹಿಮೆ ಯುಳ್ಳ ಕುರುಡುಮಲೆಯ ಗಣಪತಿಯನ್ನು ಭಕ್ತಿಯಿಂದ ಪೂಜಿಸಿದ್ರೆ ಹರಸಿಕೊಂಡಿದ್ದು ನೆರವೇರುತ್ತೆ ಅನ್ನೋದು ರಾಜಕಾರಣಿಗಳು ನಂಬಿಕೆಯಾಗಿದೆ.
ಕುರುಡುಮಲೆ ಗಣೇಶನ ಹಿನ್ನೆಲೆ
ತ್ರಿಪುರಾಸುರನ ಸಂಹಾರವಾದ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಅಂದರೆ ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿಸಲಾದ ಗಣಪ. ನಂತರ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಸುಂದರ ಶಿಲ್ಪಕಲೆಯನ್ನೊಳಗೊಂಡ ದೇವಾಲಯವನ್ನು ನಿರ್ಮಾಣ ಮಾಡಲಾಯಿತು. ಜಕಣಾ ಚಾರಿಯಿಂದ ಸುಂದರ ಶಿಲ್ಪಕಲೆಯನ್ನೊಳಗೊಂದ ದೇವಾಲಯವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಗಣೇಶನಿಗೆ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನ ಮೇಲೆ ಯುದ್ದಕ್ಕೆ ಹೋಗುವ ಮುನ್ನ ಈ ಗಣೇಶನಿಗೆ ಪೂಜೆ ಸಲ್ಲಿಸಿದ್ದನೆಂಬ ಪ್ರತೀತಿ ಇದೆ.
ಈ ಗಣೇಶನಿಗೆ ಪೂಜೆ ಸಲ್ಲಿಸಿದ್ದರಿಂದಲೇ ಶ್ರೀರಾಮಚಂದ್ರನಿಗೆ ಯುದ್ದದಲ್ಲಿ ಯಶಸ್ಸು ಸಿಕ್ಕಿದ್ದು ಎಂದು ಹೇಳಲಾಗುತ್ತದೆ. ದ್ವಾಪರಯುಗದಲ್ಲಿ ಪಾಂಡವರು ಕೌರವರ ಮೇಲೆ ಯುದ್ದಕ್ಕೆ ಹೋಗುವ ಮುನ್ನ ಈ ಗಣೇಶನಿಗೆ ಪೂಜೆ ಸಲ್ಲಿಸಿದ್ದರು, ಹಾಗೂ ಚೌತಿಯ ಚಂದ್ರನನ್ನು ನೋಡಿದ ಶ್ರೀಕೃಷ್ಣನಿಗೆ ಶಮಂತಕಮಣಿಯ ಕದ್ದನೆಂಬ ಅಪವಾದವನ್ನು ಈ ಗಣೇಶನ ದರ್ಶನದಿಂದಲೇ ಬಗೆಹರಿಸಿ ಕೊಂಡನೆಂಬ ಅನ್ನೋದು ಪುರಾಣಗಳಲ್ಲಿದೆ. ಅದೇ ರೀತಿ ಈಗಲೂ ಚೌತಿಯ ಚಂದ್ರನ ದರ್ಶನದಿಂದಾಗುವ ಪಾಪ ಪರಿಹಾರವಾಗುತ್ತದೆ, ಎನ್ನಲಾಗುತ್ತದೆ ಜೊತೆಗೆ ನಾಗದೋಷಗಳು ಇಷ್ಟಾರ್ಥಗಳು ಇಲ್ಲಿ ಬಗೆಹರಿಯುತ್ತವೆ ಅನ್ನೋದಕ್ಕೆ ಇಂದಿಗೂ ಅದೆಷ್ಟೋ ಜೀವಂತ ನಿದರ್ಶನಗಳಿವೆ. ಗಣೇಶ ಚತುರ್ಥಿಯಂದು ಐದು ದಿನಗಳ ಕಾಲ ಬ್ರಹ್ಮರಥೋತ್ಸವ ಗಳು, ಪುಷ್ಪಪಲ್ಲಕ್ಕಿ, ಲಕ್ಷ್ಮೀಗಣಪತಿ ಉತ್ಸವಗಳು ನಡೆಯುತ್ತವೆ. ಹಾಗಾಗಿನೆ ಇಲ್ಲಿಗೆ ಈ ವಿಶೇಷದಿನದಲ್ಲಿ ಗಣೇಶನ ದರ್ಶನಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಬರ್ತಾರೆ.
ರಾಜಕಾರಣಿಗಳ ಅಚ್ಚುಮೆಚ್ಚಿನ ವಿನಾಯಕ
ಇಂದಿಗೂ ರಾಜಕೀಯ ನಾಯಕರ ದಂಡೇ ಈ ಗಣೇಶನಿಗೆ ಪರ್ಮನೆಂಟ್ ಭಕ್ತರು, ಎಸ್.ಎಂ ಕೃಷ್ಣ, ದೇವೇಗೌಡ, ಯಡಿಯೂರಪ್ಪ, ಹಾಗೂ ಈಗಿನ ಸಿಎಂ ಸಿದ್ದರಾಮಯ್ಯ ಕೂಡಾ ಈಗಣೇಶನಿಗೆ ಪೂಜೆ ಸಲ್ಲಿಸಿಯೇ ತಮ್ಮ ಪ್ರಚಾರ ಕಾರ್ಯಾರಂಬ ಮಾಡಿದ್ರು. ಜೊತೆಗೆ ಸಾವಿರಾರು ಜನರು ತಮ್ಮ ಇಷ್ಟಾರ್ಥಗಳ ಈಡೇರಿಸುವಂತೆ ಗಣೇಶನ ಬಳಿ ಬಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಯಶಸ್ವಿಯಾಗಿದ್ದಾರೆ. ಇಂದಿಗೂ ಕೂಡಾ ಚುನಾವಣೆಗಳು ಬಂದ್ರೆ ರಾಜಕೀಯ ನಾಯಕರುಗಳು ಇಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿ ಒಂದೆಜ್ಜೆ ಮುಂದಿಡ್ತಾರೆ. ಈ ಮಹಿಮೆ ಯುಳ್ಳ ಕುರುಡುಮಲೆಯ ಗಣಪತಿಯನ್ನು ಭಕ್ತಿಯಿಂದ ಪೂಜಿಸಿದ್ರೆ ಹರಸಿಕೊಂಡಿದ್ದು ನೆರವೇರುತ್ತೆ ಅನ್ನೋದು ರಾಜಕಾರಣಿಗಳು ನಂಬಿಕೆಯಾಗಿದೆ. ದೇವೇಗೌಡರು 1996 ರಲ್ಲಿ ಸಿಎಂ ಆಗಿ ಪ್ರಧಾನಿಯೂ ಆಗಿದ್ದರೆ, ಪಾಂಚಜನ್ಯ ಕಹಳೆಯನ್ನು ಊದಿದ ಎಸ್ ಎಂ.ಕೃಷ್ಣ 2004 ರಲ್ಲಿ ಮತ್ತು ಮೊನ್ನೆಯಷ್ಟೆ ಸಿದ್ರಾಮಯ್ಯ ಅವ್ರು ಸಿಎಂ ಆಗಿದ್ದಾರೆ. ಇವ್ರೆಲ್ಲರೂ ತಮ್ಮ ಪಾರ್ಟಿಯ ಎಲೆಕ್ಷನ್ ಪ್ರಚಾರವನ್ನು ಕುರುಡುಮಲೆಯ ಗಣೇಶನಿಗೆ ಮೊದಲ ಪೂಜೆ ಸಲ್ಲಿಸಿದ ನಂತ್ರವೇ ಶುರು ಮಾಡಿದ್ದು ಅನ್ನೋದು ಇಲ್ಲಿ ಮುಖ್ಯವಾದ ಸಂಗತಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:09 pm, Sun, 13 September 26




